ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಜೆಸಿಂತಾ ವಿಜಯಾ ಆಲ್ಫ್ರೆಡ್ ಹಾಗೂ ಉಪಮೇಯರ್ ಆಗಿ ಪುರುಷೋತ್ತಮ ಚಿತ್ರಾಪುರ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚುನಾವಣೆಗೆ ಪಾಲಿಕೆ ಪರಿಷತ್‌ನಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ರೂಪಾ ಡಿ. ಬಂಗೇರಾ ಹಾಗೂ ಕಾಂಗ್ರೆಸ್‌ನಿಂದ ಜೆಸಿಂತಾ ವಿಜಯಾ ಆಲ್ಫ್ರೆಡ್ ಸ್ಪರ್ಧಿಸಿದ್ದರು. ರೂಪಾ ಡಿ. ಬಂಗೇರ ಪರವಾಗಿ 20, ಜೆಸಿಂತಾ ಪರವಾಗಿ 37 ಮಂದಿ ಮತ ಚಲಾವಣೆಯಾಯಿತು. ಈ ಮೂಲಕ ಜೆಸಿಂತಾ ಮೇಯರ್ ಆಗಿ ಆಯ್ಕೆ ಆದರು.
ಮೈಸೂರು ಪ್ರಾದೇಶಿಕ ಆಯುಕ್ತರಾದ ಎಸ್.ಎಸ್. ಪಟ್ಟಣ ಶೆಟ್ಟಿ ಅವರು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು. ಕೈ ಎತ್ತುವ ಮೂಲಕ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಜೆಸಿಂತಾ ಪರವಾಗಿ ಶಾಸಕರಾದ ಜೆ.ಆರ್. ಲೋಬೋ, ಮೊದಿನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಸಹಿತ 38 ಮಂದಿ ಮತ ಚಲಾಯಿಸಿದರು. ವಿರುದ್ಧವಾಗಿ ಬಿಜೆಪಿಯ 20 ಸದಸ್ಯರು ಮತ ಚಲಾಯಿಸಿದರು.
ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಪುರುಷೋತ್ತಮ ಚಿತ್ರಾಪುರ ಹಾಗೂ ಬಿಜೆಪಿಯ ಕೆ. ರಾಜೇಶ್ ನಾಮಪತ್ರ ಸಲ್ಲಿಸಿದ್ದು, ಪುರುಷೋತ್ತಮ ಅವರು 37 ಮತಗಳನ್ನು ಹಾಗೂ ಕೆ. ರಾಜೇಶ್ 20 ಮತ ಪಡೆದರು. ಈ ಹಿಂದಿನ ಚುನಾವಣೆಯಂತೆಯೇ ಐದು ಮಂದಿ ಪಕ್ಷೇತರರು ಯಾರನ್ನೂ ಬೆಂಬಲಿಸದೆ ತಟಸ್ಥರಾಗಿ ಉಳಿದರು.
Click this button or press Ctrl+G to toggle between Kannada and English