ಕೊಲೆಯ ಪ್ರತೀಕಾರ : ರೌಡಿ ಕಬೀರ್ ಬರ್ಬರ ಹತ್ಯೆ

9:31 PM, Friday, February 25th, 2011
Share
1 Star2 Stars3 Stars4 Stars5 Stars
(No Ratings Yet)
Loading...

ರೌಡಿ ಕಬೀರ್ ಬರ್ಬರ ಹತ್ಯೆಮಂಗಳೂರು : ಎರಡು ಕೊಲೆ ಹಾಗೂ ಒಂಬತ್ತು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುರುಪುರ ನಿವಾಸಿ ಅಕ್ಬರ್ ಯಾನೆ ಕಬೀರ್ ಗುರುಪುರ (30ವ) ಇಂದು ಮಧ್ಯಾಹ್ನ 12.40ರ ಸುಮಾರಿಗೆ ಗುರುಪುರ ಸೇತುವೆ ಬಳಿ ಬರ್ಬರವಾಗಿ ಹಂತಕರ ತಲವಾರಿನೇಟಿಗೆ ಪ್ರಾಣ ಬಿಟ್ಟಿದ್ದಾನೆ.
ರೌಡಿ ಕಬೀರ್ ಬರ್ಬರ ಹತ್ಯೆಶುಕ್ರವಾರದ ಮಧ್ಯಾಹ್ನದ ನಮಾಜಿಗೆ ತನ್ನ ಸ್ನೇಹಿತರಾದ ನಝೀರ್ ಹಾಗೂ ಸರ್ಪರಾಜ್ ಜೊತೆಗೆ ಬೈಕಿನಲ್ಲಿ ಗುರುಪುರದ ಮಸೀದಿಯೊಂದಕ್ಕೆ ತೆರರಳುತ್ತಿದ್ದ ವೇಳೆ ಟಾಟಾ ಸುಮೋದಲ್ಲಿ ಬಂದ ಹಂತಕರ ತಂಡವೊಂದು ಹಿಂದಿನಿಂದ ಬಂದು ಬೈಕಿಗೆ  ಹೊಡೆಯಿತು, ಪರಿಣಾಮ ಬೈಕು ಚಲಾಯಿಸುತ್ತಿದ್ದ ಮೂರು ಮಂದಿ ಕೆಳಕ್ಕೆ ಉರುಳಿದರು. ನಜೀರ್ ಬೈಕ್ ಚಲಾಯಿಸುತ್ತಿದ್ದರೆ ಕಬೀರ್ ಮದ್ಯದಲ್ಲಿ ಕುಳಿತದ್ದ ಸರ್ಪರಾಜ್ ಹಿಂಬದಿಯಲ್ಲಿದ್ದ. ಹಂತಕರು ಕೆಳಕ್ಕೆ ಬಿದ್ದ ಕಬೀರ್ನನ್ನು ಮೇಲೇಳಲು ಬಿಡಲೇ ಇಲ್ಲ. ತಲವಾರಿನಿಂದ ಕೊಚ್ಚಿ ಕೊಚ್ಚಿ ಹಾಕಿದ್ದರು. ಬದುಕಲು ಹವಣಿಸುತ್ತಿದ್ದ ಕಬೀರ ಹಂತಕರ ಬಲವಾದ ತಲವಾರಿನೇಟಿಗೆ ಧರೆಗುರುಳಿ ಪ್ರಾಣವನ್ನೆ ಬಿಟ್ಟ. ನಝೀರ್ ಹಾಗೂ ಸರ್ಪರಾಜ್ ಹಂತಕರನ್ನು ತಡೆಯಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಅವರು ಕಬೀರನ್ನು ರಕ್ಷಿಸುವ ಪ್ರಯತ್ನದಲ್ಲಿ ಗಾಯಗೊಂಡರು. ಅವರನ್ನು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಬೀರನ ಮೃತ ದೇಹವನ್ನು ಎ.ಜೆ. ಆಸ್ಪತ್ರೆಗೆ ತರಲಾಯಿತು ಅಲ್ಲಿ ವೈದ್ಯರು ಅಧಿಕೃತವಾಗಿ ಆತ ಮೃತನಾಗಿದ್ದಾನೆಂದು ಘೋಷಿಸಿದರು.
ರೌಡಿ ಕಬೀರ್ ಬರ್ಬರ ಹತ್ಯೆಗುರುಪುರ ಕಬೀರ್ ಯಾನೆ ಅಕ್ಬರ್ ಕಬೀರನ ಕೊಲೆಯ ಬಗ್ಗೆ ಉಹಾಪೋಹಗಳಿದ್ದು, ಈ ಕೊಲೆ ಕ್ಯಾಂಡಲ್ ಸಂತು ಹಾಗೂ ಸುಖಾನಂದ ಶೆಟ್ಟಿ ಕೊಲೆಯ ಪ್ರತೀಕಾರ ಎಂದು ಬಲ್ಲ ಮೂಲಗಳು ಮೇಗಾ ಮೀಡಿಯಾ ನ್ಯೂಸ್ ಗೆ ಮಾಹಿತಿ ನೀಡಿದೆ. ಕ್ಯಾಂಡಲ್ ಸಂತು ಹಾಗೂ ಸುಖಾನಂದ ಶೆಟ್ಟಿ ಕೊಲೆಯಲ್ಲಿ ಕಬೀರ ಪ್ರಮುಖ ಆರೋಪಿ ಎಂದು ಈ ಹಿಂದೆಯೇ ಕೇಸು ದಾಖಲಾಗಿತ್ತು. ಕಬೀರ ಅವಿವಾಹಿತನಾಗಿದ್ದು ಅಣ್ಣ ಶರೀಪ್ ಮತ್ತು ತಮ್ಮ ಮಜೀದ ರೊಟ್ಟಿಗೆ ವಾಸಿಸುತ್ತಿದ್ದ. ತಂದೆ ತಾಯಿ ಮೊದಲೇ ತೀರಿಹೋಗಿದ್ದರು.
ರೌಡಿ ಕಬೀರ್ ಬರ್ಬರ ಹತ್ಯೆಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಸೀಮಂತ ಕುಮಾರ್ ಸಿಂಗ್, ಹೆಚ್ಚುವರಿ ಎಸ್.ಪಿ ರಮೇಶ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

ರೌಡಿ ಕಬೀರ್ ಬರ್ಬರ ಹತ್ಯೆ

ರೌಡಿ ಕಬೀರ್ ಬರ್ಬರ ಹತ್ಯೆ

ರೌಡಿ ಕಬೀರ್ ಬರ್ಬರ ಹತ್ಯೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English