ಹಳದಿಯಾದ ಹಲ್ಲುಗಳು ಒಂದೇ ದಿನದಲ್ಲಿ ಬಿಳಿ

6:55 PM, Wednesday, March 18th, 2015
Share
1 Star2 Stars3 Stars4 Stars5 Stars
(No Ratings Yet)
Loading...
teeth

ಶಾಂಘೈ : ಚೀನಾದ ಪ್ರಾಕ್ಟರ್ ಅಂಡ್ ಗ್ಯಾಂಬಲ್ ಕಂಪನಿಯು ನಿಮ್ಮ ಹಲ್ಲುಗಳು ಒಂದೇ ದಿನದಲ್ಲಿ ಮಲ್ಲಿಗೆಯಂತೆ ಫಳಫಳನೆ ಹೊಳೆಯುತ್ತವೆ. ಲಕಲಕಿಸುವ ದಂತಪಂಕ್ತಿ ಪಡೆಯಲು ನಮ್ಮ ಕಂಪನಿ ಟೂತ್ ಪೇಸ್ಟ್ ಬಳಸಿ ತಂಬಾಕು ಜಗಿದು ಹಳದಿಯಾದ ಹಲ್ಲುಗಳು, ಗುಟ್ಖಾ ಅಗಿದು ಕಂದುಬಣ್ಣವೇರಿದ ಹಲ್ಲುಗಳಿಗೆ ಇದು ಸೂಕ್ತ ಎಂದು ಜಾಹೀರಾತು ನೀಡಿದ ಕಂಪನಿಯ ಮೇಲೆ ಭಾರೀ ದಂಡ ಹೇರಲಾಗಿದೆ.

ಪ್ರಾಕ್ಟರ್ ಅಂಡ್ ಗ್ಯಾಂಬಲ್ ಕಂಪನಿಯ ಮೇಲೆ ಚೀನಾದ ಶಾಂಘೈ ರೆಗ್ಯುಲೇಟರ್ 10 ಲಕ್ಷ ಡಾಲರ್ ದಂಡ ವಿಧಿಸಿದೆ. ಯಾವುದೇ ಕಂಪನಿಯ ಮೇಲೆ ಹೇರಲಾದ ಅತೀದೊಡ್ಡ ದಂಡ ಇದೆಂದು ಚೀನಾದ ಮಾಧ್ಯದ ಬಣ್ಣಿಸಿದೆ. ದಂಡದ ಅಗಾಧತೆ ನೋಡಿ ಕಂಪನಿಯೇ ಕಂಬನಿ ಮಿಡಿಯುವಂತಾಗಿದೆ.

ತೈವಾನ್ ಟಿವಿ ತಾರೆಯನ್ನು ಬಳಸಿಕೊಂಡು ಪ್ರಾಕ್ಟರ್ ಅಂಡ್ ಗ್ಯಾಂಬಲ್ ಕಂಪನಿ ‘ಒಂದೇ ದಿನದಲ್ಲಿ ಹೊಳೆಯುವ ಹಲ್ಲುಗಳನ್ನು ಪಡೆಯಿರಿ’ ಎಂದು ಗ್ರಾಹಕರನ್ನು ಆಸೆಯ ಬಲೆಗೆ ಬೀಳಿಸಿತ್ತು. ಆದರೆ, ನಂತರ ತಿಳಿದುಬಂದಿದ್ದೇನೆಂದರೆ ಡಿಜಿಟಲ್ ತಂತ್ರಜ್ಞಾನ ಬಳಸಿ ಟಿವಿ ತಾರೆಯ ಹಲ್ಲುಗಳು ಫಳಫಳನೆ ಹೊಳೆಯುವಂತೆ ಮಾಡಲಾಗಿತ್ತು.

ಸುಳ್ಳು ಆಶ್ವಾಸನೆಗಳನ್ನು ನೀಡುತ್ತ ಗ್ರಾಹಕರ ದಿಕ್ಕು ತಪ್ಪಿಸುತ್ತಿರುವ ದೇಶೀಯ ಮತ್ತು ವಿದೇಶೀಯ ಕಂಪನಿಗಳ ಮೇಲೆ ಚೀನಾ ಹದ್ದಿನಕಣ್ಣು ಇಟ್ಟಿದೆ. ಅನೈತಿಕ ಜಾಹೀರಾತು ಯುದ್ಧದಲ್ಲಿ ತೊಡಗುವ ಕಂಪನಿಗಳನ್ನು ಮಟ್ಟಹಾಕಲು ಗ್ರಾಹಕ ರಕ್ಷಣಾ ಕಾಯ್ದೆಯನ್ನು ಬಿಗಿಗೊಳಿಸಿದೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಶಿಕ್ಷೆ ಜಾರಿಗೊಳಿಸುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English