ಪರಿಶಿಷ್ಟರ ಮೇಲೆ 54 ದೌರ್ಜನ್ಯ ಪ್ರಕರಣಗಳು ದಾಖಲು-10.75 ಲಕ್ಷ ಪರಿಹಾರ

12:11 AM, Wednesday, April 1st, 2015
Share
1 Star2 Stars3 Stars4 Stars5 Stars
(4 rating, 5 votes)
Loading...

DC

ಮಂಗಳೂರು ; ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳವರ ಮೇಲೆ ಜಿಲ್ಲೆಯಲಿ 2014-15ನೇ ಸಾಲಿನಲ್ಲಿ ಒಟ್ಟು 54 ವಿವಿಧ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಒಟ್ಟು ರೂ.10.75.000/- ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಂತೋಷ ಕುಮಾರ್ ಅವರು ತಿಳಿಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಿದರು.

ಮಂಗಳೂರಿನಲ್ಲಿ 13 ಪ್ರಕರಣಗಳು ದಾಖಲಾಗಿದ್ದು 11 ಪ್ರಕರಣಗಳೆಗೆ ಚಾರ್ಜ್‌ಶೀಟ್ ಆಗಿದೆ, ಬಂಟ್ವಾಳದಲ್ಲಿ 12 ಪ್ರಕರಣ ಇದರಲ್ಲಿ 7 ಪ್ರಕರಣಗಳಿಗೆ ಚಾರ್ಜ್‌ಶೀಟ್ ಹಾಕಲಾಗಿದೆ,ಪುತ್ತೂರಿನಲ್ಲಿ 10 ಪ್ರಕರಣ ದಾಖಲಿಸಲ್ಪಟ್ಟಿದ್ದು ,ಇದರಲ್ಲಿ 5ಪ್ರಕರಣಗಳಿಗೆ ಚಾರ್ಜ್‌ಶೀಟ್ ಹೂಡಲಾಗಿದೆ, ಬೆಳ್ತಂಗಡಿಯಲ್ಲಿ ದಾಖಲಾದ 10 ಪ್ರಕರಣಗಳಲ್ಲಿ 2 ಕ್ಕೆ ಮಾತ್ರ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ ಮತ್ತು ಸುಳ್ಯ ತಾಲೂಕಿನಲ್ಲಿ 13 ಪ್ರಕರಣಗಳಲ್ಲಿ 7ಪ್ರಕರಣಗಳಿಗೆ ಚಾರ್ಜ್‌ಶೀಟ್ ಆಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English