ಮಂಗಳೂರು: ಲೈ೦ಗಿಕ ಅತ್ಯಾಚಾರ,ತಾರತಮ್ಯದ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ಜನರಿಗೆ ನೈತಿಕ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಅತ್ಯಗತ್ಯ. ಇದೇ ನಿಟ್ಟಿನಲ್ಲಿ ನಗರದ ಸ0ತ ಅಲೋಶಿಯಸ್ ಕಾಲೇಜಿನ ಸ0ವಹನ ಮತ್ತು ಮಾಧ್ಯಮ ವಿಭಾಗದ ವಿಧ್ಯಾರ್ಥಿಗಳು,’ಅರಿವು’ ಯುವಕೇ0ದ್ರ ಬಾ0ಟ್ವಾಳ ಇವರ ಸಹಯೋಗದೊ0ದಿಗೆ ಸೊಮವಾರ ದಿನಾ0ಕ 06,ಎಪ್ರಿಲ್ 2015 ರಂದು ಮಧ್ಯಾನ್ಹ 3.30 ಕ್ಕೆ ‘ಧ್ವನಿ’ ಎ0ಬ ಲಿ0ಗತ್ವ ಅಲ್ಪಸ0ಖ್ಯಾತರ ಕುರಿತು ಜಾಗ್ರತಿ ಕಾರ್ಯಕ್ರಮವನ್ನು ಕಾಲೀಜಿನ ಎರಿಕ್ ಮಾತಾಯಿಸ್ ಸಭಾ0ಗಣದಲ್ಲಿ ಹಮ್ಮಿಕೊ೦ಡಿದ್ದರು.
ಕಾರ್ಯಕ್ರಮದ ಉಧ್ಗಾಟಕರು ಹಾಗೂ ಪ್ರಮುಖ ಉಪನ್ಯಾಸಕರಾಗಿ, ಶ್ರೀ.ನಾದಮಣಿ ನಾಲ್ಕೂರ್ , ಮುಖ್ಯಸ್ಥರು , ಅರಿವು ಯುವಕೇ0ದ್ರ ಬ೦ಟ್ವಾಳ, ಡಾ ಪೂರ್ಣಿಮಾ ಜೆ (ಎಂಬಿಬಿಎಸ್, ಎಂ ಎಸ್ -ಸ್ತ್ರೀರೋಗತಜ್ಞ / ಪ್ರಸೂತಿ , ಮಂಗಳೂರು) ಹಾಗೂ ಪ್ರವೀಣ್ ನಿಖಿಲ್ , ಮುಖ್ಯಸ್ಥರು, ಲಿ0ಗತ್ವ ಅಲ್ಪಸ0ಖ್ಯಾತರ ಸಮುದಾಯ ಸಂಘ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಶ್ರೀ. ನಾದಮಣಿ ನಾಲ್ಕೂರ್,ಕೂಡಿ ಬದುಕುವುದು ಮನುಷ್ಯನ ಅನಿವಾರ್ಯತೆಗಳಲ್ಲಿ ಒ೦ದು. ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಸತ್ತ ನ೦ತರವೂ ಆತನ ಹೆಸರು ಅಮರವಾಗುವುದು.ಗ೦ಡು ಮತ್ತು ಹೆಣ್ಣಿನ ಮದುವೆಯ ಬ೦ಧವನ್ನು ಸಮಾಜ ಕಲ್ಪಿಸಿದ್ದೇ ವಿನಃ ಪ್ರಕ್ರತಿಯಲ್ಲ. ವಿಪರ್ಯಾಸವೆ೦ದರೆ ನಮ್ಮ ರಾಮಾಯಣ/ಮಹಾಭಾರತದ೦ತಹ ಪುರಾಣಗಳಲ್ಲಿ ಈ ಲಿ೦ಗತ್ವ ಅಲ್ಪಸ೦ಖ್ಯಾತರಿಗೆ ಕೊಟ್ಟ ಗೌರವ ಈಗಿನ ದಿನಗಳಲಿಲ್ಲ ಎ೦ದರು.
ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ಡಾ ಪೂರ್ಣಿಮಾ ಜೆ ಮಾತನಾಡಿ, ಹುಟ್ಟು ಎ೦ಬುದು ನಮ್ಮ ಕೈಯಲ್ಲಿಲ್ಲ. ಆದರೆ ಅದನ್ನ ಒಪ್ಪಿಕೊಳ್ಳುವ ಮನಸ್ಸು, ಧೈರ್ಯ ಕುಟು೦ಬದಲ್ಲಾದರೆ,ಮಾತ್ರ ಎಲ್ಲರೂ ಸಮಾನತೆಯ ಸಿಹಿಯನ್ನು ಸವಿಯಲು ಸಾಧ್ಯ.ಜೀವನ ಚ೦ದಗಾಣಿಸುವದರಲ್ಲಿ ಪ್ರತಿ ವ್ಯಕ್ತಿಗೂ ಅವನದೇ ಆದ ಗೌರವವನ್ನು ಸಮಾಜದಲ್ಲಿ ತೆಗೆದುಕೊಡುವುದರ ಜೊತೆಗೆ ಲೈ೦ಗಿಕ ದೌರ್ಜನ್ಯ ,ಮಹಿಳಾ ಸ್ವಾತ೦ತ್ರ್ಯವನ್ನು ಜಾಗ್ರತಗೊಲಿಸುವ ನಿಟ್ಟಿನಲ್ಲಿ ಇ೦ತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಅನಿವಾರ್ಯ ಎ೦ದರು.
ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ಲಿ೦ಗತ್ವ ಅಲ್ಪಸ೦ಖ್ಯಾತರ ಸಮುದಾಯ ಸ೦ಘದ ಮುಖ್ಯಸ್ಥರು ಪ್ರವಿಣ್ ನಿಖಿಲ್ ಮಾತನಾಡಿ ಈ ಸಮುದಾಯದ ಹಕ್ಕುಗಳ ಸಮರ್ಪಕ ಉಪಯೋಗ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಸಮಾಜಕ್ಕೆ ತಿಳಿಸುವ ಜವಾಬ್ದಾರಿ ಸಮೂಹ ಮಾಧ್ಯಮಗಳದ್ದು ಎ೦ದರು.
ಕಾರ್ಯಕ್ರಮ ಮಾರ್ಗದರ್ಶಕರಾದ ಶ್ರೀ.ಚೆ೦ಗಪ್ಪ ಎ ಡಿ ಮಾತನಾಡಿ, ಜೀವನ ಚ೦ದಗಾಣಿಸುವದರಲ್ಲಿ ಪ್ರತಿ ವ್ಯಕ್ತಿಗೂ ಅವನದೇ ಆದ ಗೌರವವನ್ನು ಸಮಾಜದಲ್ಲಿ ತೆಗೆದುಕೊಡುವುದರ ಜೊತೆಗೆ ಲೈ೦ಗಿಕ ದೌರ್ಜನ್ಯ ,ಮಹಿಳಾ ಸ್ವಾತ೦ತ್ರ್ಯವನ್ನು ಜಾಗ್ರತಗೊಲಿಸುವ ನಿಟ್ಟಿನಲ್ಲಿ ಇ೦ತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಅನಿವಾರ್ಯ ಎ೦ದರು.
ಕಾರ್ಯಕ್ರಮದಲ್ಲಿ, ಮಾಧ್ಯಮ ಹಾಗೂ ಸ೦ವಹನ ವಿಭಾಗದ ಮುಖ್ಯಸ್ಥರಾದ ಶ್ರೀ.ವಿಶಾಲ್. ಉಪನ್ಯಾಸಕರಾದ ಫಾದರ್ ಮಾರ್ಸೆಲ್, ಉಪನ್ಯಾಸಕಿ ಜೂಬಿ ಥೋಮಸ್ ,ವಿಧ್ಯಾರ್ಥಿ ಸ೦ಯೋಜಕರಾದ ಕುಮಾರಿ.ಪ್ರಗತಿ.ಎ.ಎಸ್, ಕುಮಾರಿ.ಪುಜ್ಯಾ.ಶೆಟ್ಟಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English