ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಎರಡು ದಿನದ ಗೋ ಸಮ್ಮೆಳನಕ್ಕೆ ಚಾಲನೆ

10:33 PM, Saturday, February 26th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಎರಡು ದಿನದ ಗೋ ಸಮ್ಮೆಳನಕೋಣಾಜೆ : ಪಜೀರು ಬೀಜಗುರಿಯಲ್ಲಿ ಗೋವನಿತಾಶ್ರಯ ಟ್ರಸ್ಟ್ ವತಿಯಿಂದ ಫೆ.26 ಮತ್ತು 27 ರಂದು ನಡೆಯಲಿರುವ ಎರಡು ದಿನದ ಗೋ ಸಮ್ಮೆಳನ ವನ್ನು ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ ಅವರು “ಕಪಿಲಾ” ದನಕ್ಕೆ ಆರತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಎರಡು ದಿನದ ಗೋ ಸಮ್ಮೆಳನ“ಗೋವರ್ದನ” ಎಂಬ ಸಂಚಿಕೆ ಬಿಡುಗಡೆಯನ್ನು ಮಂಗಳೂರು ವಿವಿಯ ಕುಲಸಚಿವ ಪ್ರೊ.ಕೆ.ಚಿನ್ನಪ್ಪ ಗೌಡ ನರವೇರಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಂದು ದೇಶವು ನಗರ ಕೇಂದ್ರ ಆಧರಿತ ಹಾಗೂ ಗ್ರಾಮೀಣ ಕೃಷಿ ಆಧರಿತ ವಿನ್ಯಾಸದಲ್ಲಿ ಬದುಕು ಕಂಡುಕೊಳ್ಳಲು ಸಾಧ್ಯವಿದ್ದು ಭಾರತದ ಮಟ್ಟಿಗೆ ಗ್ರಾಮಿಣ ಕೃಷಿ ಆಧರಿತ ಬದುಕು ಕಂಡುಕೊಳ್ಳುವುದು ಉತ್ತಮ ಆಯ್ಕೆ ಎಂದು ಹೇಳಿದರು.
ಎರಡು ದಿನದ ಗೋ ಸಮ್ಮೆಳನನಮ್ಮ ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯ ನಂತರದ ಭಾರತವನ್ನು ನಗರ ಕೇಂದ್ರೀಕೃತವಾಗಿ ಕಟ್ಟಬಹುದು ಎಂಬ ನಿಲುವು ಹೊಂದಿದ್ದ ನೆಹರೂ ಅವರ ದೂರದೃಷ್ಟಿ ಇಲ್ಲಿ ಸಮಸ್ಯೆಗೆ ಕಾರಣಗಳು ಎಂಬುದಕ್ಕಿಂತ ಗ್ರಾಮೀಣ ಕೃಷಿ ಆಧರಿತ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುವುದು ಉತ್ತಮ ಎಂಬ ಮೋಹನದಾಸ ಕರಮಚಂದ ಗಾಂದೀಜಿ ಅವರ ನಿಲುವು ನಮಗೆ ಅನಿವಾರ್ಯವಾಗಿದೆ. ಸ್ತ್ರೀ ಕೇಂದ್ರೀಕೃತ, ಗೋವು ಕೇಂದ್ರಿತ ಚಿಂತನೆಗೆ ತಾಯ್ತನದ ಪ್ರೀತಿ ಇದೆ. ಯಾಕೆಂದರೆ ಅದಕ್ಕೆ ಪೊರೆಯುವ ಹಂಬಲವಿದೆ ಎಂದರು.
ಪ್ರತಿಯೊಂದು ಘಟಕವನ್ನು ಸಮಾನವಾಗಿ ಕಾಣುವುದರಲ್ಲಿ ದೇಶೀಯ ಸಂಸ್ಕೃತಿ ಅಡಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಘಟಕ ವಿಜೃಂಭಿಸುತ್ತಿದ್ದು ಸಸ್ಯ ಘಟಕ ಹಾಗೂ ಪ್ರಾಣಿ ಘಟಕವನ್ನು ಕೆಡಿಸಲಾಗುತ್ತಿರುವುದು ಈ ದೇಶದ ದುರಂತ ಎಂದು ಆತಂಕ ವ್ಯಕ್ತಪಡಿಸಿದರು.
ಎರಡು ದಿನದ ಗೋ ಸಮ್ಮೆಳನನಂತರ ಮಾತನಾಡಿದ ನಾಗ್ಪುರದ ಗೋ ಅನುಸಂಧಾನ ಕೇಂದ್ರದ ಸುನಿಲ್ ಮಾನ್ಸಿಂಗ್ ಅವರು ನೆರೆಯ ಆಂಧ್ರಪ್ರದೇಶದ ಮೂರು ಸಾವಿರ ಗ್ರಾಮಿಗಳ ಸುಮಾರು 25ಲಕ್ಷ ಎಕರೆ ಭೂಮಿಯಲ್ಲಿ ಸಾವಯವ ರಸಗೊಬ್ಬರಗಳನ್ನು ಬಳಸಿ ಸಾವಯವ ಕೃಷಿಗಳನ್ನು ಮಾತ್ರ ಮಾಡಲಾಗುತ್ತಿದ್ದು ಆ ಪ್ರದೇಶವನ್ನು ರಾಸಾಯನಿಕ ಮುಕ್ತ ಗ್ರಾಮವೆಂದು ಘೋಷಿಸಲಾಗಿದೆ. ಅಂತಹ ಕ್ರಾಂತಿ, ಜಾಗೃತಿ ದೇಶದ ಪ್ರತಿ ಭಾಗದಲ್ಲೂ ನಡೆಯಬೇಕಿದೆ ಎಂದರು.
ಎರಡು ದಿನದ ಗೋ ಸಮ್ಮೆಳನವಿದೇಶಿಯರು ಗೋವಿನಿಂದ ತಯಾರಿಸುವ ಗೋಮೂತ್ರ ಅರ್ಕ, ಘನವಟಿ, ಸಾಬೂನು, ದಂತ ಶುದ್ಧ ಗೊಳಿಸುವ ಪೌಡರ್, ಗೋಮಯ ತೈಲ ಸೇರಿದಂತೆ ಪಂಚಗವ್ಯ ಉತ್ಪನ್ನಗಳ ಕಡೆಗೆ ಆಕಷರ್ಿತರಾಗುತ್ತಿದ್ದಾರೆ. ಹಾಗಾಗಿ ಪ್ರತಿ ಮನೆಯಲ್ಲೂ ಗೋವು ಸಾಕಣೆ ಹಾಗೂ  ರಕ್ಷಣೆಗೆ ಎಲ್ಲರು ಕಟಿಬದ್ಧರಾಗಬೇಕು ಎಂದು ನುಡಿದರು.
ಉಪ ಸಭಾಪತಿ ಎನ್.ಯೋಗೀಶ್ ಭಟ್  ಮಾತನಾಡಿ ರಾಜ್ಯದಲ್ಲಿ ಈ ಬಾರಿ ಮಂಡಿಸಲಾದ ಬಜೆಟ್ ಕೃಷಿ ಬಜೆಟ್ ಆಗಿದ್ದು ಗೋಸಂಪತ್ತಿಗೂ ಆದ್ಯತೆ ನೀಡಲಾಗಿದೆ. ಜತೆಗೆ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಮಂಡನೆಗೊಂಡು ರಾಷ್ಟ್ರಪತಿ ಅಂಕಿತ ಎದುರುನೋಡುತ್ತಿದ್ದೇವೆ ಎಂದು ಹೇಳಿದರು
ಎರಡು ದಿನದ ಗೋ ಸಮ್ಮೆಳನಶ್ರೀಕ್ಷೇತ್ರ ಮಾಣಿಲಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ, ಹಾವೇರಿಯ ಶ್ರೀ ಕ್ಷೇತ್ರ ಗುಡ್ಡದ ಮಲ್ಲಾಪುರದ ಹಿರಿಯ ಹಾಗೂ ಕಿರಿಯ ಸ್ವಾಮೀಜಿ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಉದ್ಯಮಿ ರಘುನಾಥ ಶೇಟ್, ಅಧ್ಯಕ್ಷ ಹಿತೇಂದ್ರ ಜೆ.ಕೊಟ್ಟಾರಿ, ಟ್ರಸ್ಟಿ ಎನ್.ಶ್ರೀಧರ್ ಭಟ್ , ಕೋಶಾಧ್ಯಕ್ಷೆ ಡಾ.ಅನಂತಲಕ್ಷ್ಮಿ ಭಟ್, ಟ್ರಸ್ಟಿ ಸುರೇಶ್ ಜೈನ್, ರಘುರಾಮ ಕಾಜವ ಉಪಸ್ಥಿತರಿದ್ದರು.
ಮೊದಲ ಹಂತದಲ್ಲಿ ವಿದ್ವಾನ್ ಪಂಜ ಭಾಸ್ಕರ ಭಟ್ ಅವರು “ಧಾಮರ್ಿಕ ನೆಲೆಯಲ್ಲಿ ಗೋವಿನ ಪಾತ್ರ” ಕುರಿತಾಗಿ ವಿಚಾರ ಮಂಡಿಸಿದರು. ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಸ್ವಾಗತಿಸಿದರು. ಕಾರ್ಯದಶರ್ಿ ಡಾ.ಪಿ.ಅನಂತಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎರಡು ದಿನದ ಗೋ ಸಮ್ಮೆಳನ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English