ತೌಡುಗೋಳಿ (ನರಿಂಗಾನ): ಆಧುನಿಕತೆ ಬೆಳೆದರೂ ದೈವದೇವರಲ್ಲಿ ನಂಬಿಕೆ ಕಡಿವೆಯಾಗಲಿಲ್ಲ, ಹತ್ತು ಜನ ಸೇರಿದರೆ ಮಣ್ಣಿನ ಪಾವಿತ್ಯತೆ ಹೆಚ್ಚುತ್ತದೆ ಎನ್ನುವುದಕ್ಕೆ ತೌಡುಗೋಳಿಯ ಶ್ರೀ ದುರ್ಗಾ ದೇವಿಯ ಸಾನಿಧ್ಯವೇ ಸಾಕ್ಷಿ ಎಂದು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ರಾಜ ಬೆಳ್ಚಪ್ಪಾಡ ಹೇಳಿದರು.
ಅವರು ತೌಡುಗೋಳಿಯ ಶ್ರೀ ದುರ್ಗಾ ದೇವಿ ಕ್ಷೇತ್ರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಕ್ಷೇತ್ರದ ನವೀಕರಣಕ್ಕಾಗಿ ಜೀರ್ಣೋದ್ಧಾರ ಸಮಿತಿ ರಚನೆ ಹಾಗೂ ಧಾರ್ಮಿಕ ಸಭೆsಯನ್ನು ಉಧ್ಘಾಟಿಸಿ ಮಾತನಾಡಿದರು.
ಧಾರ್ಮಿಕತೆಯಲ್ಲಿ ಒಗ್ಗಟ್ಟು ಬಳೆಯ ಬೇಕಾದರೆ ಸಂಘಟನಾತ್ಮಕ ಮನೋಭಾವ ಬೇಕು, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಸೂರ‍್ಯ ಚಂದ್ರರು ಇರುವ ಕಾಲದವರೆಗೂ ತೌಡುಗೋಳಿಯ ಈ ಕ್ಷೇತ್ರ ಬೆಳಗಲಿ ಎಂದು ಆಶೀರ್ವದಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕ ತ, ಕನ್ನಡ ರತ್ನ ಕಲಾವಿದ ರವಿ ಅಲೆವೂರಾಯ ವರ್ಕಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ಧರ್ಮ ಭಾರತದಲ್ಲಿ ಮಾತ್ರ ಇರೋದು. ಬೇರೆ ಕಡೆ ಧರ್ಮ ಇಲ್ಲ. ಧರ್ಮ ಎಂಬ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಯಾರೋ ಒಬ್ಬ ಅಭಿಪ್ರಾಯ ಮಂಡಿಸಿದರೆ, ಅದನ್ನು ಬೆಂಬಲಿಸಿದರೆ ಅದು ಮತ ಆಗುತ್ತದೆ. ಹಿಂದೂ ಧರ್ಮ ಎಂಬುದು ಸರ್ವಶ್ರೇಷ್ಠ ಜೀವನ ಪದ್ಧತಿ. ಹಿಂದೂ ಧರ್ಮದ ಶ್ರೇಷ್ಠತೆ ತಿಳಿಯಬೇಕಾದರೆ ಧಾರ್ಮಿಕ ಸಭೆಗಳು ಸಹಕಾರಿಯಾಗಿದ್ದು ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿದೆ ಎಂದರು.
ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಉತ್ಸವ, ಪೂಜೆ, ಪುನಸ್ಕಾರ, ಧಾರ್ಮಿಕ, ಸಾಂಸ್ಕ ತಿಕ ಕಾರ್ಯಕ್ರಮಗಳು ಆ ಕ್ಷೇತ್ರವನ್ನು ಜೀವಂತಿಕೆಯಲ್ಲಿಡುತ್ತದೆ. ಧರ್ಮವನ್ನು ಉಳಿಸುವ ಕೆಲಸದಲ್ಲಿ ಜೀಜಾಬಾಯಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಆಕೆ ಶಿವಾಜಿಗೆ ಬಾಲ್ಯದ ದಿನಗಳಲ್ಲಿಯೇ ಅಭಿಮನ್ಯು, ಬಬ್ರುವಾಹನನ ಕಥೆ ಹೇಳಿ ಹಿಂದು ಧರ್ಮವನ್ನು ಉನ್ನತಿಗೆ ಕೊಂಡೊಯ್ಯಬೇಕು ಎಂಬ ಪಾಠ ಹೇಳಿಕೊಟ್ಟಿದ್ದಳು. ಸಮರ್ಥ ಗುರು ರಾಮದಾಸರು ಶಿವಾಜಿಗೆ ಅಂತಹ ಪಾಠವನ್ನು ಹೇಳಿಕೊಟ್ಟಿದ್ದರು. ಹಾಗಾಗಿ ಯೋಗ್ಯ ತಾಯಿ ಹಾಗೂ ಯೋಗ್ಯ ಗುರುವಿನಿಂದ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಯೋಗ ಭಾರತದ ಕೊಡುಗೆಯಾದರೂ ಅದಕ್ಕೆ ಅಮೇರಿಕಾದಂತಹ ಪ್ರಭಾವಿ ರಾಷ್ಟ್ರಗಳು ಸರ್ಟಿಫಿಕೇಟ್ ಕೊಟ್ಟರೆ ಮಾತ್ರ ಅದು ಶ್ರೇಷ್ಠ ಎಂಬ ಭಾವನೆ ಜನರಲ್ಲಿ ಬಂದು ಬಿಟ್ಟಿದೆ. ಅಷ್ಟಕ್ಕೂ ಅಮೇರಿಕಾದಲ್ಲೂ ಯೋಗ ಕಲಿಸಿಕೊಡುವುದು ಭಾರತೀಯ ಯೋಗಗುರುಗಳು. ಹಿಂದೆ ಹೊಟ್ಟೆ ತುಂಬ ತಿನ್ನಲು ಕಷ್ಟವಿತ್ತು. ಆದರೆ ಜೀರ್ಣಿಸಿಕೊಳ್ಳಲು ಶಕ್ತಿ ಇತ್ತು. ಆದರೆ ಈಗ ತಿಂದದ್ದನ್ನು ಕರಗಿಸಲು ನಾನಾ ಕಸರತ್ತುಗಳಿಗೆ ಮೊರೆ ಹೋಗುತ್ತಿರುವವರು ಯೋಗ ಶಿಕ್ಷಣದ ಮಹತ್ವ ಅರಿತುಕೊಂಡಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ವರ್ಕಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ನಿವೃತ್ತ ಶಿಕ್ಷಕ ದೇವಪ್ಪ ಶೆಟ್ಟಿ ಚಾವಡಿಬೈಲ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಗೋವಿಂದ ಗುರುಸ್ವಾಮಿ, ಉಳ್ಳಾಲ ಹಾಗೂ ಮಂಜೇಶ್ವರ ವಲಯ ಧರ್ಮಜಾಗೃತಿ ಅಭಿಮಾನಿ ಬಳಗದ ಅಧ್ಯಕ್ಷ ಶ್ರೀ ಕೃಷ್ಣ ಶಿವಕೃಪ, ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಆಡಳಿತ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಕೈರಂಗಳ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ನಾರಾಯಣ ಭಟ್ ಲಾಡ.
ನರಿಂಗಾನ ವಿದ್ಯಾನಗರದ ಶ್ರೀ ಮಲರಾಯ ಮಿತ್ರಮಂಡಳಿಯ ಗೌರವಾಧ್ಯಕ್ಷ ಶಂಕರ್ ಭಟ್ ದೋಸೆಮನೆ, ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಅಡಪ ಭಂಡಾರಮನೆ, ನರಿಂಗಾನದ ಶ್ರೀ ದುರ್ಗಾಪರಮೇಶ್ವರೀ ಮಠದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ನಾರಾಯಣ ಶೆಟ್ಟಿ, ಪತ್ರಕರ್ತ, ಕಲಾವಿದ ನಾಗರಾಜ್ ರಾವ್ ವರ್ಕಾಡಿ, ವಿಶ್ವ ಹಿಂದು ಪರಿಷತ್ ದೇವಂದಪಡ್ಪು ಘಟಕ ಅಧ್ಯಕ್ಷ ಐತಪ್ಪ ಶೆಟ್ಟಿ ದೇವಂದಪಡ್ಪು, ಉದ್ಯಮಿ ಕೆ. ಸತೀಶ್ ಆಚಾರ್ಯ ಉಜಿರೆ, ಮೊಂಟೆಪದವು ಶ್ರೀ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷ ಈಶ್ವರ ನಟ್ಟಿಹಿತ್ಲು, ವರ್ಕಾಡಿ ಪಾವುಲ ಸಂತೋಷ್ ಫ್ರಂಡ್ಸ್ ಕ್ಲಬ್‌ನ ಅಧ್ಯಕ್ಷ ದಿನೇಶ್ ಪಾವುಲ, ತೌಡುಗೋಳಿಯ ನರಿಂಗಾನ ಯುವಕ ಮಂಡಲದ ಅಧ್ಯಕ್ಷ ನವೀನ್ ಶೆಟ್ಟಿ ಮಂಗಲ್ಪಾಡಿ, ವರ್ಕಾಡಿ ಶ್ರೀ ಕಾವೀ ಕೃಪಾ ಸಂಕೇತ್ ಮಿತ್ರಮಂಡಳಿಯ ಆಧ್ಯಕ್ಷ ಕಿಶೋರ್ ಶೆಟ್ಟಿ ವರ್ಕಾಡಿ, ನರಿಂಗಾನ ವಿದ್ಯಾನಗರದ ಶ್ರೀ ಅಯ್ಯಪ್ಪ ಭಕ್ತವೃಂದದ ಗುರುಸ್ವಾಮಿ ರವೀಂದ್ರ ಗುರುಸ್ವಾಮಿ, ಮೊಂಟೆಪದವು ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಸಂಚಾಲಕ ದಾಮೋದರ ಬೆದ್ರೊಳಿಕೆ, ಯುವ ಉದ್ಯಮಿ ಜಯಪ್ರಕಾಶ್ ಶೆಟ್ಟಿ ವರ್ಕಾಡಿ ಭಂಡಾರಮನೆ ಹಾಗೂ ವಾಸುದೇವ ಮಯ್ಯ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶಿವಪ್ರಸಾದ್ ತೌಡುಗೋಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾಗವತ ಆನಂದ ಎಸ್ ಸರ್ಕುಡೇಲು ವಂದಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರವಿ ಅಲೆವೂರಾಯ ವರ್ಕಾಡಿ ಹಾಗೂ ಬಳಗದಿಂದ ‘ದಕ್ಷ ಮಖ’ ಯಕ್ಷಗಾನ ತಾಳಮದ್ದಳೆ ಜರುಗಿತು.
Click this button or press Ctrl+G to toggle between Kannada and English