ಕಲ್ಲು ಕ್ವಾರಿ ಗುಂಡಿಗಳ ಸುತ್ತ ರಕ್ಷಣಾಗೋಡೆ ನಿರ‍್ಮಿಸಲು ರೂ.22 ಲಕ್ಷ ಬಿಡುಗಡೆ-ಎ.ಬಿ.ಇಬ್ರಾಹಿಂ

12:07 AM, Thursday, June 18th, 2015
Share
1 Star2 Stars3 Stars4 Stars5 Stars
(5 rating, 4 votes)
Loading...

quari

ಮಂಗಳೂರು : ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಹಾಗೂ ಸ್ಥಗಿತಗೊಂಡಿರುವ ಕಲ್ಲು ಕ್ವಾರಿಗಳು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ತೊಂದರೆಯಾಗದಂತೆ ಅವುಗಳ ಸುತ್ತ ಆವರಣಗೋಡೆ ನಿರ‍್ಮಿಸಿ ರಕ್ಷಣೆ ಒದಗಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಈಗಾಗಲೆ ಎರಡು ಸುತ್ತಿನ ಸಭೆಗಳನ್ನು ನಡೆಸಿ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದರೂ ಇನ್ನೂ ಕಾರ್ಯಗತವಾದ ಬಗ್ಗೆ ಮಂಗಳವಾರ ಸಂಜೆ ತಮ್ಮ ಕಚೇರಿಯಲ್ಲಿ ಈ ಬಗ್ಗೆ ನಡೆದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಕೂಡಲೇ ತಡೆಗೋಡೆ ನಿರ‍್ಮಿಸಲು ಜಿಲ್ಲಾಧಿಕಾರಿಗಳು ಕಾರ್ಪಸ್ ಫಂಡ್‌ನಿಂದ ರೂ.22 ಲಕ್ಷಗಳನ್ನು ಬಿಡುಗಡೆಮಾಡಿ ಚೆಕ್ ವಿತರಿಸಿದರು.

ಇನ್ನು ಒಂದು ವಾರದೊಳಗೆ ಹಾಗೂ ಖಾಸಗಿ ಜಮೀನುಗಳಲ್ಲಿರುವ ಕಲ್ಲು ಕ್ವಾರಿಗಳ ಸುತ್ತ ತಡೆಗೋಡೆ ನಿರ‍್ಮಿಸಲು ಕಲ್ಲು ಕ್ವಾರಿ ಮಾಲಿಕರಿಗೆ ನೋಟೀಸ್ ಜಾರಿಮಾಡುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚಿಸಿದ್ದು, ಈಗ ಬಿಡುಗಡೆ ಮಾಡಿರುವ ಹಣದಿಂದ ಬಿ.ಪಿ.ಎಲ್. ಫಲಾನುಭವಿಗಳ ಜಮೀನಿನಲ್ಲಿರುವ ಹಾಗೂ ಸರ್ಕಾರದ ಜಾಗದಲ್ಲಿರುವ ಕಲ್ಲು ಕ್ವಾರಿಗಳ ತಡೆಗೋಡೆಯನ್ನು ನಿರ‍್ಮಿಸಲು ಮುಂದಾಗುವಂತೆ ಅವರು ಸೂಚಿಸಿದ್ದಾರೆ.

ಬಂಟ್ವಾಳ ತಾಲುಕಿಗೆ ರೂ.೫ ಲಕ್ಷ, ಬೆಳ್ತಂಗಡಿ ರೂ.9 ಲಕ್ಷ, ಮಂಗಳೂರು ರೂ.8 ಲಕ್ಷ, ಪುತ್ತೂರು ರೂ.5೫ ಲಕ್ಷ ಮತ್ತು ಸುಳ್ಯ ತಾಲೂಕಿಗೆ ರೂ.2 ಲಕ್ಷ ಅನುದಾನವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಬಿಡುಗಡೆಗೊಳಿಸಿ ಚೆಕ್‌ಗಳನ್ನು ವಿತರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೮೫೮ ಕಲ್ಲು ಕ್ವಾರಿಗಳಿದ್ದು ಅವುಗಳಲ್ಲಿ 172 ಕ್ವಾರಿಗಳನ್ನು ಮುಚ್ಚಲಾಗಿದ್ದು 179 ಕ್ವಾರಿಗಳಿಗೆ ತಂತಿ ಬೇಲಿ ಹಾಕಲಾಗಿದೆ ಇನ್ನು ಬಾಕಿ ಇರುವ 507 ಕ್ವಾರಿಗಳ ಸುತ್ತ ತಡೆಗೋಡೆ ನಿರ‍್ಮಿಸಬೇಕಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಙಾನ ಇಲಾಖೆ ಉಪನಿರ್ದೇಶಕ ಎನ್.ರಾಮಪ್ಪ ಅವರು ಸಭೆಯಲ್ಲಿ ತಿಳಿಸಿದರು.

ತಾಲೂಕುವಾರು ಬಂಟ್ವಾಳ ಒಟ್ಟು 210ಮುಚ್ಚಿರುವುದು 16, ತಂತಿಬೇಲಿ ಹಾಕಿರುವುದು 13, ಬಾಕಿ 181, ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 72 ಮುಚಿದ್ದು 41 ತಂತಿ ಬೇಲಿ ಹಾಕಿದ್ದು 22, ಬಾಕಿ 9, ಮಂಗಳೂರು ಒಟ್ಟು 382 ಇದ್ದು ಇದರಲ್ಲಿ 19ನ್ನು ಮುಚ್ಚಲಾಗಿದ್ದು 93ಕ್ಕೆ ತಂತಿ ಬೇಲಿ ಅಳವಡಿಸಿದ್ದು 270 ಬಾಕಿ ಇವೆ, ಪುತ್ತೂರು ಒಟ್ಟು 145 ಇದರಲ್ಲಿ 68 ಮುಚ್ಚಲಾಗಿದೆ 51 ಕ್ಕೆ ತಂತಿ ಬೇಲಿ ಇದ್ದು 26 ಬಾಕಿ ಇರುತ್ತದೆ ಸುಳ್ಯದಲ್ಲಿ 49 ಕಲ್ಲು ಕ್ವಾರಿಗಳು ಇದ್ದು 28ನ್ನು ಮುಚ್ಚಲಾಗಿದೆ 21 ಕ್ವಾರಿಗಳಿಗೆ ತಡೆಗೋಡೆ ನಿರ‍್ಮಿಸಲು ಬಾಕಿ ಇದೆ ಎಂದು ಆಯಾ ತಾಲೂಕುಗಳ ತಹಶೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐ.ಪಿ.ಶ್ರೀವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಾಗೇಂದ್ರ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English