ಜಿಲ್ಲಾಧಿಕಾರಿಯಾಗಿ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ: ಎ.ಬಿ. ಇಬ್ರಾಹಿಂ

Monday, August 1st, 2016
K-G-Jagadeesh

ಮಂಗಳೂರು: ಆಡಳಿತದ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಆಶಯದೊಂದಿಗೆ ಜಿಲ್ಲಾಧಿಕಾರಿಯಾಗಿ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದು ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು. ದ.ಕ. ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈಗ ಕರ್ನಾಟಕ ಸರಕಾರದ ಸಾರಿಗೆ ಆಯುಕ್ತರಾಗಿ ಭಡ್ತಿ ಪಡೆದು ವರ್ಗಾವಣೆಗೊಂಡಿರುವ ಎ.ಬಿ. ಇಬ್ರಾಹಿಂ ಅವರು ಶನಿವಾರ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ದ.ಕ. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಬೀಳ್ಕೊಡುಗೆ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು. ಆಡಳಿತದ ಅನುಷ್ಠಾನದ ಸಂದರ್ಭಗಳಲ್ಲಿ ಕೆಲವು […]

ವರ್ಗಾವಣೆ ಕುರಿತು ಹಬ್ಬಿದ್ದ ಸುದ್ದಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ಪಷ್ಟನೆ

Wednesday, July 27th, 2016
A-B-Ibrahim

ಮಂಗಳೂರು: ತಮ್ಮ ವರ್ಗಾವಣೆ ಕುರಿತು ಹಬ್ಬಿದ್ದ ಸುದ್ದಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ಪಷ್ಟನೆ ನೀಡಿದ್ದಾರೆ. ಎ.ಬಿ.ಇಬ್ರಾಹಿಂ ಅವರ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಡೆ ನೀಡಿದ್ದಾರೆ ಎಂಬ ಸುದ್ದಿಗಳನ್ನು ಅವರು ತಳ್ಳಿ ಹಾಕಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಎ.ಬಿ.ಇಬ್ರಾಹಿಂ ಅವರ ವರ್ಗಾವಣೆಗೆ ತಡೆ ನೀಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಒನ್ ಇಂಡಿಯಾಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ವರ್ಗಾವಣೆಗೆ ತಡೆ ನೀಡಿಲ್ಲ. ಡಾ.ಕೆ.ಜಿ.ಜಗದೀಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ’ ಎಂದು ಹೇಳಿದ್ದಾರೆ. ಕಳೆದ ವಾರ […]

ರೈತರ ಸಾಲ ಮರುಪಾವತಿ -ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಿ: ಎ.ಬಿ.ಇಬ್ರಾಹಿಂ

Thursday, August 13th, 2015
Farmers Meeting

ಮಂಗಳೂರು : ಸಹಕಾರ ಸಂಘಗಳು, ಸಹಕಾರ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮರುಪಾವತಿ ಅವಧಿ ಮುಗಿದಿದ್ದರೆ ಅಂತಹ ರೈತರು ತಮ್ಮ ಸಾಲದ ಅವಧಿಯನ್ನು ವಿಸ್ತರಿಸುವಂತೆ/ಸಾಲ ಮರುಹೊಂದಾಣಿಕೆ ಮಾಡಿಕೊಳ್ಳಲು ಸಂಬಂಧಿಸಿದ ಬ್ಯಾಂಕುಗಳಿಗೆ /ಸಹಕಾರ ಸಂಘಗಳಿಗೆ ಕೋರಿಕೆ ಪತ್ರಗಳನ್ನು ಸಲ್ಲಿಸಿದಲ್ಲಿ ಸಂಬಂಧಿಸಿದ ಹಣಕಾಸು ಸಂಸ್ಥೆಗಳು ಸಾಲಮರುಪಾವತಿಗೆ ರೈತರಿಗೆ ನೋಟೀಸ್‌ಗಳನ್ನು ನೀಡದಂತೆ ಬಲವಂತದ ಸಾಲ ವಸೂಲಿಗೆ ಮುಂದಾಗದಂತೆ ತಡೆಯಬಹುದೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರೈತರಿಗೆ ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ರೈತ ಮುಖಂಡರೊಂದಿಗೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು. […]

ಕಲ್ಲು ಕ್ವಾರಿ ಗುಂಡಿಗಳ ಸುತ್ತ ರಕ್ಷಣಾಗೋಡೆ ನಿರ‍್ಮಿಸಲು ರೂ.22 ಲಕ್ಷ ಬಿಡುಗಡೆ-ಎ.ಬಿ.ಇಬ್ರಾಹಿಂ

Thursday, June 18th, 2015
quari

ಮಂಗಳೂರು : ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಹಾಗೂ ಸ್ಥಗಿತಗೊಂಡಿರುವ ಕಲ್ಲು ಕ್ವಾರಿಗಳು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ತೊಂದರೆಯಾಗದಂತೆ ಅವುಗಳ ಸುತ್ತ ಆವರಣಗೋಡೆ ನಿರ‍್ಮಿಸಿ ರಕ್ಷಣೆ ಒದಗಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಈಗಾಗಲೆ ಎರಡು ಸುತ್ತಿನ ಸಭೆಗಳನ್ನು ನಡೆಸಿ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದರೂ ಇನ್ನೂ ಕಾರ್ಯಗತವಾದ ಬಗ್ಗೆ ಮಂಗಳವಾರ ಸಂಜೆ ತಮ್ಮ ಕಚೇರಿಯಲ್ಲಿ ಈ ಬಗ್ಗೆ ನಡೆದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಕೂಡಲೇ ತಡೆಗೋಡೆ ನಿರ‍್ಮಿಸಲು ಜಿಲ್ಲಾಧಿಕಾರಿಗಳು ಕಾರ್ಪಸ್ ಫಂಡ್‌ನಿಂದ ರೂ.22 ಲಕ್ಷಗಳನ್ನು ಬಿಡುಗಡೆಮಾಡಿ […]

ಜಿಲ್ಲೆಯಲ್ಲಿ 116ಶಾಲೆಗಳು ಶೇ.100 ಫಲಿತಾಂಶ ಗಳಿಸಿವೆ-ಎ.ಬಿ.ಇಬ್ರಾಹಿಂ

Monday, May 18th, 2015
sslc-sanmana

ಮಂಗಳೂರು : ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಪರಿಶ್ರಮದ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ 8ನೇ ಸ್ಥಾನದಲ್ಲಿದ್ದು ಜಿಲ್ಲೆಯ 116 ಶಾಲೆಗಳು ಶೇ.100 ರಷ್ಟು ಫಲಿತಾಂಶ ದಾಖಲಿಸಿವೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಫಲಿತಾಂಶ ಸಂಬಂಧ ಉತ್ತಮ ಫಲಿತಾಂಶ ಗಳಿಸಿರುವ ಶಾಲೆಗಳ ಮುಖ್ಯಸ್ಥರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಬಂಟ್ವಾಳ 37,ಬೆಳ್ತಂಗಡಿ 15, ಮಂಗಳೂರು ಉತ್ತರ 11, ಮಂಗಳೂರು ದಕ್ಷಿಣ […]

ಜಿಲ್ಲೆಯಲ್ಲಿ 240ಶಿಶು ಮರಣ-ಎ.ಬಿ.ಇಬ್ರಾಹಿಂ

Friday, March 27th, 2015
child death

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳ ಸುಧಾರಣೆಯಾಗಿದ್ದು,ಇದರ ಫಲ 2014-15 ನೇ ಸಾಲಿನಲ್ಲಿ (ಫೆಬ್ರವರಿ ಅಂತ್ಯದವರೆಗೆ) ವಿವಿಧ ಕಾರಣಗಳಿಂದ 240 ಶಿಶುಗಳು ಹಾಗೂ ಪ್ರಸವ ನಂತರ ವಿವಿಧ ಕಾರಣಗಳಿಗೆ ಇಬ್ಬರು ತಾಯಂದಿರು ಮರಣವನ್ನಪ್ಪಿದ್ದಾರೆ,ಈ ಪ್ರಮಾಣ ಇನ್ನು ಕಡಿಮೆಯಾಗಿ ಶೂನ್ಯಕ್ಕೆ ತರುವಲ್ಲಿ ಆರೋಗ್ಯ ಇಲಾಖೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಅವರು ಬುಧವಾರದಂದು ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಅಭಿಯಾನ ಫೆಬ್ರವರಿ 2015 ರ ಮಾಸಿಕ ಸಭೆಯ ಅಧ್ಯಕ್ಷತೆ […]

ದೇವರ ದಾಸಿಮಯ್ಯರ ಜೀವನ ನಮಗೆ ಮಾದರಿಯಾಗಲಿ-ಎ.ಬಿ.ಇಬ್ರಾಹಿಂ

Wednesday, March 25th, 2015
Devara Dasimayya

ಮಂಗಳೂರು : ಕಾಯಕದ ಮೂಲಕ ಧಾರ್ಮಿಕ ಜಾಗೃತಿಯನ್ನು ಸಮಾಜದಲ್ಲಿ ತಮ್ಮ ಸರಳ ಸುಲಭ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ 11ನೇ ಶತಮಾನದ ದೇವರ ದಾಸಿಮಯ್ಯರ ಜೀವನ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ. ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ದ.ಕ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ದ.ಕ.ಜಿಲ್ಲೆ ಇವರ ಸಹಕಾರದೊಂದಿಗೆ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ […]

ಜಿಲ್ಲೆ ಹೆಸರು ದಕ್ಷಿಣ ಕನ್ನಡವೇ ಇರಲಿ : ಎ.ಬಿ.ಇಬ್ರಾಹಿಂ

Monday, July 28th, 2014
DC AB Ibrahim

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆ ಹೆಸರನ್ನು ಮಂಗಳೂರು ಜಿಲ್ಲೆ ತುಳುನಾಡು ಮತ್ತಿತರ ಹೆಸರು ಸೂಕ್ತವೆಂದು ಸಾರ್ವಜನಿಕರ ತಮ್ಮ ಅಭಿಪ್ರಾಯಗಳನ್ನು ಸೂಚಿಸುತ್ತಿದ್ದು, ಮಂಗಳೂರು ಜಿಲ್ಲೆ ಎಂಬುದಾಗಿ ಮಾರ್ಪಾಡು ಮಾಡುವ ವಿಚಾರವು ಅತೀ ಸೂಕ್ಷ್ಮ ವಿಚಾರವಾಗಿರುವುದರಿಂದ ಜಿಲ್ಲೆಯ ಜನ ದಕ್ಷಿಣಕನ್ನಡ ಎಂಬ ಹೆಸರಿನೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿರುವುದರಿಂದ ಜಿಲ್ಲೆಯ ಹೆಸರನ್ನು ದಕ್ಷಿಣಕನ್ನಡ ಎಂದೇ ಮುಂದುವರಿಸುವಂತೆ ಹಾಗೂ ಜಿಲ್ಲೆಗೆ ಮರು ನಾಮಕರಣ ಆವಶ್ಯಕತೆ ಇಲ್ಲವೆಂಬುದಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಮ್ಮ ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ರಾಜ್ಯದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳಿಗೆ […]

ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ 16 ವೈದ್ಯರ ತಂಡ-ಎ.ಬಿ.ಇಬ್ರಾಹಿಂ

Wednesday, July 23rd, 2014
dc ab ibrahim

ಮಂಗಳೂರು : ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ,ಅನುದಾನಿತ,ಖಾಸಗಿ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10ನೇ ತರಗತಿಯ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು 16 ನುರಿತ ವೈದ್ಯರ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲಾ […]

ನ್ಯಾಯಬೆಲೆ ಅಂಗಡಿಗಳ ತಪಾಸಣೆಗೆ ಡಿಸಿ ಸೂಚನೆ

Wednesday, April 30th, 2014
Ibrahim

ಮಂಗಳೂರು : ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ತಪಾಸಣೆಯನ್ನು ಆಹಾರ ಇಲಾಖೆಯು ಆಗಿಂದಾಗ್ಗೆ ನಿಗದಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ನ್ಯಾಯಬೆಲೆ ಅಂಗಡಿಗಳ ತಪಾಸಣೆ ಕುಂಠಿತಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನ್ಯಾಯಬೆಲೆ ಅಂಗಡಿಗಳ ತೂಕದ ತಕ್ಕಡಿಗಳು ಸಮರ್ಪಕವಾಗಿ ಕಾರ್ಯವಾಗುತ್ತಿರುವುದನ್ನು ತೂಕ ಮತ್ತು ಅಳತೆ ಇಲಾಖೆಯು ನೀಡಿರುವ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ 500 ನ್ಯಾಯಬೆಲೆ ಅಂಗಡಿಗಳು ಅಸ್ತಿತ್ವದಲ್ಲಿದೆ. ನೂತನ ನ್ಯಾಯಬೆಲೆ […]