ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರಕ್ಕೆ ಹೊಸ ಸೂತ್ರ

10:17 AM, Tuesday, September 7th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರ ಕುರಿತಂತೆ ಐಡಿಯಾಕ್ಟ್ಸ್ ಇನೋವೇಶನ್ಸ್ ಹಾಗೂ ಮಂಗಳೂರು ನಗರ ಪೊಲೀಸ್ ಸೈಬರ್ ಕೆಫೆ ಮಾಲಕರೊಂದಿಗೆ ಸಂವಾದವು ಸೋಮವಾರ ಕಮಿಷನರೇಟ್ ಕಛೇರಿಯ ಸಭಾಂಗಣದಲ್ಲಿ ನಡೆಯಿತು.


ಉಪ ಕಮಿಷನರ್ ಆರ್. ರಮೇಶ್ ಸಭೆಯನ್ನು ಉದ್ದೇಶೀಸಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕಾಯಿದೆ ತಿದ್ದುಪಡಿ-2008 ರಲ್ಲಿ ಸೈಬರ್ ಕೆಫೆಗಳ ಬಗ್ಗೆ ರೂಪಿಸಿರುವ ನಿಯಮಗಳನ್ನು ಪಾಲಿಸುವುದು ಸುರಕ್ಷತೆಯ ದ್ಥಷ್ಟಿಯಲ್ಲಿ ಅತ್ಯವಶ್ಯ ಎಂದು ಹೇಳಿದರು.


ಸೈಬರ್ ಕೆಫೆಗಳಿಗೆ ಬರುವ ಪ್ರತಿಯೋರ್ವ ಗ್ರಾಹಕರ ಭಾವಚಿತ್ರ ಸಹಿತ ಪೂರ್ಣ ವಿವರಗಳನ್ನು ಕೆಫೆ ಮಾಲಕರು ಸಂಗ್ರಹಿಸಿಡುವುದು ನಿಯಮಗಳ ಪ್ರಕಾರ ಕಡ್ಡಾಯವಾಗಿದೆ. ಇದಕ್ಕೆ ತಪ್ಪಿದಲ್ಲಿ ಮುಂದೆ ಆಗಬಹುದಾದ ಯಾವುದೇ ಅನಾಹುತಗಳಿಗೆ ಕೆಫೆ ಮಾಲಕರು ಹೊಣೆಗಾರರಾಗುತ್ತಾರೆ. ಹಾಗೂ ಸುರಕ್ಷತೆಯ ಬಗ್ಗೆ ಕೆಲವು ತಂತ್ರಾಂಶಗಳು ಬಂದಿದ್ದು ಗ್ರಾಹಕರು ತಮಗೆ ಇಷ್ಟವಾದವುಗಳನ್ನು ಅಳವಡಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಐಡಿಯಾಕ್ಟ್ಸ್ ಇನೋವೇಶನ್ ಕಂಪೆನಿಯ ರಿಟೇಲ್ ವಿಭಾಗದ ಮುಖ್ಯಸ್ಥ ಕೃಷ್ಣ ಸ್ವಾಮಿ, ಇವರು ಸಂಸ್ಥೆ ‘ಕ್ಲಿಂಕ್ ಸೈಬರ್ ಕೆಫೆ ಮೆನೇಜರ್’ ಎನ್ನುವ ಸಾಫ್ಟ್ ವೇರ್ ಅನ್ನು ಕಂಪೆನಿಯು ಉಚಿತವಾಗಿ ಅಳವಡಿಸುತ್ತಿದೆ. ಇದು ಲೆಕ್ಕ ಪತ್ರ, ಬಳಕೆದಾರರ ಮಾಹಿತಿ, ಪ್ರವೇಶ ಹಾಗೂ ನಿರ್ಗಮನ ವಿವರ ಮುಂತಾದ ಅತ್ಯವಶ್ಯ ವಿವರಗಳಿಗೆ ಉಪಯುಕ್ತವಾಗಿದೆ. ಎಂದು ತಿಳಿಸಿದರು.
ಡಿಸಿಪಿ ಎಂ. ಮುತ್ತುರಾಯ, ಎಸಿಪಿ ಬಿ.ಜೆ. ಭಂಡಾರಿ ಉಪಸ್ಥಿತರಿದ್ದರು.

1 ಪ್ರತಿಕ್ರಿಯೆ - ಶೀರ್ಷಿಕೆ - ಸೈಬರ್ ಕೆಫೆ ನಿರ್ವಹಣೆ ಹಾಗೂ ಸುರಕ್ಷಾ ಪರಿವಾರಕ್ಕೆ ಹೊಸ ಸೂತ್ರ

  1. ನವೀನ, ಕಟೀಲು

    ಸೈಬರ್ ಕೆಫೆ ಮಾಲಕರೊಂದಿಗೆ ಸಂವಾದ ಅತ್ಯುತ್ತಮ ಕೆಲಸ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English