ಮಂಗಳೂರು : ಅಂಧೇರಿ ಪೂರ್ವದ ಸಾಕಿನಾಕ ಅಲ್ಲಿನ ಚಕ್ರ ಹೊಟೇಲ್‌ನಲ್ಲಿ ಕ್ಯಾಪ್ಟನ್ ಆಗಿ ನೌಕರಿಯಲ್ಲಿದ್ದ ಮಂಗಳೂರಿನ ಅವಿವಾಹಿತ ವಿಕ್ಟರ್ ಮೆಂಡೋನ್ಸಾ (68.) ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಂಕನಾಡಿ ಅಲ್ಲಿನ ನಾಗೂರಿ ನಿವಾಸಿ ಎನ್ನಲಾದ ಜೋಸೆಫ್ ಮೆಂಡೋನ್ಸಾರ ಪುತ್ರ ವಿಕ್ಟರ್ ಸುಮಾರು ಮೂರುವರೆ ದಶಕಗಳಿಂದ ಸಾಕಿನಾಕ ಅಲ್ಲಿನ ಹೆಸರಾಂತ ಹೊಟೇಲು ಚಕ್ರ ಇದರಲ್ಲಿ ಕ್ಯಾಪ್ಟನ್ ಆಗಿ ಸೇರಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಅಸಾಯಕರೆಣಿಸಿ ಅಸ್ವಸ್ಥರಾಗಿ ಬಳಲುತ್ತಿದ್ದ ವಿಕ್ಟರ್ ಅವರನ್ನು ಮರೋಲ್‌ನಾಕಾ ಅಲ್ಲಿನ ಮುಕುಂದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಕುಟುಂಬಸ್ಥರು ಯಾರೂ ಇಲ್ಲದ ಮೆಂಡೋನ್ಸಾರಿಗೆ ಚಕ್ರ ಹೊಟೇಲು ಮಾಲಿಕ ಮಂಡಳಿಯೇ ಬಂಧುಗಳಾಗಿ ಅವರ ಸೇವೆಗೈಯುತ್ತಿದ್ದು, ಇಂದಿಲ್ಲಿ ಮಂಗಳವಾರ ಪೂರ್ವಾ ಹ್ನ ವಿಕ್ಟರ್ ಸಾವನ್ನಪ್ಪಿದ್ದಾರೆ.
ಮೊದಲು ಅಪರೂಪಕ್ಕೆ ಎಂಬಂತೆ ಸಹೋದರ ಪುತ್ರಿ ವಿಕ್ಟರ್ ಭೇಟಿ ಮಾಡುತ್ತಿದ್ದು ಕ್ರಮೇಣ ಅವರ ಮಾಸಿಕ ಸಂಬಳವನ್ನೂ ಕೊಂಡೊಯ್ಯುತ್ತಿದ್ದು, ಅಂತ್ಯಕ್ರಿಯೆಗೆ ಅವರೇ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಅಂತೆಯೇ ಕೊಂಕಣ್ ತಾರಾಂ ಜೆರಿಮೆರಿ ಸಂಸ್ಥೆಯ ಪ್ಲೋರಾ ಡಿ’ಸೋಜಾ ಕಲ್ಮಾಡಿ ಅವರು ಅಂತ್ಯಕ್ರಿಯೆ ನಡೆಸುವ ಪ್ರಕ್ರಿಯೆಗೆ ಮುಂದಾಗಿದ್ದು, ಇಂದು (ಸೆ.30) ಬುಧವಾರ ಬೆಳಿಗ್ಗೆ 3.30 ಗಂಟೆಗೆ ಕುರ್ಲಾ ಪಶ್ಚಿಮದ ಜೆರಿಮೆರಿ ಅಲ್ಲಿನ ಸೈಂಟ್ ಜೂಡ್ ಚರ್ಚ್‌ನಲ್ಲಿ ವಿಕ್ಟರ್‌ರ ಅಂತ್ಯಕ್ರಿಯೆ ನಡೆಸಿ ಬಳಿಕ ಕುರ್ಲಾ ಪಶ್ಚಿಮದ ಕಮಾನಿ ಅಲ್ಲಿನ ಹೋಲಿಕ್ರಾಸ್ ಇಗರ್ಜಿಯ ಸಮಾಧಿಭೂಮಿಯಲ್ಲಿ ದಫನ ಮಾಡಲಾಗುವುದು ಎಂದಿದ್ದಾರೆ. ನಗರದಲ್ಲಿ ವಿಕ್ಟರ್‌ರ ಕುಟುಂಬಸ್ಥರು ಯಾ ಸಂಬಂಧಿಗಳು ಇದ್ದಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಕೋರಲು ಚಕ್ರ ಹೊಟೇಲ್‌ನ ಮಾಲೀಕ ದೇವು ಶೆಟ್ಟಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English