ಜೆಡಿಎಸ್ ಅಭ್ಯರ್ಥಿ ಪ್ರವೀಣಚಂದ್ರ ಜೈನ್ ಗೆಲ್ಲಲು ಸರ್ವಪ್ರಯತ್ನ

9:04 PM, Saturday, December 26th, 2015
Share
1 Star2 Stars3 Stars4 Stars5 Stars
(5 rating, 6 votes)
Loading...

Praveenchandra jain

ಮಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ಕಪ್ಪುಕುದುರೆ ಎಂದೇ ಪರಿಗಣಿತವಾಗಿರುವ ಹೆಸರೇ ಪ್ರವೀಣ್ ಚಂದ್ರ ಜೈನ್. ಸ್ವತ: ಕೃಷಿಕರೂ ಆಗಿರುವ ಉದ್ಯಮಿ ಜೈನ್ ಅವರಿಗೆ ತಾನು ಗೆಲ್ಲುವ ವಿಶ್ವಾಸ ಚುನಾವಣೆ ಹತ್ತಿರಬರುತ್ತಿದ್ದಂತೆ ದಟ್ಟವಾಗಿದೆ. ದ್ವೀತಿಯ ಪ್ರಾಶಸ್ತ್ಯದ ಮತಗಳನ್ನು ಯಾರಿಗೂ ಹಾಕಬೇಡಿ ಎನ್ನುವುದನ್ನು ಒತ್ತಿ ಹೇಳುವ ರಾಜಕೀಯ ಪಕ್ಷಗಳ ಧೋರಣೆಯನ್ನು ಖಂಡಿಸಿರುವ ಪ್ರವೀಣ್ ಚಂದ್ರ ಜೈನ್ ಅವರಿಗೆ ಎಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳು ಸಿಗುವುದಿಲ್ಲವೋ ಅಲ್ಲಿ ದ್ವೀತಿಯ ಪ್ರಾಶಸ್ತ್ಯದ ಮತಗಳ ಮೇಲೆ ಕಣ್ಣು ಇದೆ.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಕೆಲವು ಹುಳುಕುಗಳನ್ನು ತೆಗೆದು ಅದನ್ನು ಉತ್ತಮ ಪಡಿಸುವ ಆಶಯ ಹೊಂದಿರುವ ಶಾಸಕ ರಮೇಶ್ ಕುಮಾರ್ ಅವರ ಗ್ರಾಮ ಪಂಚಾಯತ್ ಸುಧಾರಣಾ ವರದಿಯನ್ನು ಅನುಷ್ಟಾನಕ್ಕೆ ತರಲು ತಾನು ವಿಧಾನಪರಿಷತ್ ನಲ್ಲಿ ಹೋರಾಟ ಮಾಡುವುದಾಗಿ ಜಾತ್ಯಾತೀತ ಜನತಾದಳದ ಅಭ್ಯರ್ಥಿ ಪ್ರವೀಣ್ ಚಂದ್ರ ಜೈನ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರ ಸಂಕಷ್ಟವನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ವಿಫಲರಾಗಿದ್ದಾರೆ ಎಂದು ಜೈನ್ ಹೇಳುತ್ತಾರೆ. ಪಂಚಾಯತ್ ಗಳಿಗೆ ಸ್ವಂತ ಕಟ್ಟಡ ಮತ್ತು ಪೂರ್ಣಕಾಲೀಕ ಸಿಬ್ಬಂದಿಗಳನ್ನು ನೇಮಿಸುವಲ್ಲಿ ಸರಕಾರ ವಿಫಲವಾಗಿದೆ. ಪಂಚಾಯತ್ ಸದಸ್ಯರುಗಳನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ತಿಳಿಯುತ್ತಿಲ್ಲ. ಹೀಗಿರುವಾಗ ಅವರಿಗೆ ಮತ ಹಾಕಿದರೆ ಚುನಾವಣೆಯಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಪ್ರವೀಣ್ ಚಂದ್ರ ಜೈನ್ ಅಭಿಪ್ರಾಯಪಟ್ಟಿದ್ದಾರೆ. 2014-15 ನೇ ಸಾಲಿನ ಅನುದಾನ ಡಿಸೆಂಬರ್ ತಿಂಗಳು ಕಳೆದರೂ ಬಿಡುಗಡೆಯಾಗಿಲ್ಲ. ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿಯ ಬಗ್ಗೆ ಸ್ಥಳೀಯ ಪಂಚಾಯತ್ ನಲ್ಲಿಯೇ ಚರ್ಚೆಯಾಗಬೇಕು ಎಂದು ಅವರು ಬಯಸಿದರು.

ಪಂಚಾಯತ್ ಸದಸ್ಯರ ಗೌರವಧನವನ್ನು ಐದು ಪಟ್ಟು ಹೆಚ್ಚಳ ಮಾಡಲು ಪ್ರಯತ್ನಿಸುವುದಾಗಿ ಅವರು ಭರವಸೆ ಕೊಟ್ಟರು. ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಆ ಪಕ್ಷದ ಒತ್ತಡಕ್ಕೆ ಅನುಗುಣವಾಗಿ ಕಾರ್ಯ ವಹಿಸುವುದರಿಂದ ಅವರು ಜನರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English