ಕಲ್ಲೇಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ವಿಧಾನ ಪರಿಷತ್ ಚುನಾವಣಾ ಪ್ರಚಾರ

Monday, December 6th, 2021
BJP-MLC

ಪುತ್ತೂರು : ಭಾರತೀಯ ಜನತಾ ಪಾರ್ಟಿ ಪುತ್ತೂರು ನಗರ ಮಂಡಲ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಇಲ್ಲಿನ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಜರುಗಿತು. ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, “ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದವರು. ಧಾರ್ಮಿಕ ದತ್ತಿ ಇಲಾಖೆಗೆ ಕೋಟ ಮಂತ್ರಿಯಾದಾಗ ಹಳ್ಳಿ ಹಳ್ಳಿಯ ಸಣ್ಣಪುಟ್ಟ ದೇವಸ್ಥಾನಗಳಿಗೂ ಅನುದಾನ ನೀಡಿದರು. ಸಾಮೂಹಿಕ ವಿವಾಹ […]

ಪತ್ರಕರ್ತ, ಸಾಹಿತಿ ಫಾರೂಕ್ ಗೂಡಿನಬಳಿ ನಿಧನ

Friday, October 1st, 2021
Farooq Gudinabali

ಬಂಟ್ವಾಳ : ಪತ್ರಕರ್ತ, ಸಾಹಿತಿ ಫಾರೂಕ್ ಗೂಡಿನಬಳಿ( 38) ಅವರು ಸುದೀರ್ಘ ಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ಗೂಡಿನಬಳಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವಿವಿಧ ಪತ್ರಿಕೆಗಳಿಗೆ ಬಂಟ್ವಾಳದಿಂದ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು. ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿಯಾಗಿರುವ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗ್ರಾಪಂ.ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಾಗೂ ಮಕ್ಕಳ ಹಕ್ಕಿನ ಬಗ್ಗೆಯು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರಲ್ಲದೆ‌ ಸಾಮಾಜಿಕ ಚಟುವಟಿಕೆಯಲ್ಲಿಯು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ತಾಯಿ,ಪತ್ನಿ ಹಾಗೂ ಒಂದು ಹೆಣ್ಣುಮಗುವನ್ನು ಅಗಲಿದ್ದಾರೆ.ಇವರ ನಿಧನಕ್ಕೆ […]

ಶಿವಗಂಗಾ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ

Monday, June 21st, 2021
shivaganga-math

ಶಿವಮೊಗ್ಗ : ಶಿವಮೊಗ್ಗದ ಶಿವಗಂಗಾ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಮತ್ತು ನೂತನವಾಗಿ ನಿರ್ಮಿಸಲಾದ ಮುಖ್ಯದ್ವಾರದ ಉದ್ಘಾಟನೆ ಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾದ ಕೆ.ಎಸ್.ಈಶ್ವರಪ್ಪರವರು ನೆರವೇರಿಸಿದರು. ಅವರೊಂದಿಗೆ ಶ್ರೀಶ್ರೀಶ್ರೀ ಡಾ.ಮಲ್ಲಿಕಾರ್ಜುನ ಮೃಗರಾಜೇಂದ್ರ ಮಹಾಸ್ವಾಮೀಗಳು ಮತ್ತು ಗೌರಿಗದ್ದೆ ವಿನಯ್ ಗುರೂಜಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ ಆಚರಣೆ

Sunday, June 6th, 2021
Panchayath Raj

ಗದಗ : ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವತಿಯಿಂದ ನಾಗಾವಿ ಹತ್ತಿರದ ಗುಡ್ಡಗಾಡು ಪ್ರದೇಶದ ನಯನ ಮನೋಹರ ಪ್ರದೇಶದಲ್ಲಿ ನಿರ್ಮಿತವಾಗಿರುವ ನೂತನ ಕ್ಯಾಂಪಸ್ನಲ್ಲಿ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಡೀ ಕ್ಯಾಂಪಸ್ನಲ್ಲಿ ಗುರುತು ಪಡಿಸಲಾದ ಮಾದರಿ ಸಸ್ಯ ಶಿಶುಪಾಲನಾ ಕೇಂದ್ರ, ಸಮಗ್ರ ಪಶು ಕೃಷಿ ಯೋಜನೆ, ಸ್ಮೃತಿ ವನ, ಸಬರಮತಿ ಆಶ್ರಮ, ರೂರಲ್ ಟೆಕ್ನಾಲಜಿ ಪಾರ್ಕ್, ಜೀವ‌ ವೈವಿಧ್ಯ ಕೇಂದ್ರ, ತರಬೇತಿ ಕೇಂದ್ರ, ನೆರಳು, ಭೋಜನ ಶಾಲೆಯ ಆವರಣ ಹಾಗೂ ದೇಸಿ ಯೋಜನೆಯ ಭೂಮಿ […]

ಹಚ್ಚಹಸಿರು ಕ್ಯಾಂಪಸ್ : ವಿಶಿಷ್ಟ ರೀತಿಯಲ್ಲಿ ವಿಶ್ವ ಪರಿಸರ ದಿನದ ಆಚರಣೆ

Friday, June 4th, 2021
World Environment

ಗದಗ : ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಇವರ ಸಹಯೋಗದೊಂದಿಗೆ ಪ್ರತಿ ವರ್ಷ ಜೂನ್ 05 ರಂದು ಆಚರಿಸಲಾಗುವ ವಿಶ್ವ ಪರಿಸರ ದಿನದ ಈ ಸುಸಂದರ್ಭದಲ್ಲಿ ಹಚ್ಚಹಸಿರು ಕ್ಯಾಂಪಸ್ ನಿರ್ಮಿಸುವ ನಿಟ್ಟಿನಲ್ಲಿ ನಾಗಾವಿ ಹತ್ತಿರದ ಗುಡ್ಡಬೆಟ್ಟಗಳ ನಯನ ಮನೋಹರ ತಾಣದಲ್ಲಿ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು ಹಚ್ಚಹಸಿರು ಕ್ಯಾಂಪಸ ಆಗಿ ನಿರ್ಮಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ನೂತನ ಕ್ಯಾಂಪಸ್ನ ಸಬರಮತಿ ಆಶ್ರಮ, ಸ್ಮೃತಿವನ, ಜೀವ […]

ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಕೊರೊನಾ ವಾರಿಯರ್ಸ್ : ಮುಖ್ಯಮಂತ್ರಿ ಘೋಷಣೆ

Wednesday, May 26th, 2021
Yedyurappa

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಅವರು ಇಂದು ಬೆಳಗಾವಿ, ಬಳ್ಳಾರಿ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಿಡಿಓ ಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ವಿವಿಧ ಪಂಚಾಯಿತಿ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ಈ ಘೋಷಣೆ ಮಾಡಿದರು. ಕೋವಿಡ್ […]

ಲಾಕ್‍ಡೌನ್ ಅವಧಿಯಲ್ಲಿ ನೆರವು ನೀಡಿದ ಸರ್ಕಾರೇತರ ಸಂಘ ಸಂಸ್ಥೆಗಳ ಮಾಹಿತಿ ದಾಖಲಿಸಲು ಸೂಚನೆ

Monday, July 20th, 2020
foodkits

ಬೆಂಗಳೂರು : ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಕೈಗೊಂಡ ಲಾಕ್‍ಡೌನ್ ಅವಧಿಯಲ್ಲಿ ತೊಂದರೆ ಅನುಭವಿಸಿದವರಿಗೆ ನೆರವು ನೀಡಿದ ಸರ್ಕಾರೇತರ ಸಂಘ ಸಂಸ್ಥೆಗಳು/ಕಾರ್ಪೊರೇಟ್ ಸಂಸ್ಥೆಗಳು ಕೈಗೊಂಡ ಪರಿಹಾರ ಕಾರ್ಯಗಳನ್ನು ದಾಖಲಿಸಲು ಸರ್ಕಾರ ಕ್ರಮಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಕಳೆದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಕೋವಿಡ್-19 ರ ನಿಮಿತ್ತ ಲಾಕ್‍ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು/ವಲಸೆ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಜನರಿಗೆ ತುರ್ತು ಪರಿಹಾರ ನೀಡಲು […]

ಜೆಡಿಎಸ್ ಅಭ್ಯರ್ಥಿ ಪ್ರವೀಣಚಂದ್ರ ಜೈನ್ ಗೆಲ್ಲಲು ಸರ್ವಪ್ರಯತ್ನ

Saturday, December 26th, 2015
Praveenchandra jain

ಮಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ಕಪ್ಪುಕುದುರೆ ಎಂದೇ ಪರಿಗಣಿತವಾಗಿರುವ ಹೆಸರೇ ಪ್ರವೀಣ್ ಚಂದ್ರ ಜೈನ್. ಸ್ವತ: ಕೃಷಿಕರೂ ಆಗಿರುವ ಉದ್ಯಮಿ ಜೈನ್ ಅವರಿಗೆ ತಾನು ಗೆಲ್ಲುವ ವಿಶ್ವಾಸ ಚುನಾವಣೆ ಹತ್ತಿರಬರುತ್ತಿದ್ದಂತೆ ದಟ್ಟವಾಗಿದೆ. ದ್ವೀತಿಯ ಪ್ರಾಶಸ್ತ್ಯದ ಮತಗಳನ್ನು ಯಾರಿಗೂ ಹಾಕಬೇಡಿ ಎನ್ನುವುದನ್ನು ಒತ್ತಿ ಹೇಳುವ ರಾಜಕೀಯ ಪಕ್ಷಗಳ ಧೋರಣೆಯನ್ನು ಖಂಡಿಸಿರುವ ಪ್ರವೀಣ್ ಚಂದ್ರ ಜೈನ್ ಅವರಿಗೆ ಎಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳು ಸಿಗುವುದಿಲ್ಲವೋ ಅಲ್ಲಿ ದ್ವೀತಿಯ ಪ್ರಾಶಸ್ತ್ಯದ ಮತಗಳ ಮೇಲೆ ಕಣ್ಣು ಇದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಕೆಲವು […]

ರಾಜ್ಯ ಕಾಂಗ್ರೆಸ್ ಸರಕಾರ ಕಳ್ಳಕಾಕರ ಸರಕಾರವಾಗಿದೆ : ನಳಿನ್ ಕುಮಾರ್

Friday, July 12th, 2013
Bantwal BJP

ಬಂಟ್ವಾಳ: ರಾಜ್ಯ ಸರಕಾರದ ಹೊರಡಿಸಿರುವ ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ನೀತಿಯನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ವತಿಯಿಂದ ಗುರುವಾರ ಬಿ.ಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಅಧಿಕಾರ ಬಂದು ಎರಡು ತಿಂಗಳಲ್ಲಿಯೇ  ಪಂಚಾಯತ್ ಸದಸ್ಯರ ಹಕ್ಕನ್ನು ಮೊಟಕುಗೊಳಿಸಲು ಮುಂದಾಗಿರುವ ಕ್ರಮ ಸರಿಯಲ್ಲ, ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತರುವ ಕರಾಳ ಮಸೂದೆಯನ್ನು ರಾಜ್ಯ ಸರಕಾರ ಜಾರಿಗೊಳಿಸಲು ಮುಂದಾಗಿರುವುದು ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯನ್ನು ಕಿತ್ತುಗೊಳ್ಳುವ ಪ್ರಜಾತಂತ್ರ ವಿರೋಧಿ ನಿಲುವಾಗಿದೆ ಎಂದು ಸಂಸದ […]

ಪಂಚಾಯತ್ ರಾಜ್ ಜಿಲ್ಲಾಮಟ್ಟದ ಜಾಗೃತಿ ಕಾರ್ಯಕ್ರಮ.

Monday, October 4th, 2010
ಪಂಚಾಯತ್ ರಾಜ್ ಜಿಲ್ಲಾಮಟ್ಟದ ಜಾಗೃತಿ ಕಾರ್ಯಕ್ರಮ

ಮಂಗಳೂರು : ಪಂಚಾಯತ್ ರಾಜ್ ಕುರಿತು ಗ್ರಾಮ ಸಭಾ ವರ್ಷಾಚರಣೆ 2009-10 ರ ಅಂಗವಾಗಿ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ದ.ಕ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ನಡೆಯಿತು. ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ದೀಪಬೆಳಗಿಸುವುದರ ಮೂಲಕ ನೆರವೇರಿಸಿದರು. ಪಂಚಾಯತ್ ರಾಜ್ ನ ವಿವಿಧ ಮಜಲುಗಳ ಬಗ್ಗೆ ಜನರಿಗೆ ತಿಳುವಳಿಕೆ ಇದ್ದರೆ, ಸರಕಾರ ರೂಪಿಸುವ ವಿವಿಧ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ […]