ಪತ್ರಕರ್ತ, ಸಾಹಿತಿ ಫಾರೂಕ್ ಗೂಡಿನಬಳಿ ನಿಧನ

6:29 PM, Friday, October 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Farooq Gudinabali ಬಂಟ್ವಾಳ : ಪತ್ರಕರ್ತ, ಸಾಹಿತಿ ಫಾರೂಕ್ ಗೂಡಿನಬಳಿ( 38) ಅವರು ಸುದೀರ್ಘ ಕಾಲದ ಅಸೌಖ್ಯದಿಂದ ಶುಕ್ರವಾರ ಸಂಜೆ ಗೂಡಿನಬಳಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ವಿವಿಧ ಪತ್ರಿಕೆಗಳಿಗೆ ಬಂಟ್ವಾಳದಿಂದ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು. ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿಯಾಗಿರುವ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಗ್ರಾಪಂ.ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಾಗೂ ಮಕ್ಕಳ ಹಕ್ಕಿನ ಬಗ್ಗೆಯು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರಲ್ಲದೆ‌ ಸಾಮಾಜಿಕ ಚಟುವಟಿಕೆಯಲ್ಲಿಯು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ತಾಯಿ,ಪತ್ನಿ ಹಾಗೂ ಒಂದು ಹೆಣ್ಣುಮಗುವನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಬಂಟ್ವಾಳ ತಾಲೂಕು ಕಾರ್ಯ ನಿರತಪತ್ರಕರ್ತರ ಸಂಘ ತೀವ್ರ ಶೋಕ ವ್ಯಕ್ತಪಡಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English