ಮಂಗಳೂರು : ಪಂಚಾಯತ್ ರಾಜ್ ಕುರಿತು ಗ್ರಾಮ ಸಭಾ ವರ್ಷಾಚರಣೆ 2009-10 ರ ಅಂಗವಾಗಿ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ದ.ಕ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ನಡೆಯಿತು.
ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ದೀಪಬೆಳಗಿಸುವುದರ ಮೂಲಕ ನೆರವೇರಿಸಿದರು. ಪಂಚಾಯತ್ ರಾಜ್ ನ ವಿವಿಧ ಮಜಲುಗಳ ಬಗ್ಗೆ ಜನರಿಗೆ ತಿಳುವಳಿಕೆ ಇದ್ದರೆ, ಸರಕಾರ ರೂಪಿಸುವ ವಿವಿಧ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಗೂ ಅಧ್ಯಕ್ಷತೆ ವಹಿಸಿದ್ದ ಕೆ. ಸಂತೋಷ್ ಕುಮಾರ್ ಭಂಡಾರಿ ಹೇಳಿದರು.
ಅತಿಥಿಗಳಾಗಿ ಪಿ.ಶಿವಶಂಕರ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದ.ಕ. ಜಿಲ್ಲಾ ಪಂಚಾಯತ್ ಕೆ. ಶಿವರಾಮೇ ಗೌಡ, ಉಪಕಾರ್ಯದರ್ಶಿ ದ.ಕ. ಜಿ.ಪಂ. ಮಂಗಳೂರು, ಎನ್. ಶೀನ ಶೆಟ್ಟಿ ಒಂಬಂಡ್ಸ್ ಮೆನ್, ದ.ಕ. ಮಂಗಳೂರು, ಟಿ.ಜೆ ತಾರಕ್ ರಾವ್, ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್ ಮಂಗಳೂರು, ಟಿ.ಬಿ. ನಂಜುಂಡಸ್ವಾಮಿ, ಕ್ಷೇತ್ರ ಪ್ರಧಾನಾಧಿಕಾರಿ, ಭಾರತ ಸರಕಾರ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ, ಪಂಚಾಯತ್ ರಾಜ್ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ನಡೆಯಿತು.
Click this button or press Ctrl+G to toggle between Kannada and English