ಉಪ್ಪಳ : ಭಾರತ ಸಾಂಸ್ಕ್ರತಿಕ ಸಂಪನ್ನ ದೇಶ. ಈ ದೇಶದ ಮೂಲ ಪ್ರಜೆಗಳು ಹಿಂದುಗಳು, ಇದರಿಂದಾಗಿ ಭಾರತ ಸಾಂಸ್ಕ್ರತಿಕ ಸಂಪನ್ನ ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕ್ ಉಮೇಶ್ ತಿಳಿಸಿದರು.
ಅವರು ಉಪ್ಪಳ ಮಂಡಲದ ಪ್ರತಾಪನಗರ ಶಾಖೆಯ ಮಕರ ಸಂಕ್ರಮಣ ಉತ್ಸವದಲ್ಲಿ ಮಾತನಾಡುತ್ತಿದ್ದರು.
ನಮ್ಮ ಪರಂಪರೆಯಲ್ಲಿ ಕರ್ತವ್ಯ ಪ್ರಜ್ನೆ ಧರ್ಮ ಪ್ರಜ್ನೆ ಗಳು ಇದೆ.ಇದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಆ ಮೂಲಕ ಜಗತ್ತಿಗೆ ಒಳಿತನ್ನು ಬಯಸಬೇಕು.ಸಂಕ್ರಮಣ ಪ್ರತಿ ವರ್ಷವೂ ಬರುತ್ತದೆ. ಆದರೆ ನಾವು ಮಾಡುವ ಕರ್ತವ್ಯ ಧರ್ಮಗಳ ಮೂಲಕ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯಲು ಸಾಧ್ಯ ಎಂದರು.
ಮಕರ ಸಂಕ್ರಮಣ ಉತ್ಸವದ ಅಂಗವಾಗಿ ಪ್ರತಾಪನಗರ ಬೀಟಿಗದ್ದೆಯಿಂದ ಸ್ವಯಂಸೇವಕರ ಪಥಸಂಚಲನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಿವಶಕ್ತಿ ಮೈದಾನದಲ್ಲಿ ಸಂಪನ್ನಗೊಂಡಿತು.
ಉತ್ಸವದ ಮುಖ್ಯ ಶಿಕ್ಷಕ್ ಪವನ್,ಶಿಕ್ಷಕ್ ಗಿರಿರಾಜ್ ಉಪಸ್ಥಿತರಿದ್ದರು.ಅಮೃತ ವಚನ ಜಿತೇಶ್ , ವೈಯುಕ್ತಿಕ ಗೀತೆ ಪ್ರವೀಣ ಪಿ, ಪರಿಚಯ ನಿತೇಶ್ ನಡೆಸಿಕೊಟ್ಟರು.
Click this button or press Ctrl+G to toggle between Kannada and English