ಎಂಡೋ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿದ ಪಿಣರಾಯಿ ವಿಜಯನ್

4:47 PM, Sunday, January 17th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
endo victims

ಪೆರ್ಲ: ಸಿಪಿಎಂ ಪ್ಯಾಲಿಟ್ ಬ್ಯೂರೋ ಸದಸ್ಯ,ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಎಂಡೋ ಸಂತ್ರಸ್ಥ ಪ್ರದೇಶಗಳಾದ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡ್ರೆ, ಸ್ವರ್ಗ, ವಾಣೀನಗರ, ಬೋವಿಕ್ಕಾನ ಬಡ್ಸ್ ಕೇಂದ್ರಗಳ ಸಹಿತ ವಿವಿಧ ಪ್ರದೇಶಗಳನ್ನು ಗುರುವಾರ ಸಂದರ್ಶನ ನಡೆಸಿದರು.

ತಮ್ಮ ಭೇಟಿಯ ಆರಂಭದಲ್ಲಿ ಪೆರ್ಲ ಕನ್ನಟಿಕಾನ ಬಡ್ಸ್ ಶಾಲೆಗೆ ಭೇಟಿ ನೀಡಿದ ಅವರು ಅಲ್ಲಿನ ಭಿನ್ನಚೇತನ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.ಬಳಿಕ ಇತ್ತೀಚೆಗೆ ನಿಧನರಾದ ಸ್ವರ್ಗ ಬೈರಡ್ಕದ ಸಿಪಿಐ ನಾಯಕ ಎಂ.ಕೆ.ಬಾಲಕೃಷ್ಣನ್ ರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ನೀಡಿದರು.ಬಳಿಕ ಎಂಡೋ ಪರಿಣಾಮದಿಂದ ಪಿತ್ತಕೋಶ ಅರ್ಬುದಕ್ಕೆ ಬಲಿಯಾದ ಸ್ವರ್ಗದ ಕುಮಾರನ್ ಮಾಸ್ತರ್ ರ ಮನೆಗೆ ಭೇಟಿ ನೀಡಿ ಕುಟುಂಬದವರು ಸಲ್ಲಿಸಿದ ನಿವೇದನೆಯನ್ನು ಸ್ವೀಕರಿಸಿದರು.

ಎಂಡೋಸಲ್ಫಾನ್ ವಿಷಯ ದುಷ್ಪರಿಣಾಮ ಹೊರಲೋಕಕ್ಕೆ ಮೊದಲು ಪರಿಚಯವಾದ್ದು ಕುಮಾರನ್ ಮಾಸ್ತರ್‌ರ ದಯನೀಯ ಮರಣಶಯ್ಯೆಯ ಚಿತ್ರಗಳಾಗಿದ್ದವು.ಅವರು ಎಂಡೋ ಪರಿಣಾಮದ ದೊಡ್ಡ ಶಕ್ತಿಯಾಗಿ ಬಿಂಬಿಸಲ್ಪಟ್ಟಿದ್ದರು.

ಪಿಣರಾಯಿಯವರು ಬಳಿಕ ವಾಣೀನಗರ ಅಜಕ್ಕಳ ಮೂಲೆ ನಿವಾಸಿ ಹುಟ್ಟಿನಿಂದಲೇ ವಿಶೇಷ ಚೇತನರಾಗಿರುವ ಶಂಕರ ಮೂಲ್ಯರ ಪುತ್ರ ಹರ್ಶಿತ್ ಹಾಗೂ ಅರ್ಬುದ ರೋಗ ಕಾರಣ ಮರಣ ಶಯ್ಯೆಯಲ್ಲಿರುವ ಮಾರಪ್ಪ ಮೂಲ್ಯರನ್ನು ಸಂದರ್ಶಿಸಿದರು.ಸಂಕರ ಮೂಲ್ಯರ ಸಹೋದರಿ ಸುಂದರಿ ಹಲವು ವರ್ಷಗಳ ಮೊದಲು ಅರ್ಬುದ ರೋಗ ಪೀಡಿತರಾಗಿ ಮೃತರಾಗಿದ್ದರು.

ಎಂಡೋಸಲ್ಫಾನ್ ರೋಗದ ಬಗ್ಗೆ ವಿಸ್ಕೃತ ಅಧ್ಯಯನ ಮಾಡಿ ಹೊರ ಪ್ರಪಂಚಕ್ಕೆ ಅರಿವು ಮೂಡಿಸಿದ,ಎಂಡೋ ಹೋರಾಟಗಾರ ಸಾಮಾಜಿಕ ಕಾರ್ಯಕರ್ತ ಹಾಗೂ ದಶಕಗಳಿಂದ ಕುಗ್ರಾಮ ಸ್ವರ್ಗ,ವಾಣೀನಗರ,ಏತಡ್ಕಗಳಲ್ಲಿ ವೈದ್ಯರಾಗಿ ಸೇವೆಸಲ್ಲಿಸುತ್ತಿರುವ ಡಾ.ವೈ.ಎಸ್ ಮೋಹನ್ ಕುಮಾರ್ ಅವರು ಅರ್ಬುದ ಹಾಗೂ ಚರ್ಮರೋಗಿಗಳ ಸಂಖ್ಯೆ ನಿತ್ಯ ವರ್ಧಿಸುತ್ತಿರುವುದಾಗಿ ಹಾಗೂ ಈ ನಿಟ್ಟಿನಲ್ಲಿ ಎಂಡೋ ಪೀಡಿತರನ್ನೇ ದೃಷ್ಟಿಯಲ್ಲಿರಿಸಿ ನಿರ್ಮಿಸಲುದ್ದೇಶಿಸಿರುವ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಾಮಗಾರಿ ಶೀಘ್ರ ಆರಂಭಿಸಬೇಕೆಂದು ಮೋಹನ್ ಕುಮಾರ್ ಪಿಣರಾಯಿ ವಿಜಯನ್ ರನ್ನು ಒತ್ತಾಯಿಸಿದರು.ಜೊತೆಗೆ ಸ್ವರ್ಗ,ಪಡ್ರೆ,ವಾಣೀನಗರಗಳನ್ನು ಸಂಪರ್ಕಿಸುವ ರಸ್ತೆಯನ್ನು ದುರಸ್ಥಿಗೊಳಿಸಬೇಕೆಂದು ಮನವಿ ಮಾಡಿದರು.

ಪಿಣರಾಯಿ ವಿಜಯನ್ ರವರಿಗೆ ಎಂಡೋಪೀಡಿತ ಪ್ರದೇಶಗಳ ಸಮಗ್ರ ಅಭಿವೃದ್ದಿಗೆ ಈ ಸಂದರ್ಭದಲ್ಲಿ ಮನವಿ ನೀಡಲಾಯಿತು.

ನಿವೇದನೆಗಳಲ್ಲಿ ಏನೇನಿದ್ದವು.
1)ಪ್ರತಿ ಚುನಾವಣೆಯ ಬಳಿಕ ಬದಲಾಗಿ ಆಡಳಿತ ನಡೆಸುವ ಸರಕಾರಗಳು ಕಾಸರಗೋಡಿನೊಂದಿಗೆ ತೋರಿಸುವ ಮಲತಾಯಿ ಧೋರಣೆಯನ್ನು ಕೊನೆಗೊಳಿಸಬೇಕು,
2)ಎಲ್ಲಾ ನಿವೇದನೆಗಳೂ ಎಂಡೋಪೀಡಿತ ಪ್ರದೇಶಗಳಾದ ಪಡ್ರೆ,ವಾಣೀನಗರ,ಸ್ವರ್ಗ ರಸ್ತೆಗಳ ಶೀಘ್ರ ಡಾಮರೀಕರಣಗಳಿಗೆ ಒತ್ತಾಯಿಸಿ ನೀಡಲಾಗಿತ್ತು.
3)ಎಂಡೋ ಪರಿಣಾಮದಿಂದ ಮರಣಹೊಂದಿ ಸಂದಿಗ್ದತೆಯಲ್ಲಿರುವ ಕುಟುಂಬದ ಕನಿಷ್ಠ ಓರ್ವನಿಗಾದರೂ ಸರಕಾರಿ ವೃತ್ತಿ ಕಲ್ಪಿಸುವುದು,
4)ದುರಂತದ ಆಶ್ರಿತ ಕುಟುಂಬದ ಸಾಲ ಮನ್ನಾ ಮಾಡುವುದು,
5)ಜನರಿಗೆ ಅತಿ ದೂರದ ಕಾರಣದಿಂದ ಸಮಸ್ಯೆಯಾಗಿರುವ ಪಡ್ರೆ ಗ್ರಾಮ ಕಚೇರಿಯನ್ನು ಸ್ವರ್ಗದಲ್ಲಿ ಸ್ಥಾಪಿಸುವುದು,
6)ವಾಣೀನಗರ ಸಾರ್ವಜನಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಬಡ್ತಿಗೊಳಿಸುವುದು,ಪ್ರಯೋಗಾಲಯ ಮತ್ತು ಅಗತ್ಯ ನೌಕರರನ್ನು ನೇಮಿಸುವ ಬಗ್ಗೆ ಕ್ರಮ ಕೈಗೊಳ್ಳುವುದು,

ಪಿಣರಾಯಿ ವಿಜಯನ್ ಅವರೊಂದಿಗೆ ಸಂಸದ ಪಿ.ಕರುಣಾಕರನ್,ಉದುಮ ಶಾಸಕ ಕುಂಞಿರಾಮನ್,ಮಾಜಿ ಶಾಸಕ ಕುಂಞಿಂಬು,ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ರಘುದೇವ ಮಾಸ್ಟರ್,ಡಿವೈಎಫ್‌ಐ ಮುಖಂಡರಾದ ಶಿಜಿ ಮ್ಯಾಥ್ಯೂ,ಅವಿನಾಶ್ ಸಿ,ಕುದ್ವ ರಾಮಕೃಷ್ಣ ರೈ,ಮಂಜುನಾಥ,ಶ್ರೀನಿವಾಸ ಮೊದಲಾದವರು ಉಪಸ್ಥಿತರಿದ್ದರು.

ಪಿಣರಾಯಿ ವಿಜಯನ್ ಎಂಡೋ ಪೀಡಿತ ವಲಯಗಳಿಗೆ ಮೊತ್ತಮೊದಲಿಗೆ ನೀಡಿದ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೊಳಗಾಗಿವೆ.ಮುಂದೆ ನಡೆಯಲಿರುವ ವಿಧಾನ ಸಭಾ ಚುನಾವಣೆಯನ್ನು ಗುರಿಯಾಗಿರಿಸಿ ಕೇರಳದಲ್ಲಿ ಅದರಲ್ಲೂ ಕಾಸರಗೋಡಲ್ಲಿ ಕ್ಷೀಣಿಸುತ್ತಿರುವ ಪಕ್ಷದ ವರ್ಚಸ್ಸನ್ನು ಮರಳಿ ಪಡೆಯಲು ಈ ಸಂದರ್ಶನ ನಾಟಕವೆಂಬ ಕೂಗು ಕೇಳಿ ಬರುತ್ತಿದೆ.ಎಂಡೋ ದುಷ್ಪರಿಣಾಮ ಹೊರ ಜಗತ್ತಿಗೆ ಮೊತ್ತಮೊದಲು ತಿಳಿದು ಬಂದ 1998 & 2000 ನೇ ವರ್ಷಗಳಲ್ಲಿ ಕೇರಳದಲ್ಲಿ ಸಿಪಿಎಂ ನೇತೃತ್ವದ ಎಡರಂಗ ಆಡಳಿತ ನಡೆಸಿದ್ದರೂ ಅಂದು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಮೌನವಾಗಿದ್ದ ಪಕ್ಷ ಈಗ ಯಾವ ಮುಖದಲ್ಲಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆಯೆಂದು ಟೀಕೆಗಳು ವ್ಯಕ್ತವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English