ಕಾಸರಗೋಡು ಹೋಟೆಲ್ ಗಳಲ್ಲಿ ಹಳಸಿದ ಆಹಾರ, ಆರೋಗ್ಯ ಅಧಿಕಾರಿಗಳ ದಾಳಿ

7:37 PM, Sunday, January 17th, 2016
Share
1 Star2 Stars3 Stars4 Stars5 Stars
(4 rating, 6 votes)
Loading...
hotel raid

ಕಾಸರಗೋಡು: ಕಾಸರಗೋಡು ನಗರ ಸಭಾ ವ್ಯಾಪ್ತಿಯ ಹೋಟೆಲ್ ಗಳಿಗೆ ಮುನ್ಸಿಪಲ್ ಆರೋಗ್ಯ ವಿಭಾಗದ ಅಧಿಕೃತರು ಶುಕ್ರವಾರ ಮಿಂಚಿನ ಧಾಳಿ ನಡೆಸಿ ಹಲವೆಡೆಗಳಿಂದ ಹಳಸಿದ ಆಹಾರ ಹಾಗೂ ನೈರ್ಮಲ್ಯದ ತೀವ್ರ ಕೊರತೆಯನ್ನು ಕಂಡು ನೊಟೀಸ್ ಜಾರಿಗೊಳಿಸಿದರು.

ಶುಕ್ರವಾರ ಬೆಳಿಗ್ಗೆ 7.30 ರಿಂದ 9ಗಂಟೆಯ ವರೆಗೆ ನಗರದ ಕರಂದಕ್ಕಾಡು,ಕೆಎಸ್‌ಆರ್‌ಟಿಸಿ ನಿಲ್ದಾಣ ಪ್ರದೇಶ,ಹಳೆ ಬಸ್ ನಿಲ್ದಾಣ ಪರಿಸರ,ವಿದ್ಯಾನಗರ ಮೊದಲಾದ ಪ್ರದೇಶಗಳ ಹೋಟೇಲ್ ಗಳಿಗೆ ಧಾಳಿ ನಡೆಸಿ ಪರಿಶೀಲನೆ ನಡೆಸಿದರು.10 ಹೋಟೆಲ್ ಗಳು ತೀವ್ರ ಕಳವಳಕಾರಿ ಕಳಪೆ ಗುಣಮಟ್ಟದ ನಿರ್ವಹಣೆಯನ್ನು ಗುರುತಿಸಿ ನೊಟೀಸ್ ಜಾರಿಗೊಳಿಸಲಾಯಿತು.
ತಂಡದಲ್ಲಿ ಆರೋಗ್ಯ ವಿಭಾಗದ ಅಧಿಕೃತರಾದ ಸಿ.ಕೆ.ಬಾಬುರಾಜ್,ನಾರಾಯಣ,ಪಿ.ಕೆ.ನಾರಾಯಣನ್,ಕೆ.ಪಿ.ರಾಜಗೋಪಾಲನ್,ಎ.ವಿ.ಮಧುಸೂಧನನ್ ಮೊದಲಾದವರು ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English