ಕುಂಬಳೆ: ಮೊಗ್ರಾಲ್ ಪುತ್ತೂರು ಕಡವತ್‌ನಲ್ಲಿ ಎರಡು ಅಂಗಡಿಗಳು ಬೆಂಕಿ ತಗಲಿ ಉರಿದು ನಾಶಗೊಂಡಿದ್ದು, ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ.
ಕಡವತ್‌ನ ಕಸಬ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಮೊಗ್ರಾಲ್ ಪುತ್ತೂರು ನಿವಾಸಿ ಕೃಷ್ಣ ಅವರ ಟೈಲರಿಂಗ್ ಅಂಗಡಿ ಹಾಗೂ ಮಾಲಿಂಗ ಶೆಟ್ಟಿ ಅವರ ಜೀನಸು ಅಂಗಡಿ ಉರಿದು ನಾಶಗೊಂಡಿದೆ. ಜ.19 ರಂದು ರಾತ್ರಿ ಈ ಘಟನೆ ನಡೆದಿದೆ.
ಟೈಲರಿಂಗ್ ಅಂಗಡಿಯಲ್ಲಿ ಹೊಲಿಗೆಗೆಂದು ಇರಿಸಲಾಗಿದ್ದ ಸೀರೆಗಳು, ಪ್ಯಾಂಟ್, ಶರ್ಟ್, ಚೂಡಿದಾರ, ಎರಡು ಕಪಾಟುಗಳು, ಒಂದು ಕಟ್ಟಿಂಗ್ ಟೇಬಲ್, ಒಂದು ಟೈಲರಿಂಗ್ ಮೆಶಿನ್ ಮುಂತಾದ ಸಾಮಗ್ರಿಗಳು ಉರಿದು ನಾಶಗೊಂಡಿದೆ. ಟೈಲರಿಂಗ್ ಅಂಗಡಿ ಸಮೀಪದಲ್ಲಿ ಕಾರ್ಯಾಚರಿಸುತ್ತಿರುವ ಮಾಲಿಂಗ ಶೆಟ್ಟಿ ಅವರ ಜೀನಸು ಅಂಗಡಿ ಕೂಡಾ ಉರಿದು ನಾಶಗೊಂಡಿದ್ದು, ತರಕಾರಿ, ತಂಪು ಪಾನೀಯ ಸಹಿತ ವಿವಿಧ ವಸ್ತುಗಳು ಉರಿದು ನಾಶಗೊಂಡಿದೆ. ಈ ಮೂಲಕ ಈ ಎರಡು ಅಂಗಡಿಗಳಿಗೆ ಲಕ್ಷಾಂತರ ರೂ. ನಷ್ಟ ವಾಗಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರಬೇಕೆಂದು ಶಂಕಿಸಲಾಗಿದೆ.ಕುಂಬಳೆ ಪೋಲೀಸರು ಘಟನೆಯ ಕುರಿತು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English