ಕುಂಬಳೆಯ ಗಾಂಧಿ ಮೈದಾನದಲ್ಲಿ ಚಿರಂಜೀವಿ ಕ್ಲಬ್‌ನ 30ನೇ ವರ್ಷದ ರಸಮಂಜರಿ

8:59 PM, Thursday, January 21st, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Kumble Musical Nite

ಕುಂಬಳೆ: ಕುಂಬಳೆಯ ಚಿರಂಜೀವಿ ಕ್ಲಬ್ ನ 30ನೇ ವಾರ್ಷಿಕೋತ್ಸವ ಅಂಗವಾಗಿ ಬುಧವಾರ ಸಂಜೆ ಕುಂಬಳೆ ಗಾಂಧಿ ಮೈದಾನದಲ್ಲಿ ರಸಮಂಜರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ 30ನೇ ವರ್ಷದ ಸವಿ ನೆನಪಿಗಾಗಿ ರಚಿಸಲಾದ ನಂದನ ಸ್ಮರಣ ಸಂಚಿಕೆಯನ್ನು ಹಿರಿಯರಾದ ಶಿವರಾಮ ಕಡಪ್ಪುರ ಪ್ರಸಿದ್ದ ವೈದ್ಯ ಡಾ.ಮುಕುಂದರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಚಿರಂಜೀವಿ ಕ್ಲಬ್ ನ ಪದಾಧಿಕಾರಿಗಳಾದ ಬಾಲಕೃಷ್ಣ ಗಟ್ಟಿ,ವಿನಯ ಕುಮಾರ್,ಕೃಷ್ಣ ಗಟ್ಟಿ,ಸಂತೋಷ್ ಕುಮಾರ್,ನಾಗೇಶ್ ಕೃಷ್ಣ ನಗರ,ಗೋಪಿ,ನವೀನ ಗಟ್ಟಿ ಕೋಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.

ರಸಮಂಜರಿ ಕಾರ್ಯಕ್ರಮದಲ್ಲಿ ಹಿರಿಯ ನಾಟ್ಯಗುರು ಬಾಲಕೃಷ್ಣ ಮಂಜೇಶ್ವರರ ಶಿಷ್ಯವೃಂದದವರಿಂದ ಭರತನಾಟ್ಯ ಕಾರ್ಯಕ್ರಮ,ಕೇರಳದ ಪ್ರಮುಖ ಹಿನ್ನೆಲೆ ಗಾಯಕ ಬಿಜು ನಾರಾಯಣ್ ಮತ್ತು ಬಳಗದವರಿಂದ ವೈವಿಧ್ಯಮಯ ಹಾಡುಗಾರಿಕೆ ಮತ್ತು ಮಂಗಳೂರಿನ ಶಾಡ್ಸ್ ಮ್ಯೂಸಿಕ್ಸ್ ವರ್ಲ್ಡ್ ಬಳಗದವರಿಂದ ಸಿನಿಮ್ಯಾಟಿಕ್ ಡ್ಯಾನ್ಸ್ ಪ್ರಸ್ತುಗೊಂಡಿತು. ಸಾವಿರಕ್ಕಿಂತಲೂ ಮಿಕ್ಕಿದ ಕಿಕ್ಕಿರಿದ ಪ್ರೇಕ್ಷಕರು ಕಾರ್ಯಕ್ರಮದ ಸವಿಯನ್ನುಂಡರು.

Kumble Musical Nite

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English