ಮಂಗಳೂರು : ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಪ್ರತಿಭಟನೆ ಮಾಡಲೆಂದೇ ನಾಲ್ಕು ಸ್ಥಳಗಳನ್ನು ಗೊತ್ತುಮಾಡಿ ವಾರದೊಳಗೆ ಸೂಚನೆ ಹೊರಡಿಸುವುದಾಗಿ ಮಾಹಿತಿ ನೀಡಿದ್ದಾರೆ.
ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಸಂಘಟನೆಗಳು, ಸಾರ್ವಜನಿಕರು ಒಂದು ನಿರ್ದಿಷ್ಟ ಜಾಗದಲ್ಲಿ ಪ್ರತಿಭಟನೆ ನಡೆಸಲು ಸಹಕಾರಿಯಾಗುವಂತೆ ನಗರದ ಕೇಂದ್ರ ಸ್ಥಾನದಲ್ಲಿ ನಾಲ್ಕು ಪ್ರದೇಶಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ನೆಹರೂ ಮೈದಾನದ ಕ್ರಿಕೆಟ್ ಪೆವಿಲಿಯನ್ ಬಳಿ ಸಣ್ಣದಾದ ಪ್ರದೇಶ, ನೆಹರೂ ಮೈದಾನದ (ಫುಟ್ಬಾಲ್) ಹಿಂಬದಿಯ ಟೆಂಪೋ ನಿಲುಗಡೆ ಸ್ಥಳ, ಸರ್ಕಾರಿ ನೌಕರ ಸಂಘದ ಸಭಾಭವನದ ಆವರಣ, ಜಿಲ್ಲಾಧಿಕಾರಿ ಕಚೇರಿ ಆವರಣದ ಹಳೆ ಕ್ಯಾಂಟೀನ್ ಜಾಗವನ್ನು ಈಗಾಗಲೇ ಪರಿಶೀಲಿಸಲಾಗಿದೆ. ಇವೆ ಇನ್ನು ಮುಂದೆ ಪ್ರತಿಭಟನೆಯ ತಾಣವಾಗಲಿವೆ.
Click this button or press Ctrl+G to toggle between Kannada and English