ಗಜಾನನ ಮಿತ್ರ ಮಂಡಳಿ ವತಿಯಿಂದ ಕೋಟೆಕಾರಿನಲ್ಲಿ ಬಿಸುಪರ್ಬ

7:05 PM, Wednesday, April 20th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಗಜಾನನ ಮಿತ್ರ ಮಂಡಳಿ ಮಂಗಳೂರು : ಕೋಟೆಕಾರಿನಲ್ಲಿ ಗಜಾನನ ಮಿತ್ರ ಮಂಡಳಿ ಆಶ್ರಯದಲ್ಲಿ ದಿ. 17-4-2011 ರಂದು ವಿಜೃಂಭಣೆಯಿಂದ ಬಿಸುಪರ್ಬ ಆಚರಿಸಲಾಯಿತು. ಬೆಳಿಗ್ಗೆ ಕೋಟೆಕಾರಿನ  ಸಿಂಹವಾಹಿನಿಯ ದೇವಸ್ಥಾನದ ಎದುರಿನ ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ  ಉದ್ಘಾಟನೆ ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಪಂಚಾಯತ್  ಸದಸ್ಯರಾದ ಗೀತಾ.ಜಿ.ಪ್ರಭು ವಹಿಸಿದ್ದರು. ಉದ್ಘಾಟನೆಯನ್ನು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ವಹಿಸಿ ತುಳುನಾಡಿನ ಪ್ರಮುಖ ಹಬ್ಬವಾದ ಬಿಸುಪರ್ಬ ಕಳೆದ ಜೀವನದಲ್ಲಿ ಸುಖ ಹಾಗೂ ದು:ಖವನ್ನು ಮರೆತು  ಮುಂದಿನ ವರ್ಷದಲ್ಲಿ    ಸಂತೋಷವನ್ನು ತರಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ  ಪಂಚಾಯತ್ ಸದಸ್ಯರಾದ  ಸಂತೋಷ್ ಶೆಟ್ಟಿ ಮಾಡೂರು, ಶಶಿಕಲಾ ಗಂಗಾಧರ್ ಗಟ್ಟಿ , ಸಿಂಹವಾಹಿನಿ ದೇವಸ್ಥಾನ ಪ್ರಧಾನ ಅರ್ಚಕ ರವೀಂದ್ರ ನೆತ್ತಿಲ ಗಜಾನನ ಮಿತ್ರ ಮಂಡಳಿ ಅಧ್ಯಕ್ಷರಾದ  ರಾಘವ ಗಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರಿಗೆ, ವಯಸ್ಕರಿಗೆ, ಮಕ್ಕಳಿಗೆ, ಹಗ್ಗ ಎಳೆತ, ಲಗೋರಿ,  ಕಪ್ಪೆ ಜಿಗಿತ,  ಮೇಣದ ಬತ್ತಿ, ಬೀಡಿ ಕಟ್ಟುವುದು, ಆದರ್ಶ ದಂಪತಿ, ಕಣ್ಣಿಗೆ ಬಟ್ಟೆಕಟ್ಟಿ , ಮಡಕೆ ಒಡೆಯುವುದು, ಗೋಣಿ ಚೀಲಿ ಕಟ್ಟಿ ಓಟ ಸೇರಿದಂತೆ ಹಲವು ಸ್ಪಧರ್ೆಗಳನ್ನು ನಡೆಸಲಾಯಿತು. ಮಧ್ಯಾಹ್ನ  ಸಾರ್ವಜನಿಕ ಬಿಸುಪರ್ಬ ಪ್ರಯುಕ್ತ  ಊಟ ಏರ್ಪಡಿಸಲಾಗಿತ್ತು.   ಸಂಜೆ ಕೋಟೆಕಾರು  ಶಾಲೆಯೆದುರು ಸಭಾ ಕಾರ್ಯಕ್ರಮ  ಹಾಗೂ ಬಿಸುಪರ್ಬ ಕುರಿತ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.  ಸಭಾ ಕಾರ್ಯಕ್ರಮದ  ಅಧ್ಯಕ್ಷತೆಯಲ್ಲಿ ನಿವೃತ್ತ ಸೇನಾಧಿಕಾರಿ  ಹಾಗೂ ಪಂಚಾಯತ್  ಸದಸ್ಯ ಕೃಷ್ಣ ಗಟ್ಟಿ ವಹಿಸಿದ್ದರು.  ಉದ್ಘಾಟನೆಯನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ  ಶಿವಾನಂದ ಕಾಚಾರು  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಯು.ಟಿ.ಖಾದರ್ ಮುಖ್ಯ ಭಾಷಣಕಾರರಾಗಿ ಮಂ.ವಿ.ವಿ ಕನ್ನಡ ವಿಭಾಗದ  ಪ್ರೊ.ಡಾ.ಅಭಯ ಕುಮಾರ್, ಮುಖ್ಯ ಅತಿಥಿಗಳಾಗಿ  ತು.ರ.ವೇ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ತಾಲೂಕು ಪಂಚಾಯತ್ ಸದಸ್ಯೆ ರಾಜೀವಿ ಕೆಂಪುಗುಡ್ಡೆ, ಅಯ್ಯಪ್ಪ ದೇವಸ್ಥಾನದ ಮೊಕ್ತೇಸರ ಲಿಂಗಪ್ಪ, ಖ್ಯಾತ ಕಲಾವಿದ ಕೃಷ್ಣಪ್ಪ ಅಡ್ಕ,  ಅರಣ್ಯ ಇಲಾಖೆಯ ಅಶ್ವಿತ್ ಗಟ್ಟಿ, ರಾಘವ ಗಟ್ಟಿ, ಬಾಲಕೃಷ್ಣ  ಗಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಪ್ರವೀಣ್ ಉಚ್ಚಿಲ ಹಾಗೂ ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ವಂದಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಹಾಗೂ ಸಂಗೀತ ಮನೋರಂಜನೆ ಕಾರ್ಯಕ್ರಮಗಳು ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English