ಮುರಳೀ ಶ್ಯಾಮ್‌ಗೆ ಡಾಕ್ಟರೇಟ್ ಪದವಿ

12:18 AM, Thursday, February 11th, 2016
Share
1 Star2 Stars3 Stars4 Stars5 Stars
(4 rating, 5 votes)
Loading...
shyam bhat

ಕುಂಬಳೆ: ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಫಲಿತ ಜ್ಯೋತಿಷ ವಿಭಾಗದಲ್ಲಿ ‘ದೈವಜ್ಞ ಕಾಮಧೇನು ಗ್ರಂಥಸ್ಯ ಸಮೀಕ್ಷಾತ್ಮಕ ಮಧ್ಯಯನಮ್ ಮಹಾ ಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ ಗೆ ಸಮಾನವಾದ ‘ವಿದ್ಯಾವಾರಿಧಿ ಪದವಿಯನ್ನು ಮುರಳೀ ಶ್ಯಾಮ ಪಡೆದಿದ್ದಾರೆ. ಅವರು ಎಡನಾಡು ಗ್ರಾಮದ ಹೊಸಮನೆ ನಿವಾಸಿ ಎಚ್. ಕೃಷ್ಣ ಭಟ್ ಮತ್ತು ಶ್ಯಾಮಲಾ ದಂಪತಿಯ ಪುತ್ರ.

ಮುರಳೀ ಶ್ಯಾಮ್ ಪ್ರೊ.ರಾಧಾಕಾಂತ ಠಾಕೂರ್ ಇವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಮುರಳೀ ಶ್ಯಾಮ್‌ಗೆ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಇವರು ಪೆರಡಾಲ ನವಜೀವನ ಪ್ರೌಢಶಾಲೆ ಮತ್ತು ಮುಜುಂಗಾವು ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿ. ಪ್ರಸ್ತುತ ಮಧ್ಯಪ್ರದೇಶದ ಮಹರ್ಷಿ ಮಹೇಶ್ ಯೋಗಿ ವೇದ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English