ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80 ಕಿಲೋ ಗಾಂಜಾ ವಶಕ್ಕೆ

9:22 PM, Tuesday, February 16th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
Duster Ganja

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80ಕಿಲೋ ಗಾಂಜಾವನ್ನು ಡಿ.ವೈ.ಎಸ್.ಪಿ ಎಂ.ವಿ ಸುಕುಮಾರ್ ನೇತೃತ್ವದ ಪೋಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಡಸ್ಟರ್ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಕಾರ್ಯಾಚರಣೆ ವೇಳೆ ಓಡಿ ಪರಾರಿಯಾಗಿದ್ದಾರೆ.

ಸೋಮವಾರ ಸಂಜೆ 3 ಘಂಟೆ ಸಮಾರಿಗೆ ಕುಂಜತ್ತೂರು ತೂಮಿನಾಡು ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಸಂಶಯಗೊಂಡ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸುವ ವೇಳೆ ಪೋಲೀಸರು ಬೆನ್ನಟ್ಟಿದ ವೇಳೆ ಕಾರನ್ನು ನಿಲ್ಲಿಸಿ ಆರೋಪಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೆ.ಎಲ್ 14- 2941 ಡಸ್ಟರ್ ಕಾರು ಹಾಗೂ ಕಾರಿನಲ್ಲಿದ್ದ 80 ಕೆ.ಜೆ ಗಾಂಜಜಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೋಸ್ಟಲ್ ಸಿ.ಐ ವಿ.ಸುನಿಲ್ ಕುಮಾರ್ , ಮಂಜೇಶ್ವರ ಎಸ್.ಐ ಪ್ರಮೋದ್ ಕಾರ್ಯಾಚರಣೆಯಲ್ಲಿದ್ದರು. ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಶೀಘ್ರವೇ ಬಂಧನ ನಡೆಯಲಿದೆಯೆಂದು ಪೋಲಿಸರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English