ಕೋಡಿಕಲ್: ರೌಡಿ ನಿಗ್ರಹ ದಳದ ಪೊಲೀಸರಿಂದ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯ ಬಂಧನ

Tuesday, October 31st, 2017
ganja

ಮಂಗಳೂರು:ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ನಗರದ ವಿವಿಧೆಡೆ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ಗುರುಪುರ ನಿವಾಸಿ ಮೊಹಮ್ಮದ್ ಶಕೀರ್ (23)ಎಂದು ಗುರುತಿಸಲಾಗಿದೆ. ನಗರದ ಕೋಡಿಕಲ್ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರೌಡಿ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಕೋಡಿಕಲ್ ನ 10 ನೇ ಕ್ರಾಸ್ ಬಳಿ ಆರೋಪಿ ಮೊಹಮ್ಮದ್ ಶಕೀರ್ ನನ್ನು ಬಂಧಿಸಲಾಗಿದೆ. ಬಂಧಿತನಿಂದ 1.8 ಕೆಜಿ ಗಾಂಜಾ, 2 ಮೊಬೈಲ್, ಒಂದು […]

ಗಾಂಜಾ ಮಾರಾಟ ಮಾಡುತಿದ್ದ 3 ಮಂದಿ ಕಾಲೇಜು ವಿದ್ಯಾರ್ಥಿಗಳ ಬಂಧನ

Wednesday, October 25th, 2017
ganja

ಮಂಗಳೂರು: ಗಾಂಜಾ ಮಾರಾಟ ಮಾಡುತಿದ್ದ 3 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ನಗರದ ಶ್ರೀನಿವಾಸ ಕಾಲೇಜು ಹಾಗೂ ಬಲ್ಮಠದ ಪರಿಸರದಲ್ಲಿ ಮಂಗಳೂರಿನ ರೌಡಿ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ. ನಗರದ ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿರುವ ಬೆಲ್ವನ್ ಎಂಬವರ ಕಟ್ಟಡದ 4ನೇ ಮಹಡಿಯಲ್ಲಿ ಬಾಡಿಗೆ ವಾಸವಾಗಿರುವವರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಂಗಳೂರಿನ ರೌಡಿ ನಿಗ್ರಹ ದಳಕ್ಕೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ರೌಡಿ ನಿಗ್ರಹ ದಳದ ಪೊಲೀಸರು ಪಾಂಡೇಶ್ವರ […]

ಒಡಿಶಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

Wednesday, May 24th, 2017
Ganja

ಮಂಗಳೂರು : ಬರ್ಕೆ ಪೊಲೀಸರು ಒಡಿಶಾದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ , ನಗದು ವಶಪಡಿಸಿಕೊಂಡಿದ್ದಾರೆ. ನಗರದ ಮಂಗಳಾ ಕ್ರೀಡಾಂಗಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಒಡಿಶಾದ ಶಾಂತನುಕುಮಾರ್ ಶಾಹು (20) ಹಾಗೂ ಪಣಂಬೂರು ಮೀನಕಳಿಯದ ವಿಕ್ರಮ್ (27) ಎಂಬವರನ್ನು ಬಂಧಿಸಲಾಗಿದೆ. 2.5 ಲಕ್ಷ ಮೌಲ್ಯದ 5 ಕೆಜಿ ಗಾಂಜಾ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80 ಕಿಲೋ ಗಾಂಜಾ ವಶಕ್ಕೆ

Tuesday, February 16th, 2016
Duster Ganja

ಮಂಜೇಶ್ವರ : ಡಸ್ಟರ್ ಕಾರಿನಲ್ಲಿ ಸಾಗಿಸುತ್ತಿದ್ದ 80ಕಿಲೋ ಗಾಂಜಾವನ್ನು ಡಿ.ವೈ.ಎಸ್.ಪಿ ಎಂ.ವಿ ಸುಕುಮಾರ್ ನೇತೃತ್ವದ ಪೋಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಡಸ್ಟರ್ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಕಾರ್ಯಾಚರಣೆ ವೇಳೆ ಓಡಿ ಪರಾರಿಯಾಗಿದ್ದಾರೆ. ಸೋಮವಾರ ಸಂಜೆ 3 ಘಂಟೆ ಸಮಾರಿಗೆ ಕುಂಜತ್ತೂರು ತೂಮಿನಾಡು ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಸಂಶಯಗೊಂಡ ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದು ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸುವ ವೇಳೆ ಪೋಲೀಸರು ಬೆನ್ನಟ್ಟಿದ ವೇಳೆ ಕಾರನ್ನು ನಿಲ್ಲಿಸಿ ಆರೋಪಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೆ.ಎಲ್ 14- […]

ಅಕ್ರಮ ಗಾಂಜಾ ಮಾರಾಟ ಗಾಂಜಾ ಸಹಿತ ಆರೋಪಿ ಸೆರೆ

Wednesday, January 23rd, 2013
Ganja

ಉಡುಪಿ : ಉಡುಪಿ-ಮಣಿಪಾಲ ಪರಿಸರದ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಗಾಂಜಾವನ್ನು ಮಾರಲು ಯತ್ನಿಸುತ್ತಿದ್ದ ಯುವಕನನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಪ್ರವೀಣ್ ನಾಯಕ್ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಮಂಗಳೂರು ತಾಲೂಕು ಕೋಡಿ ಉಳ್ಳಾಲ ನಿವಾಸಿ ಮೊಹ ಮ್ಮದ್ ಇಕ್ಬಾಲ್ ಬಂಧಿತ. ಈತನಿಂದ ನಗದು 420 ರೂಪಾಯಿ ಮತ್ತು 580 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾ ಮೌಲ್ಯ 16 ಸಾವಿರ ಎಂದು ಅಂದಾಜಿಸಲಾಗಿದೆ. ಮಂಗಳವಾರ ಖಚಿತ ಮಾಹಿತಿ ಪಡೆದ ಡಿಸಿಐಬಿ ಇನ್ಸ್‌ಪೆಕ್ಟರ್‌ ಪ್ರವೀಣ್‌ ಎಚ್‌. ನಾಯಕ್‌ ನೇತೃತ್ವದ ತಂಡ […]