ಪ್ರಧಾನ ಮಂತ್ರಿಗೆ ಪತ್ರ, ಕೂಡಲೇ ರಸ್ತೆ ಡಾಮರೀಕರಣಕ್ಕೆ ಚಾಲನೆ

11:53 PM, Tuesday, February 16th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
Ashwal Shetty

ಉಪ್ಪಳ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೊಬ್ಬ ರಾಷ್ಟ್ರದ ಪ್ರಧಾನ ಮಂತ್ರಿಗಳಿಗೆ ರಸ್ತೆ ಅವ್ಯವಸ್ಥೆಯ ಬಗ್ಗೆ ಬರೆದ ಪತ್ರದಿಂದ ಸುದ್ದಿಯಾಗಿದ್ದಾನೆ.

ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೈಲು ನಿವಾಸಿ ಬಾಬು ಶೆಟ್ಟಿ ಹಾಗೂ ಉದಯ ಶೆಟ್ಟಿ ದಂಪತಿಗಳ ಪುತ್ರ, ಮಂಗಳೂರಿನ ಶಾರದಾ ವಿದ್ಯಾಲಯದ ಪದವಿ ವಿದ್ಯಾರ್ಥಿ ಅಶ್ವಲ್ ಶೆಟ್ಟಿ ತಮ್ಮ ಊರು ಕೋಡಿಬೈಲಿನ ರಸ್ತೆ ದುರವಸ್ಥೆಯ ಬಗ್ಗೆ ಪ್ರಧಾನ ಮಂತ್ರಿ ಮೋದಿಯವರಿಗೆ ನಾಲ್ಕು ವಾರಗಳ ಹಿಂದೆ ಸ್ಪೀಡ್ ಪೋಸ್ಟ್ ಮೂಲಕ ಸ್ಥಿತಿಗತಿಗಳ ವಿವರ ಸಹಿತ ಮನವಿ ನೀಡಿದ್ದ.ಇದಕ್ಕೆ ಸ್ಪಂದಿಸಿದ ಪ್ರಧಾನಿಗಳ ಕಾರ್ಯಾಲಯ ಕೂಡಲೇ ಕೇರಳ ಸರಕಾರದ ವಿಧಾನ ಸಭಾ ಕಾರ್ಯಾಲಯ ಕೂಡಲೇ ಈ ರಸ್ತೆಯ ಡಾಮರೀಕರಣ ಪ್ರಾರಂಭಿಸುವಂತೆ ಮಂಗಲ್ಪಾಡಿ ಗ್ರಾಮ ಪಂಚಾಯತ್ ಗೆ ನಿರ್ದೇಶನ ನೀಡಿದ್ದು, ಶನಿವಾರದಿಂದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದೆ.

ಉಪ್ಪಳ ಕೋಡಿಬೈಲು ಸಂಪರ್ಕದ ಸುಮಾರು 200 ಮೀಟರ್ ರಸ್ತೆ ಕಳೆದ ಹಲವು ವರ್ಷಗಳಿಂದ ಡಾಮರೀಕರಣಗೊಳ್ಳದೆ ತೀವ್ರ ಸಂಕೀರ್ಣಾವಸ್ಥೆಗೆ ತಲಪಿತ್ತು.ನಿತ್ಯ ನೂರಾರು ವಾಹನಗಳು,ಜನರು ಓಡಾಡುವ ಈ ರಸ್ತೆಯ ಸಂಚಾರ ಸಮಸ್ಯೆಯನ್ನು ಮನಗಂಡು ವಿವಿಧ ಮಾಧ್ಯಮಗಳಲ್ಲಿ ಹೇಳಲ್ಪಡುವ ಪ್ರಧಾನ ನರೇಂದ್ರ ಮೋದಿಯವರ ಆಡಳಿತಾತ್ಮಕ ಕಾಳಜಿಗಿರುವ ಸ್ಪಂಧನದ ಬಗ್ಗೆ ಅರಿತು ಅಶ್ವಲ್ ಶೆಟ್ಟಿ ಪ್ರಧಾನಿಗಳ ಕಾರ್ಯಾಲಯಕ್ಕೆ ಮನವಿ ನೀಡಿದ್ದರು.ಬಳಿಕ ಪ್ರಧಾನಿಗಳ ಕಾರ್ಯಾಲಯ ಕೇರಳ ಸರಕಾರಕ್ಕೆ ಈ ಬಗ್ಗೆ ಲಕ್ಷ್ಯವಹಿಸಲು ಸೂಚಿಸಿದ್ದು,ಕಾಮಗಾರಿ ಆರಂಭಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English