ತಂಬಾಕು ಉದ್ಯಮಗಳ ಕುತಂತ್ರದಿಂದ ಯುವ-ಪೀಳಿಗೆಗಳ ರಕ್ಷಣೆ ಮಾಡುವುದು, ವಿಶ್ವ ತಂಬಾಕು ರಹಿತ ದಿನದ ಧ್ಯೇಯ : ಶ್ರೀರಾಮುಲು

Sunday, May 31st, 2020
Sri-Ramulu

ಬೆಂಗಳೂರು : ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಧ್ಯೇಯ ವಾಕ್ಯವೆಂದರೆ, “ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ಯುವ-ಪೀಳಿಗೆಗಳ ರಕ್ಷಣೆ ಮಾಡುವುದು” ಎಂದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು. ಇಂದು ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಶ್ವ ತಂಬಾಕು ರಹಿತ ದಿನದ ಮುಖ್ಯ ಉದ್ದೇಶ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ಸಾವು-ನೋವುಗಳು ವಿವಿಧ ಅಸಾಂಕ್ರಮಿಕ ಕಾಯಿಲೆಗಳಿಗೆ ತುತ್ತಾಗುವುದರ ಕುರಿತು […]

ಆಧುನಿಕ ಕೃಷಿ ತಂತ್ರಜ್ಞಾನಗಳು ಯುವ ಪೀಳಿಗೆಯನ್ನು ಆಕರ್ಷಿಸಬಲ್ಲುದು- ಹರ್ಷಾದ್ ವರ್ಕಾಡಿ

Thursday, August 18th, 2016
Agriculture-education

ಮಂಜೇಶ್ವರ : ಪರಂಪರಾಗತ ಕೃಷಿಯ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಕೃಷಿಗೆ ಹೊಸ ಸ್ವರೂಪವನ್ನು ನೀಡಿ ಯುವಕರನ್ನು ಕೃಷಿಯತ್ತ ಆಕರ್ಷಿಸುವ ಯೋಜನೆಗಳನ್ನು ಸರಕಾರ ರೂಪಿಸಬೇಕೆಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ಪಟ್ಟರು. ಮೀಂಜ ಗ್ರಾಮ ಪಂಚಾಯತು ಹಾಗೂ ಮೀಂಜ ಕೃಷಿ ಭವನದ ಜಂಟಿ ಆಶ್ರಯದಲ್ಲಿ ಸಿಂಹ ಮಾಸದ ಪ್ರಥಮ ದಿ ಬುಧವಾರ ಮೀಂಜ ಗ್ರಾಮ ಪಂಚಾಯತು ಮಾರ್ಕೆಟ್ ಹಾಲ್‌ನಲ್ಲಿ ನಡೆದ ಕೃಷಿಕರ ದಿನವನ್ನು ಉದ್ಘಾಟಿಸಿ,ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ […]

ಕ್ಷೇತ್ರ ಐತಿಹ್ಯಗಳು ಇಂದಿನ ಪೀಳಿಗೆಗೆ ಪೂರಕ ಮಾಹಿತಿ- ಡಾ.ಡಿ.ವೀರೇಂದ್ರ ಹೆಗ್ಗಡೆ

Tuesday, August 2nd, 2016
Heggade

ಬದಿಯಡ್ಕ: ಕ್ಷೇತ್ರ ಇತಿಹಾಸವನ್ನು ವಿವರಿಸುವ ಐತಿಹ್ಯ ಪುಸ್ತಕಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದ್ದು ಇದನ್ನು ಸಂಗ್ರಹಿಸಿ ಸಮಾಜದ ಮುಂದಿಡುವ ಹಿರಿಯರಾದ ಲೇಖಕ ಕೇಳುಮಾಸ್ತರ್ ಅಗಲ್ಪಾಡಿಯವರ ಕಾರ್ಯ ಶ್ಲಾಘನೀಯವೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ಲಾಘಿಸಿದರು. ಅವರು ಕೇಳು ಮಾಸ್ತರ್ ಅಗಲ್ಪಾಡಿ ರಚಿಸಿದ ಪರಶ್ಯಿನಿಕಡವು ಕ್ಷೇತ್ರದ ಐತಿಹ್ಯ ಹಾಗೂ ಅನುಷ್ಠಾನ ಕ್ರಮಗಳನ್ನೊಳಗೊಂಡ ಶ್ರೀಮುತ್ತಪ್ಪನ್ ಎಂಬ ಪುಸ್ತಕವನ್ನು ಶ್ರೀಕ್ಷೇತ್ರದಲ್ಲಿ ಅವಲೋಕನ ನಡೆಸಿ ಈ ಮಾತುಗಳನ್ನಾಡಿದರು. ವರ್ತಮಾನ ಕಾಲದಲ್ಲಿ ಜಾತಿ,ಮತ,ಪಂಥಗಳ ಸೀಮೋಲ್ಲಂಘನೆ ಮಾಡಿದ ಶ್ರೀಮುತ್ತಪ್ಪನ್ ದೈವದ ಕಾರಣೀಕತೆ ಹಾಗೂ ಉತ್ತರ ಕೇರಳದ […]

ಪ್ರಧಾನ ಮಂತ್ರಿಗೆ ಪತ್ರ, ಕೂಡಲೇ ರಸ್ತೆ ಡಾಮರೀಕರಣಕ್ಕೆ ಚಾಲನೆ

Tuesday, February 16th, 2016
Ashwal Shetty

ಉಪ್ಪಳ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯೊಬ್ಬ ರಾಷ್ಟ್ರದ ಪ್ರಧಾನ ಮಂತ್ರಿಗಳಿಗೆ ರಸ್ತೆ ಅವ್ಯವಸ್ಥೆಯ ಬಗ್ಗೆ ಬರೆದ ಪತ್ರದಿಂದ ಸುದ್ದಿಯಾಗಿದ್ದಾನೆ. ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೈಲು ನಿವಾಸಿ ಬಾಬು ಶೆಟ್ಟಿ ಹಾಗೂ ಉದಯ ಶೆಟ್ಟಿ ದಂಪತಿಗಳ ಪುತ್ರ, ಮಂಗಳೂರಿನ ಶಾರದಾ ವಿದ್ಯಾಲಯದ ಪದವಿ ವಿದ್ಯಾರ್ಥಿ ಅಶ್ವಲ್ ಶೆಟ್ಟಿ ತಮ್ಮ ಊರು ಕೋಡಿಬೈಲಿನ ರಸ್ತೆ ದುರವಸ್ಥೆಯ ಬಗ್ಗೆ ಪ್ರಧಾನ ಮಂತ್ರಿ ಮೋದಿಯವರಿಗೆ ನಾಲ್ಕು ವಾರಗಳ ಹಿಂದೆ ಸ್ಪೀಡ್ ಪೋಸ್ಟ್ ಮೂಲಕ ಸ್ಥಿತಿಗತಿಗಳ ವಿವರ ಸಹಿತ ಮನವಿ ನೀಡಿದ್ದ.ಇದಕ್ಕೆ ಸ್ಪಂದಿಸಿದ ಪ್ರಧಾನಿಗಳ […]