ಕ್ಷೇತ್ರ ಐತಿಹ್ಯಗಳು ಇಂದಿನ ಪೀಳಿಗೆಗೆ ಪೂರಕ ಮಾಹಿತಿ- ಡಾ.ಡಿ.ವೀರೇಂದ್ರ ಹೆಗ್ಗಡೆ

9:21 AM, Tuesday, August 2nd, 2016
Share
1 Star2 Stars3 Stars4 Stars5 Stars
(No Ratings Yet)
Loading...

Heggadeಬದಿಯಡ್ಕ: ಕ್ಷೇತ್ರ ಇತಿಹಾಸವನ್ನು ವಿವರಿಸುವ ಐತಿಹ್ಯ ಪುಸ್ತಕಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದ್ದು ಇದನ್ನು ಸಂಗ್ರಹಿಸಿ ಸಮಾಜದ ಮುಂದಿಡುವ ಹಿರಿಯರಾದ ಲೇಖಕ ಕೇಳುಮಾಸ್ತರ್ ಅಗಲ್ಪಾಡಿಯವರ ಕಾರ್ಯ ಶ್ಲಾಘನೀಯವೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ಲಾಘಿಸಿದರು.

ಅವರು ಕೇಳು ಮಾಸ್ತರ್ ಅಗಲ್ಪಾಡಿ ರಚಿಸಿದ ಪರಶ್ಯಿನಿಕಡವು ಕ್ಷೇತ್ರದ ಐತಿಹ್ಯ ಹಾಗೂ ಅನುಷ್ಠಾನ ಕ್ರಮಗಳನ್ನೊಳಗೊಂಡ ಶ್ರೀಮುತ್ತಪ್ಪನ್ ಎಂಬ ಪುಸ್ತಕವನ್ನು ಶ್ರೀಕ್ಷೇತ್ರದಲ್ಲಿ ಅವಲೋಕನ ನಡೆಸಿ ಈ ಮಾತುಗಳನ್ನಾಡಿದರು.

ವರ್ತಮಾನ ಕಾಲದಲ್ಲಿ ಜಾತಿ,ಮತ,ಪಂಥಗಳ ಸೀಮೋಲ್ಲಂಘನೆ ಮಾಡಿದ ಶ್ರೀಮುತ್ತಪ್ಪನ್ ದೈವದ ಕಾರಣೀಕತೆ ಹಾಗೂ ಉತ್ತರ ಕೇರಳದ ಧರ್ಮಸ್ಥಳವೆಂದು ಪ್ರಸಿದ್ಧಿಗೆ ಪಾತ್ರವಾದ ಪರಶ್ಯನಿಕಡವು ದೈವಸ್ಥಾನದ ದರ್ಶನಾಕಾಂಕ್ಷಿಗಳಾದ ಭಕ್ತರಿಗೆ ಶ್ರೀದೈವದ ಮಹಿಮಾ ವಿಶೇಷತೆಗಳ ಬಗ್ಗೆ ತಿಳಿಯಲು ಕ್ಷೇತ್ರ ಐತಿಹ್ಯದ ಪುಸ್ತಕ ಸಹಕಾರಿಯಾಗುವುದಲ್ಲದೆ ಇನ್ನೂ ಹಲವು ಕ್ಷೇತ್ರ ಮಹತ್ವವನ್ನು ಸಾರುವ ಪುಸ್ತಕಗಳು ಸಾರಸ್ವತ ಲೋಕಕ್ಕೆ ಸಮರ್ಪಣೆಯಾಗಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸ ಕೇಳು ಮಾಸ್ತರ್ ಅಗಲ್ಪಾಡಿ, ಅಖಿಲೇಷ್ ಯಾದವ್ ನೆಟ್ಟಣಿಗೆ, ಪ್ರಶಾಂತ್ ರೈ ಬೆಳಿಂಜ, ಉದ್ಯಮಿ ತಾರನಾಥ ರೈ ಪೆರ್ಲ, ಕವಯತ್ರಿ ರಾಜಶ್ರೀ ಟಿ.ರೈ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English