ಮಕ್ಕಳ ಸ್ನೇಹಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿಯವರಿಗೆ ಅಗ್ನಿಪರೀಕ್ಷೆ…

5:46 PM, Wednesday, February 17th, 2016
Share
1 Star2 Stars3 Stars4 Stars5 Stars
(5 rating, 4 votes)
Loading...

Padmanabha Kottari

ಬಂಟ್ವಾಳ : ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಅತ್ಯಂತ ಹೆಚ್ಚು ಕುತೂಹಲವನ್ನು ಉಂಟು ಮಾಡಿರುವುದು ಸಜೀಪ ಮುನ್ನೂರು ಕ್ಷೇತ್ರ. ಕಾರಣ ಈ ಕ್ಷೇತ್ರ ಎರಡು ರಣಕಲಿಗಳ ಕಾದಾಟದ ಕ್ಷೇತ್ರವಾಗಿ ಬದಲಾಗಿದೆ. ಭಾರತೀಯ ಜನತಾ ಪಕ್ಷದಿಂದ ಈ ಬಾರಿ ಇಲ್ಲಿ ಸ್ಪರ್ಧಿಸುತ್ತಿರುವವರು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ. ಒಂದು ಕಡೆ ಕಾಂಗ್ರೆಸ್ಸಿನ ಚಂದ್ರಪ್ರಕಾಶ್ ಶೆಟ್ಟಿಯವರು ಕಣದಲ್ಲಿದ್ದರೆ, ಮತ್ತೊಂದೆಡೆ ಸಜ್ಜನ ರಾಜಕಾರಣಿ ಕೆ.ಪದ್ಮನಾಭ ಕೊಟ್ಟಾರಿಯವರು ಬಿಜೆಪಿಗೆ ಈ ಕ್ಷೇತ್ರವನ್ನು ಗಳಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ.

1979 ರಿಂದ ರಾಜಕೀಯ ಜೀವನದಲ್ಲಿ ಇರುವ ಕೆ.ಪದ್ಮನಾಭ ಕೊಟ್ಟಾರಿಯವರಿಗೆ ತಾವು ಮಾಡಿರುವ ಜನಪರ ಕೆಲಸಗಳೇ ಶ್ರೀರಕ್ಷೆ. ಸಹಕಾರಿ ಸೇವೆಗಳು, ಧಾರ್ಮಿಕ-ಸಾಮಾಜಿಕ-ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಗುರುತಿಸಿ ಮತದಾರರು ಮಾಡುವ ಆರ್ಶಿವಾದವೇ ಇವರಿಗೆ ಗೆಲುವನ್ನು ತಂದುಕೊಡಲಿದೆ ಎನ್ನುವುದು ಇವರ ಅಚಲ ನಂಬಿಕೆ. ವಿಟ್ಲ ವಿಧಾನ ಸಭಾ ಕ್ಷೇತ್ರದಲ್ಲಿ ಇವರು ಶಾಸಕರಾಗಿದ್ದ ಸಮಯದಲ್ಲಿ ಸಜೀಪ-ಮುನ್ನೂರು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಇವರು ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಸಜೀಪ ಮೂಡದ ಕೃಷಿಕರಿಗಾಗಿ 2007-08 ರಲ್ಲಿ 2.5 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯ ಮಂಜೂರಾತಿ ಮತ್ತು ಕಾಮಗಾರಿ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಗರಿಷ್ಟ ಸಂಖ್ಯೆಯಲ್ಲಿ ಅಕ್ರಮ-ಸಕ್ರಮ ಮನವಿಗಳ ಇತ್ಯರ್ಥ ಮಾಡಿದ್ದಾರೆ. ಇವರಿಗೆ ಮಕ್ಕಳ ಶಿಕ್ಷಣ ಮತ್ತು ರಕ್ಷಣೆಯ ಕಾಳಜಿಗಾಗಿ ಎರಡು ಬಾರಿ ” ಮಕ್ಕಳ ಸ್ನೇಹಿ ಶಾಸಕ” ಎನ್ನುವ ಪುರಸ್ಕಾರ ಸಿಕ್ಕಿದೆ.

ಇಂತಹ ಜನಪರ ಕೆಲಸಗಳ ಹಿನ್ನೆಲೆಯಲ್ಲಿ ಕೆ.ಪದ್ಮನಾಭ ಕೊಟ್ಟಾರಿಯವರು ಗೆದ್ದು ಬಂದ ಬಳಿಕ ಅನೇಕ ದೂರದೃಷ್ಟಿ ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲಿ ಶಿಕ್ಷಣ, ಕ್ಷೇತ್ರದ ಕುಡಿಯುವ ನೀರು, ದಾರಿದೀಪ, ಬಿಪಿಎಲ್ ಕುಟುಂಬಕ್ಕೆ ದೊರಕಿಸಿಕೊಡಲು ಉಳಿದಿರುವ ಯೋಜನೆಗಳು, ರಸ್ತೆಗಳ ಅಭಿವೃದ್ಧಿ, ಕೃಷಿಕರಿಗೆ ಮತ್ತು ಮಹಿಳೆಯರಿಗೆ ಸಿಗಬೇಕಾದ ಹತ್ತು ಹಲವು ಯೋಜನೆಗಳು ಸೇರಿವೆ. ಇಂತಹ ಜನಪರ ಹೋರಾಟಗಾರನಿಗೆ ಜನ ಮಣೆ ಹಾಕಿದರೆ ಸಜೀಪ-ಮುನ್ನೂರು ಕ್ಷೇತ್ರ ಅಭಿವೃದ್ಧಿಯಲ್ಲಿ ನಾಗಾಲೋಟದಿಂದ ಓಡುವ ದಿನ ದೂರವಿಲ್ಲ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English