ಮಕ್ಕಳ ಸ್ನೇಹಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿಯವರಿಗೆ ಅಗ್ನಿಪರೀಕ್ಷೆ…

Wednesday, February 17th, 2016
Padmanabha Kottari

ಬಂಟ್ವಾಳ : ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಅತ್ಯಂತ ಹೆಚ್ಚು ಕುತೂಹಲವನ್ನು ಉಂಟು ಮಾಡಿರುವುದು ಸಜೀಪ ಮುನ್ನೂರು ಕ್ಷೇತ್ರ. ಕಾರಣ ಈ ಕ್ಷೇತ್ರ ಎರಡು ರಣಕಲಿಗಳ ಕಾದಾಟದ ಕ್ಷೇತ್ರವಾಗಿ ಬದಲಾಗಿದೆ. ಭಾರತೀಯ ಜನತಾ ಪಕ್ಷದಿಂದ ಈ ಬಾರಿ ಇಲ್ಲಿ ಸ್ಪರ್ಧಿಸುತ್ತಿರುವವರು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ. ಒಂದು ಕಡೆ ಕಾಂಗ್ರೆಸ್ಸಿನ ಚಂದ್ರಪ್ರಕಾಶ್ ಶೆಟ್ಟಿಯವರು ಕಣದಲ್ಲಿದ್ದರೆ, ಮತ್ತೊಂದೆಡೆ ಸಜ್ಜನ ರಾಜಕಾರಣಿ ಕೆ.ಪದ್ಮನಾಭ ಕೊಟ್ಟಾರಿಯವರು ಬಿಜೆಪಿಗೆ ಈ ಕ್ಷೇತ್ರವನ್ನು ಗಳಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. 1979 ರಿಂದ ರಾಜಕೀಯ […]

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ನ ಪ್ರಗತಿ ಪರಿಶೀಲನೆ ಸಭೆ

Friday, August 12th, 2011
KDP meeting/ಪ್ರಗತಿ ಪರಿಶೀಲನೆ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ನ ಪ್ರಗತಿ ಪರಿಶೀಲನೆ ಸಭೆಯು ಶೈಲಜಾ ಭಟ್‌ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ನಡೆಯಿತು. ಹತ್ತು ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಗ್ರಾಮೀಣ ಆರೋಗ್ಯ, ರಸ್ತೆ, ಶಿಕ್ಷಣ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಪಂಚಾಯತ್‌ನ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧ್ಯಕ್ಷರು ಸಭೆಯಲ್ಲಿ ಹೇಳಿದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್‌. ವಿಜಯ್‌ಪ್ರಕಾಶ್‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ […]

ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರಿಗೆ ಬೀಳ್ಕೊಡುಗೆ

Wednesday, May 11th, 2011
ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರಿಗೆ ಬೀಳ್ಕೊಡುಗೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ 12 ವರ್ಷ ಆರು ತಿಂಗಳ ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲ ರಿಗೂ ಮುಖ್ಯ ಯೋಜನಾಧಿಕಾರಿ ಶ್ರೀ ಪಿ ತಾಕತ್ ರಾವ್ ಅವರು ಕೃತಜ್ಞತೆ ಸಲ್ಲಿಸಿದರು. ಇಂದು ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರ ನೆರವಿನಿಂದ ತಮ್ಮ ಕೆಲಸ ಸುಗಮವಾಗಿ ಸಾಗಿದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಸ್ವಚ್ಛತಾಂದೋಲನದಲ್ಲಿ ಜಿಲ್ಲೆಯ ಯಶೋಗಾಥೆ ಹಾಗೂ ಇದಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು. ಮುಖ್ಯ ಯೋಜನಾಧಿಕಾರಿಗಳಾಗಿ ಅಧಿಕಾರ […]

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕೆ.ಟಿ ಶೈಲಾಜಾ ಭಟ್

Wednesday, February 9th, 2011
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆ

ಮಂಗಳೂರು,ಫೆ.08: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 2011-12ರ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಸದಸ್ಯರಾದ ಕೆ.ಟಿ ಶೈಲಾಜಾ ಭಟ್  ಅವರು ಅಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಧರ್ಮಸ್ಥಳ ಕ್ಷೇತ್ರದ ಬಿಜೆಪಿ ಸದಸ್ಯೆ ಧನಲಕ್ಷ್ಮೀ ಜನಾರ್ಧನ್.ಡಿ ಇವರು ಅಯ್ಕೆಯಾಗಿದ್ದಾರೆ . ಚುನಾವಣಾಧಿಕಾರಿ   ಎಂ.ವಿ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಹಾಯಕ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ  ಅವರ ಉಪಸ್ಥಿತಿಯಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ  ಅಧ್ಯಕ್ಷ ಹಾಗೂ ಉಪಾಧ್ಯಕ್ಷ  ಚುನಾವಣೆ ನಡೆಯಿತು. ಒಟ್ಟು 35 ಸದಸ್ಯ ಬಲದ ದ.ಕ.ಜಿಲ್ಲಾ ಪಂಚಾಯತ್‌ನಲ್ಲಿ ಬಿಜೆಪಿ […]