ನಮ್ಮ ಸಂಸ್ಕೃತಿಯಲ್ಲಿ ಹೆತ್ತ ತಾಯಿಯನ್ನು ಪ್ರತ್ಯಕ್ಷ ದೇವರೆಂದು ಆರಾಧಿಸಲಾಗುತ್ತಿದೆ

8:59 PM, Thursday, February 25th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Ankatimar

ಮುಳ್ಳೇರಿಯಾ: ವಿಶ್ವದಲ್ಲಿ ಶ್ರೇಷ್ಠ ನಾಗರೀಕತೆಯನ್ನು ಹೊಂದಿರುವ ಭಾರತ ತನ್ನ ವಿವಿಧ ಆಚಾರ,ವೈವಿಧ್ಯಮಯ ಸಂಸ್ಕೃತಿ ಹಾಗೂ ಆರಾಧನೆಗಳಿಂದ ಮಹತ್ವ ಪಡೆದಿದೆ.ದೇವರ ಮೇಲಿನ ಅಪಾರ ನಂಬಿಕೆ,ವಿಶ್ವಾಸಗಳಿಂದ ದೇವರ ಕೋಣೆಯಂತೆ ನಮ್ಮ ದೇಶ ಇತರ ರಾಷ್ಟ್ರಗಳಿಗೆ ಆಕರ್ಷಿಸಲ್ಪಡುತ್ತಿದೆಯೆಂದು ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಕತ್ತಿಮಾರ್ ಶ್ರೀರಕ್ತೇಶ್ವರಿ ದೈವಸ್ಥಾನದ ನಾಗ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ನಮ್ಮ ಸಂಸ್ಕೃತಿಯಲ್ಲಿ ಹೆತ್ತ ತಾಯಿಯನ್ನು ಪ್ರತ್ಯಕ್ಷ ದೇವರೆಂದು ಆರಾಧಿಸಲಾಗುತ್ತಿದೆ.ಬೇರೆಲ್ಲೂ ಕಂಡು ಬರಲಾರದ ಈ ಸಾಂಸ್ಕೃತಿಕ ಶ್ರೀಮಂತಿಕೆಯ ಹಿಂದೆ ಪ್ರಾಚೀನ ಕಾಲದ ಮಹಾನ್ ಸಾಧಕರ,ಚಿಂತಕರ ಜೀವನಾನುಭವ ಪರಿಪುಷ್ಟಗೊಂಡಿರುವುದು ವ್ಯಕ್ತವಾಗುತ್ತದೆಯೆಂದು ತಿಳಿಸಿದ ಅವರು ಪ್ರತಿಯೊಂದು ಆಚರಣೆ,ನಂಬಿಕೆಯ ಹಿಂದೆ ಪ್ರಭಲವಾದ ಹಿನ್ನೆಲೆ ಮತ್ತು ಮಹತ್ವವಿದೆಯೆಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ,ಸತ್ಕರ್ಮಗಳಿಂದ ದೈವ-ದೇವರುಗಳ ಸೇವಾ ಭಾಗ್ಯ ಒದಗಿಬರುತ್ತದೆ.ಸತ್ಕರ್ಮ ದೈವತ್ವಕ್ಕೇರಿಸುವ ಜೊತೆಗೆ ಶಾಂತಿ,ನೆಮ್ಮದಿಗಳಿಗೆ,ಸಮಾಜೋದ್ದಾರಗಳಿಗೆ ಕಾರಣವಾಗುತ್ತದೆಯೆಂದು ತಿಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕುಂಜತ್ತಾಯ ಮಲ್ಲಾವರ ಅಧ್ಯಕ್ಷತೆ ವಹಿಸಿದ್ದರು. ಕಾನತ್ತೂರು ನಾಲ್ವರ್ ದೈವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಜ್ಯೋತಿಚಂದ್ರನ್,ಕಾಳಿಕಾಂಬಾ ಆಚಿಜನೇಯ ದೇವಸ್ಥಾನದ ಧರ್ಮದರ್ಶಿ ಡಾ.ವಿಶ್ವನಾಥ ಕುಕ್ಕಾಜೆ,ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.

ಬಾಬು ರೈ ಬೆಳಿಂಜಗುತ್ತು,ನಾರಾಯಣ ಶೆಟ್ಟಿ ಕೆಳಗಿನ ಬೆಳಿಂಜ,ಪುಂಡರೀಕಾಕ್ಷ ಕೆದಿಲಾಯ,ಶಿವರಾಮ ಕಡಂಬಳಿತ್ತಾಯ ಅಂಕೊತ್ತಿಮಾರ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಹರ್ಷಕುಮಾರ್ ರೈ ಬೆಳಿಂಜ ಸ್ವಾಗತಿಸಿ,ಪ್ರಚಾರ ಸಮಿತಿ ಸಂಚಾಲಕ ಶ್ರೀಧರ ಬಿ.ಏತಡ್ಕ ವಂದಿಸಿದರು.ಸಾಂಸ್ಕೃತಿಕ ಸಮಿತಿ ಸಂಚಾಲಕ ಕೃಷ್ಣ ಡಿ.ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English