ಮೊಬೈಲ್ ಗೀಳು -ರೈಲು ಡಿಕ್ಕಿಹೊಡೆದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

11:48 PM, Sunday, February 28th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
vaishak

ಕಾಸರಗೋಡು: ಅತಿಯಾದ ಮೊಬೈಲ್ ಗೀಳಿಗೊಳಗಾದ ವಿದ್ಯಾರ್ಥಿಯೊಬ್ಬ ರೈಲು ಡಿಕ್ಕಿಯಾಗಿ ದಾರುಣನಾಗಿ ಮೃತಪಟ್ಟ ಘಟನೆ ಕಾಸರಗೊಡು ರೈಲು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ತೃಶೂರ್ ಕುನ್ನಂಕುಳಂ ನ ತೆಕ್ಕೆಪರಂಬಿಲ್ ನ ರವಿ ಕುಮಾರ್ ಎಂಬವರ ಪುತ್ರ ಹಾಗೂ ಪೊವ್ವಲ್ ಎಲ್‌ಬಿಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಕೆ.ಆರ್.ವೈಶಾಖ್ (23)ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.

ಶನಿವಾರ ಹಾಗೂ ಭಾನುವಾರ ಕಾಲೇಜಿಗೆ ರಜೆಯಾಗಿರುವುದರಿಂದ ಊರಿಗೆ ತೆರಳಲು ವೈಶಾಖ್ ಕಾಸರಗೋಡಿಗೆ ಬಂದಿದ್ದನು. ಅಲ್ಲಿ ಮೊಬೈಲ್ ಪೋನ್ ನ ಇಯರ್ ಫೋನ್ ಕಿವಿಗಿರಿಸಿ ರೈಲು ಹಳಿ ಸಮೀಪ ನಡೆದು ಸಾಗುತ್ತಿದ್ದಾಗ ರೈಲು ಗಾಡಿಯೊಂದು ಆಗಮಿಸಿದ್ದು, ಕಿವಿಗಿರಿಸಿದ್ದ ಇಯರ್ ಪೋನ್ ಕಾರಣ ರೈಲಿನ ಶಬ್ದ ಕೇಳಿರಲಿಲ್ಲ. ರೈಲು ಬರುತ್ತಿರುವುದನ್ನು ಅಲ್ಲಿ ಸೇರಿದ್ದ ಕೆಲವರು ಕೂಗಿ ಕರೆದು ಹೇಳಿದ್ದರೂ ಅದು ವೈಶಾಖ್ ನ ಗಮನಕ್ಕೆ ಬಂದಿರಲಿಲ್ಲ. ಅಷ್ಟರೊಳಗೆ ರೈಲುಗಾಡಿ ವೈಶಾಖ್ ಗೆ ಡಿಕ್ಕಿಹೊಡೆದು ಗಂಭೀರ ಗಾಯಗೊಂಡನು. ಸುದ್ದಿ ತಿಳಿದು ಅಗ್ನಿ ಶಾಮಕದಳ ಆಗಮಿಸಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ವೈಶಾಖ್‌ನ ಪ್ರಾಣಪಕ್ಷಿ ಹಾರಿಹೋಗಿತ್ತು.ಮೃತದೇಹವನ್ನು ಶನಿವಾರ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.ಮೃತನು ತಂದೆ,ತಾಯಿ,ಸಹೋದರ,ಸಹೋದರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English