ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆ. 2 ರಂದು 13 ಜಿಲ್ಲೆಗಳಲ್ಲಿ ಬಂದ್

Thursday, July 26th, 2018
Somashekar

ಹುಬ್ಬಳ್ಳಿ : ಪ್ರತ್ಯೇಕ ಉತ್ತರ ಕರ್ನಾಟಕಕಕ್ಕೆ ಆಗ್ರಹಿಸಿ ಆ. 2 ರಂದು 13 ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗುವುದು ಎಂದು ಉ.ಕ.ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸೋಮಶೇಖರ ಕೋತಂಬರಿ ಹೇಳಿದ್ದಾರೆ. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಮ್ಮ ಬಂದ್ ಕರೆಗೆ ಈಗಾಗಲೇ 25 ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು. ಈ ಬಾರಿಯ ಬಜೆಟ್ ನಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶೇ.82ರಷ್ಟು ಅನುದಾನವನ್ನು ದಕ್ಷಿಣ ಕರ್ನಾಟಕಕಕ್ಕೆ ನೀಡಿದ್ದಾರೆ. ಮತ್ತು ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿದ್ದಾರೆ. ಕಳೆದ […]

ಮಹಾ ಬಂದ್‌ ಮುಕ್ತಾಯ; ಸರ್ಕಾರಿ ಬಸ್‌ ಸಂಚಾರ ಆರಂಭ

Thursday, January 25th, 2018
finished

ಬೆಂಗಳೂರು: ಮಹದಾಯಿ ನದಿ ನೀರಿನ ಸಮಸ್ಯೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಬಂದ್‌ನಿಂದಾಗಿ ಸ್ಥಗಿತಗೊಳಿಸಲಾಗಿದ್ದ ಸರ್ಕಾರಿ ಬಸ್‌ಗಳ ಸಂಚಾರ ಗುರುವಾರ ಸಂಜೆ 4 ಗಂಟೆಯ ವೇಳೆಗೆ ರಾಜ್ಯಾಧ್ಯಂತ ಪುನರಾರಂಭಗೊಂಡಿದೆ. ಬೆಂಗಳೂರು ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ. ರಾಜ್ಯದೆಲ್ಲೆಡೆ 800ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಿದ್ದು ಇದರಿಂದಾಗಿ ಪರದಾಡುತ್ತಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಬೆಳಗಿನಿಂದ ಸ್ಥಗಿತಗೊಳಿಸಲಾಗಿದ್ದ ಬಿಎಂಟಿಸ್‌ ಬಸ್‌ ಸಂಚಾರವನ್ನು ಸಂಜೆ ಆರಂಭಿಸಲಾಗಿದ್ದು ಪ್ರಯಾಣಿಕರು ನಿರಾಳರಾಗಿದ್ದಾರೆ. ಪರಿಸ್ಥಿತಿಯನ್ನು ನೋಡಿಕೊಂಡು ಅಹಿತಕರ […]

ನಾಳೆ ಕರ್ನಾಟಕ ಬಂದ್‌… ಸಾರಿಗೆ ಸಂಸ್ಥೆಗಳ ನಿಲುವು ಏನು?

Wednesday, January 24th, 2018
karnataka-bandh

ಬೆಂಗಳೂರು: ಕನ್ನಡಪರ ಸಂಘಟನೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಜ.25(ನಾಳೆ) ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಆತಂಕ ಎದುರಾಗಿರುವ ಬೆನ್ನಲ್ಲೇ ಸಾರಿಗೆ ಬೆನ್ನೆಲುಬಾಗಿರುವ ಕೆಎಸ್‍ಆರ್‌ಟಿಸಿ ನೌಕರರ ಸಂಘದಲ್ಲಿಯೂ ಪರ-ವಿರೋಧಗಳು ವ್ಯಕ್ತವಾಗಿವೆ. ಸಾರಿಗೆ ಸಂಸ್ಥೆಯ ನೌಕರರ ಸಂಘಟನೆಗಳು ನಾಲ್ಕೈದು ಇದ್ದು, ಇದರಲ್ಲಿ ಒಂದೆರಡು ಸಂಘಟನೆಗಳು ಬೆಂಬಲ ಸೂಚಿಸಿದ್ದರೆ, ಮತ್ತೆ ಕೆಲವು ವಿರೋಧ ವ್ಯಕ್ತಪಡಿಸಿವೆ. ಬಂದ್‌ಗೆ ಕನ್ನಡ ಪರ ಸಂಘಟನೆಗಳೇ ಸಹಮತ ವ್ಯಕ್ತಪಡಿಸುತ್ತಿಲ್ಲ, ನಗರದ ಸ್ಥಿತಿ ಸಹಜವಾಗಿರಲಿದೆ ಎಂದು ಸರ್ಕಾರ ಅಭಯ ನೀಡಿದೆ. ಹೀಗಿರುವಾಗ ಸಂಚಾರ ನಿಲ್ಲಿಸಿ […]

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಮಹಾ ನಾಟಕ: ಶೆಟ್ಟರ್

Saturday, December 30th, 2017
jagadish-shetter

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಮಹಾ ನಾಟಕ ಆಡುತ್ತಿದೆ ಎಂದು ಪ್ರತಿಪಕ್ಷ ನಾಯಕ‌ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಗೋವಾ ಸಿಎಂ ಮನವೊಲಿಸುವ ಮಾತನ್ನು ನಮಗೆ ಕೇಳಿದ್ದರು. ಹಾಗಾಗಿ ನಾವು ಗೋವಾ ಸಿಎಂ ಮನವೊಲಿಸಿ ಪತ್ರ ತಂದಿದ್ದೇವೆ. ಅದನ್ನೇ ನ್ಯಾಯಾಧೀಕರಣ ಮುಂದೆ ಹಾಜರಪಡಿಸಬೇಕಾಗಿತ್ತು ಎಂದರು. ನೀವು ಗೋವಾದ ಪ್ರತಿಪಕ್ಷವಾದ ಕಾಂಗ್ರೆಸ್ ನಾಯಕರ ಮನವೊಲಿಸಿ ಪತ್ರ ತರಬೇಕಾಗಿತ್ತು‌. ಯಾಕೆ ತಂದಿಲ್ಲ? […]

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ: ದರ್ಶನ್ ಅಕ್ರೋಶ

Thursday, September 8th, 2016
dharshan

ಮಂಡ್ಯ: ಕರ್ನಾಟಕದ ರೈತರು, ಜನತೆಯ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಲೇ ಇದೆ. ಮಹದಾಯಿ ವಿಚಾರದಲ್ಲೂ ಹೀಗೆಯೇ ಆಗಿತ್ತು. ಈಗ ಮತ್ತೆ ಕಾವೇರಿ ವಿಚಾರದಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಚಿತ್ರನಟ ದರ್ಶನ್ ಅಕ್ರೋಶ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ಚಿತ್ರನಟರು ನಡೆಸಿದ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ದರ್ಶನ್‌, ಕನ್ನಡದ ಜನ ತುಂಬಾ ಹೃದಯ ವೈಶಾಲ್ಯತೆ ಉಳ್ಳವರು ಎಂಬ ಕಾರಣಕ್ಕೆ ನಿರಂತರ ದಬ್ಬಾಳಿಕೆ ನಡೆಯುತ್ತಲೇ ಇದೆ. ಇದು ಸರಿಯಲ್ಲ. ನಾವೇನು ಬೆಳೆ ಬೆಳೆಯಲು ನೀರು ಕೇಳುತ್ತಿಲ್ಲ. ಕುಡಿಯಲು ನೀರು ಕೇಳುತ್ತಿದ್ದೇವೆ. […]

ಮಹದಾಯಿ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ಮಹತ್ವದ ಸರ್ವಪಕ್ಷ ಸಭೆ ಆಗಸ್ಟ್‌ 7ರಂದು ನಿಗದಿ

Thursday, August 4th, 2016
Mahadayi

ಬೆಂಗಳೂರು: ಮಹದಾಯಿ ಮಧ್ಯಂತರ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ ಮುಂದಿನ ನಡೆಗಳನ್ನು ನಿರ್ಧರಿಸಲು ಮಹತ್ವದ ಸರ್ವಪಕ್ಷ ಸಭೆ ಆಗಸ್ಟ್‌ 7ರಂದು ನಿಗದಿಯಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು. ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು, ಉತ್ತರ ಕರ್ನಾಟಕ ಭಾಗದ ಶಾಸಕರು, ವಿಧಾನ ಪರಿಷತ್‌ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗುವುದು. ಸರ್ವಪಕ್ಷ ಸಭೆಯಲ್ಲಿ ನ್ಯಾಯಾಧಿಕರಣದ ಮುಂದೆ […]

ಮೊಬೈಲ್ ಗೀಳು -ರೈಲು ಡಿಕ್ಕಿಹೊಡೆದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

Sunday, February 28th, 2016
vaishak

ಕಾಸರಗೋಡು: ಅತಿಯಾದ ಮೊಬೈಲ್ ಗೀಳಿಗೊಳಗಾದ ವಿದ್ಯಾರ್ಥಿಯೊಬ್ಬ ರೈಲು ಡಿಕ್ಕಿಯಾಗಿ ದಾರುಣನಾಗಿ ಮೃತಪಟ್ಟ ಘಟನೆ ಕಾಸರಗೊಡು ರೈಲು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ನಡೆದಿದೆ. ತೃಶೂರ್ ಕುನ್ನಂಕುಳಂ ನ ತೆಕ್ಕೆಪರಂಬಿಲ್ ನ ರವಿ ಕುಮಾರ್ ಎಂಬವರ ಪುತ್ರ ಹಾಗೂ ಪೊವ್ವಲ್ ಎಲ್‌ಬಿಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಕೆ.ಆರ್.ವೈಶಾಖ್ (23)ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಶನಿವಾರ ಹಾಗೂ ಭಾನುವಾರ ಕಾಲೇಜಿಗೆ ರಜೆಯಾಗಿರುವುದರಿಂದ ಊರಿಗೆ ತೆರಳಲು ವೈಶಾಖ್ ಕಾಸರಗೋಡಿಗೆ ಬಂದಿದ್ದನು. ಅಲ್ಲಿ ಮೊಬೈಲ್ ಪೋನ್ ನ ಇಯರ್ ಫೋನ್ ಕಿವಿಗಿರಿಸಿ ರೈಲು […]