ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ: ದರ್ಶನ್ ಅಕ್ರೋಶ

4:26 PM, Thursday, September 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

dharshanಮಂಡ್ಯ: ಕರ್ನಾಟಕದ ರೈತರು, ಜನತೆಯ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಲೇ ಇದೆ. ಮಹದಾಯಿ ವಿಚಾರದಲ್ಲೂ ಹೀಗೆಯೇ ಆಗಿತ್ತು. ಈಗ ಮತ್ತೆ ಕಾವೇರಿ ವಿಚಾರದಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಚಿತ್ರನಟ ದರ್ಶನ್ ಅಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಚಿತ್ರನಟರು ನಡೆಸಿದ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ದರ್ಶನ್‌, ಕನ್ನಡದ ಜನ ತುಂಬಾ ಹೃದಯ ವೈಶಾಲ್ಯತೆ ಉಳ್ಳವರು ಎಂಬ ಕಾರಣಕ್ಕೆ ನಿರಂತರ ದಬ್ಬಾಳಿಕೆ ನಡೆಯುತ್ತಲೇ ಇದೆ. ಇದು ಸರಿಯಲ್ಲ. ನಾವೇನು ಬೆಳೆ ಬೆಳೆಯಲು ನೀರು ಕೇಳುತ್ತಿಲ್ಲ. ಕುಡಿಯಲು ನೀರು ಕೇಳುತ್ತಿದ್ದೇವೆ. ಮಹದಾಯಿ ವಿಚಾರದಲ್ಲೂ ಅಲ್ಲಿನ ಜನತೆ ಕುಡಿಯಲು ನೀರು ಕೇಳಿದರು. ಆದರೆ ನೀರು ಮಾತ್ರ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿತ್ರರಂಗದ ವತಿಯಿಂದ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬರೀ ಮಂಡ್ಯದಲ್ಲಿ ಮಾತ್ರ ಚಳವಳಿ ನಡೆದರೆ ಸಾಲುವುದಿಲ್ಲ. ಇಡೀ ರಾಜ್ಯಾದ್ಯಂತ ಎಲ್ಲೆಡೆ ಪ್ರತಿಭಟನೆ ವ್ಯಕ್ತವಾಗಬೇಕು. ತುಂಬಾ ದೊಡ್ಡಮಟ್ಟದ ಹೋರಾಟ ನಡೆಸಬೇಕು ಎಂದು ಹೇಳಿದರು.

ನಾನು ಕಲಾವಿದನಾಗಿ ಇಲ್ಲಿಗೆ ಬಂದಿಲ್ಲ. ರೈತನ ಮಗನಾಗಿ ಬಂದಿದ್ದೇನೆ. ರೈತರ ಜೊತೆಗೆ ಸದಾ ಇರುತ್ತೇನೆ. ರೈತರು ಎಲ್ಲಿಯವರೆಗೂ ಹೋರಾಟ ನಡೆಸುತ್ತಾರೆ. ಅಲ್ಲಿಯವರೆಗೂ ನಾನು ಅವರ ಹಿಂದೆ ಇರುತ್ತೇನೆ. ಮೊದಲು ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರನ್ನು ನಿಲ್ಲಿಸಬೇಕು. ನಮ್ಮ ರೈತರಿಗೆ ಮೊದಲು ನೀರು ಕೊಡಬೇಕು ಎಂದು ಒತ್ತಾಯಿಸಿದರು.

ಮೈಸೂರಿನಿಂದ ನೇರವಾಗಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ ದರ್ಶನ್ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಬಳಿಕ ಧರಣಿ ಸ್ಥಳಕ್ಕೆ ಆಗಮಿಸಿ ಕೆಲಕಾಲ ಧರಣಿಯಲ್ಲಿ ಭಾಗವಹಿಸಿ ನಂತರ ವಾಪಸ್‌ ತೆರಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English