ಕುಂಬಳೆ: ಕೊಲ್ಲುವುದಾಗಿ ಬೆದರಿಸಿ ಮನೆ ಕೆಲಸಗಳನ್ನು ಮಾಡಿಸಿ,ತಲೆ ಬೋಳಿಸಿ ಕ್ರೂರ ಪೀಡನೆ ನೀಡುತ್ತಿದ್ದ ಮನೆ ಮಾಲಕನ ವಿರುದ್ದ ಕುಂಬಳೆ ಪೋಲೀಸರು ದೂರು ದಾಖಲಿಸಿದ್ದಾರೆ.
ಮನೆ ಮಾಲಕ ಹಾಗೂ ಆತನ ಪತ್ನಿಯ ಪೀಡನೆ ಸಹಿಸಲಾರದೆ ಬಾಲಕಿ ಮನೆಬಿಟ್ಟು ಹೊರಬಂದಾಗ ಈ ದುರಂತ ಕಥೆ ತಡವಾಗಿ ಹೊರಜಗತ್ತಿಗೆ ಅರಿವಿಗೆ ಬಂದಿದ್ದು, ಗಮನಿಸಿದ ಊರವರು ಕೂಡಲೇ ಬಾಲಕಿಯನ್ನು ಕುಂಬಳೆ ಪೋಲೀಸರಿಗೊಪ್ಪಿಸಿದರು.
ಕುಂಬಳೆ ಪರಿಸರದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.ಪೆರಿಯಡ್ಕದ ಶಾಲೆಯೊಂದರಲ್ಲಿ ಎರಡನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿನಿಯನ್ನು ಆಕೆಯ ತಾಯಿ ಕೆಲಸಕ್ಕೆ ನಿಲ್ಲಿಸಿರುವುದಾಗಿ ಬಾಲಕಿ ತಿಳಿಸಿದ್ದಾಳೆ.ಮೊಹಮ್ಮದ್ ನ ಮನೆಯಲ್ಲಿ ಬಾಲಕಿ ಜ.20 ರಿಂದ ಕೆಲಸಕ್ಕೆ ಸೇರಿದ್ದು,ಈ ಮನೆಯಲ್ಲಿ ಈಮೊದಲು ಬಾಲಕಿಯ ತಾಯಿ ಕೆಲಸ ನಿರ್ವಹಿಸುತ್ತಿದ್ದರು.ತಾಯಿಯ ಅನುಪಸ್ಥಿತಿಯಲ್ಲಿ ಬಾಲಕಿಗೆ ಆಹಾರ,ವಿಶ್ರಾಂತಿ ನೀಡದೆ ದುಡಿಸಿರುವುದಾಗಿ ದೂರಲಾಗಿದೆ.ಚಪ್ಪಲಿಯಲ್ಲಿ ಮುಖ ಸಹಿತ ಶರೀರದ ವಿವಿಧೆಡೆಗಳಿಗೆ ಹೊಡೆದಿರುವುದು,ಕುತ್ತಿಗೆಗೆ ಕತ್ತಿಯಿರಿಸಿ ಕೊಲ್ಲುವುದಾಗಿ ಬೆದರಿಸಿ ತಲೆಗೂದಲು ಬೋಳಿಸಿ ಚಿತ್ರಹಿಂಸೆ ನೀಡುತ್ತಿರುವುದರಿಂದ ಮನೆಬಿಟ್ಟು ಹೊರಬಂದಿರುವುದಾಗಿ ಬಾಲಕಿ ತಿಳಿಸಿದ್ದಾಳೆ.ಹಸಿವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಊರವರು ವಶಕ್ಕೆ ತಡೆಗೆದು ಪೋಲೀಸರಿಗೊಪ್ಪಿಸಿದರು.
ಬಾಲಕಿಯನ್ನು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕಪರವನಡ್ಕದ ಚೈಲ್ಡ್ ಲೈನ್ ವೆಲ್ಪೇರ್ ಸಮಿತಿಗೆ ಹಸ್ತಾಂತರಿಸಲಾಗಿದೆ.ಮನೆ ಮಾಲಕನ ವಿರುದ್ದ ದೂರು ದಾಖಲಿಸಲಾಗಿದೆ.
Click this button or press Ctrl+G to toggle between Kannada and English