ಕಾಸರಗೋಡಿನಲ್ಲಿ ಬೃಹತ್ ಉದ್ಯೋಗ ಮೇಳ

12:13 AM, Monday, February 29th, 2016
Share
1 Star2 Stars3 Stars4 Stars5 Stars
(4 rating, 5 votes)
Loading...
Udyogamela

ಕಾಸರಗೋಡು: ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಯುವ ಸಮೂಹದ ಕೊಡುಗೆಯನ್ನು ಲಕ್ಷ್ಯದಲ್ಲಿರಿಸಿ ಕೇಂದ್ರ ಸರಕಾರ ವಿವಿಧ ಆಯಾಮಗಳಲ್ಲಿ ಯೋಜನೆಗಳಿಗೆ ರೂಪು ನೀಡುತ್ತಿರುವುದು ಸ್ತುತ್ಯರ್ಹವೆಂದು ಕಾಸರಗೋಡು ಚಿನ್ಮಯಾ ಮಿಷನ್ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಕಾರ್ಮಿಕ ಉದ್ಯೋಗ ಸಚಿವಾಲಯದ ನೇತೃತ್ವದಲ್ಲಿ ಕಾಸರಗೋಡಿನ ವಿವೇಕಾನಂದ ಎಜ್ಯುಕೇಶನಲ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಯುವ ಕಿರಣ್ ಸಂಘಟನೆಗಳ ಸಹಕಾರದೊಂದಿಗೆ ಭಾನುವಾರ ವಿದ್ಯಾನಗರದ ಚಿನ್ಮಯಾ ಮಿಷನ್ ಪರಿಸರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ದೀಪ ಬೆಳಗಿಸಿ ಅವರು ಮಾತನಾಡುತ್ತಿದ್ದರು.
ಉದ್ಯೋಗ ಇಂದು ತೀವ್ರ ಕಳವಳಕಾರಿ ಹಂತದಲ್ಲಿ ಹಳ್ಳಿಯವರಿಗೆ ಲಭಿಸದಿರುವ ಸ್ಥಿತಿಯಿದೆ.ಈ ನಿಟ್ಟಿನಲ್ಲಿ ಪ್ರಧಾನಿಗಳು ದೂರದೃಷ್ಟಿಯಿಂದ ಸಂಘಟಿಸುವ ಉದ್ಯೋಗ ಮೇಳಗಳು ಹೊಸ ಆಶಾಕಿರಣವಾಗಿದೆ ಎಂದವರು ತಿಳಿಸಿದರು.ಜೆಎನ್‌ಯು ವಿವಿ ಹಾಗೂ ಹೈದರಾಬಾದ್ ಘಟನೆಯನ್ನು ನೆನಪಿಸಿದ ಅವರು ಆಂತರಿಕ ರಾಜಕೀಯ ಮಣ್ಣೆರಚಾಟಗಳ ಮೂಲಕ ಸಣ್ಣ ಘಟನೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಚಿತ್ರಿಸುವಂತೆ ರಾಜಕೀಯ ಪಕ್ಷಗಳು ಯತ್ನಿಸುತ್ತಿರುವುದು ಖಂಡನೀಯ.ಇದರಿಂದ ನಮ್ಮ ದೇಶದ ಮಾನ ಮೂರಾಬಿಟ್ಟಿಯಾಗುವುದನ್ನು ಗಮನಿಸಬೇಕೆಂದು ಅವರು ತಿಳಿಸಿದರು.ದೀರ್ಘ ಕಾಲೀನ ಚಿಂತನೆಗಳ ಮೂಲಕ ನಮ್ಮಿಂದಿನ ಪ್ರಧಾನಿಗಳ ದೂರದರ್ಶಿತ್ವವನ್ನು ಅರ್ಥ್ಯಸಿಕೊಂಡು ಯುವ ಸಮೂಹ ಅಭಿವೃದ್ದಿ ಥದತ್ತ ಮುನ್ನಡೆಯಬೇಕೆಂದು ಅವರು ತಿಳಿಸಿದರು.

ಪ್ರತಾಪ್ ಕೋಯಿಕ್ಕೋಡ್ ಅಧ್ಯಕ್ಷತೆ ವಹಿಸಿದ್ದರು.ಉದ್ಯೋಗ ಮೇಳದ ನಿರ್ವಹಣಾ ಸಮಿತಿಯ ಅಧ್ಯಕ್ಷ,ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್,ವಿವೇಕಾನಂದ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಅಡ್ವ.ಕೆ.ಕರುಣಾಕರನ್,ಕಾರ್ಯದರ್ಶಿ ವೇಣುಗೋಪಾಲನ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.ಮಿನಿಸ್ಟ್ರೀ ಓಫ್ ಲೇಬರ್ ಮತ್ತು ಎಂಪ್ಲೋಯಿಮೆಂಟ್ ನ ಉಪ ವಿಭಾಗೀಯ ಅಧಿಕಾರಿ ವಿ.ಜಿ.ರಾಮಚಂದ್ರನ್ ಸ್ವಾಗತಿಸಿ,ಟ್ರಸ್ಟ್ ಅಧ್ಯಕ್ಷ ಎನ್ ಸತೀಶನ್ ವಂದಿಸಿದರು.

ಉದ್ಯೋಗ ಮೇಳದಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಆಕಾಂಕ್ಷಿಗಳು ಪಾಲ್ಗೊಂಡರು.ಜಿಲ್ಲೆಯ ವಿವಿಧೆಡೆಗಳ ಸಹಿತ ಹೊರ ಜಿಲ್ಲೆಗಳಿಂದಲೂ ಬೆಳಿಗ್ಗೆ 6.30ಕ್ಕೆ ಉದ್ಯೋಗಾರ್ಥಿಗಳ ಮಹಾಪೂರವೇ ಹರಿದು ಬರತೊಡಗಿತು.2100 ಹುದ್ದೆಗಳಿಗೆ 30ಕ್ಕಿಂತಲೂ ಅಧಿಕ ಸಂಸ್ಥೆಗಳು ನೇರ ನೇಮಕಾತಿ ನಡೆಸಿದವು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English