ಆಳ್ವಾಸ್ ಪ್ರಗತಿ 2019 ಉದ್ಯೋಗ ಮೇಳ ಸಂಪನ್ನ

Saturday, June 22nd, 2019
Pragathi

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆದ 11ನೇ ವರ್ಷದ ಆಳ್ವಾಸ್ ಪ್ರಗತಿ 2019 ಶನಿವಾರ ಸಂಪನ್ನಗೊಂಡಿದ್ದು, ಉದ್ಯೋಗ ಮೇಳದಲ್ಲಿ ಒಟ್ಟು 1712 ಉದ್ಯೋಗಾಕಾಂಕ್ಷಿಗಳು ಸ್ಪಾಟ್ ಆಫರ್ಸ್ ಪಡೆದರೆ, ಒಟ್ಟು 3697 ಅಭ್ಯರ್ಥಿಗಳು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಗೊಂಡಿದ್ದಾರೆ. ಒಟ್ಟು ಎರಡು ದಿನದ ಉದ್ಯೋಗ ಮೇಳದಲ್ಲಿ ಆಗಮಿಸಿದ್ದ 208 ಕಂಪೆನಿಗಳಲ್ಲಿ 163 ಕಂಪೆನಿಗಳು ತಮ್ಮ ಸ್ಪಾಟ್ ಆಫರ್ಸ್ ಹಾಗೂ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಡುಗಡೆಗೊಳಿಸಿತ್ತು. ಒಟ್ಟು ಎರಡು ದಿನದ ಉದ್ಯೋಗ ಮೇಳದಲ್ಲಿ […]

ಬೊಗಳುವ ನಾಯಿಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ… ಅನಂತ್‌ಕುಮಾರ್‌ ವಾಗ್ದಾಳಿ

Saturday, January 20th, 2018
ananth-kumar

ಬಳ್ಳಾರಿ: ಸಂವಿಧಾನ ಬದಲಾವಣೆ ಮಾಡ್ತೀವಿ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಬಳ್ಳಾರಿಯಲ್ಲಿ ಮತ್ತೆ ಬಾಯಿ ಹರಿಬಿಟ್ಟಿದ್ದಾರೆ. ನಾವೂ ಹೇಳಿ ಕೇಳಿ ನಿಜವಾಗಿಯೂ ಹಠವಾದಿಗಳು, ಯಾವುದೋ ನಾಯಿ ಬೀದಿಯಲ್ಲಿ ನಿಂತೂ ಬೊಗಳಿದ್ರೆ ನಾವೂ ತಲೆಕೆಡಿಸಿಕೊಳ್ಳಲ್ಲ, ನಾವೂ ಬದಲಾವಣೆ ಮಾಡಲು ಬಂದಿದ್ದೇವೆ, ಬೊಗಳುವ ನಾಯಿಗಳಿಗೆ ನಾವೂ ತಲೆಕೆಡಿಸಿಕೊಳ್ಳಲ್ಲವೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಬಳ್ಳಾರಿಯಲ್ಲಿಂದು ಉದ್ಯೋಗ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು ಭಾಷಣದುದ್ದಕ್ಕೂ ನಾವೂ ಬದಲಾವಣೆ […]

ಕಾಸರಗೋಡಿನಲ್ಲಿ ಬೃಹತ್ ಉದ್ಯೋಗ ಮೇಳ

Monday, February 29th, 2016
Udyogamela

ಕಾಸರಗೋಡು: ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಯುವ ಸಮೂಹದ ಕೊಡುಗೆಯನ್ನು ಲಕ್ಷ್ಯದಲ್ಲಿರಿಸಿ ಕೇಂದ್ರ ಸರಕಾರ ವಿವಿಧ ಆಯಾಮಗಳಲ್ಲಿ ಯೋಜನೆಗಳಿಗೆ ರೂಪು ನೀಡುತ್ತಿರುವುದು ಸ್ತುತ್ಯರ್ಹವೆಂದು ಕಾಸರಗೋಡು ಚಿನ್ಮಯಾ ಮಿಷನ್ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರ ಕಾರ್ಮಿಕ ಉದ್ಯೋಗ ಸಚಿವಾಲಯದ ನೇತೃತ್ವದಲ್ಲಿ ಕಾಸರಗೋಡಿನ ವಿವೇಕಾನಂದ ಎಜ್ಯುಕೇಶನಲ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಯುವ ಕಿರಣ್ ಸಂಘಟನೆಗಳ ಸಹಕಾರದೊಂದಿಗೆ ಭಾನುವಾರ ವಿದ್ಯಾನಗರದ ಚಿನ್ಮಯಾ ಮಿಷನ್ ಪರಿಸರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ದೀಪ ಬೆಳಗಿಸಿ ಅವರು ಮಾತನಾಡುತ್ತಿದ್ದರು. ಉದ್ಯೋಗ ಇಂದು […]

ಉದ್ಯೋಗ ಮೇಳ ಸಮಾರೋಪ- 12470 ಅಭ್ಯರ್ಥಿಗಳು ಭಾಗಿ

Saturday, November 21st, 2015
udyoga mela

ಮ0ಗಳೂರು : ಎರಡು ದಿನಗಳ ಕಾಲ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ನಡೆದ ಮಂಗಳೂರು ಉದ್ಯೋಗ ಮೇಳವು ಶುಕ್ರವಾರ ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉದ್ಯೋಗಮೇಳದ ರುವಾರಿ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಈ ಉದ್ಯೋಗ ಮೇಳವು ಚಾರಿತ್ರಿಕವಾಗಿದ್ದು. ಉದ್ಯೋಗಾಂಕ್ಷಿಗಳ ಸ್ಪಂದನೆಯು ಅಭೂತಪೂರ್ವವಾಗಿದೆ ಎಂದರು. ಸಾಕಷ್ಟು ಉನ್ನತ ವಿದ್ಯಾಸಂಸ್ಥೆಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀವರ್ಷ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿತು ಹೊರಗೆ ಬರುತ್ತಿದ್ದಾರೆ. ಉದ್ಯೋಗವು ಇವರ ಮುಂದೆ […]

ಮೂಡಬಿದಿರೆ : ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಉದ್ಘಾಟನೆ

Saturday, June 20th, 2015
Alvas Pragati

ಮೂಡಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 6ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳವನ್ನು ಶನಿವಾರ ಯುವಜನ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಡಾ.ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಡಾ.ವಿ.ಎಸ್ ಆಚಾರ್ಯರವರ ನೆನಪಿಗಾಗಿ ನಿರ್ಮಿಸಿದ ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ಉದ್ಯೋಗ ಮೇಳ ನಡೆಯುತ್ತಿರುವುದು ಶ್ಲಾಘನೀಯ. ಬೇರೆ ಬೇರೆ ಜಿಲ್ಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಠಿಯಿಂದ ಈ ಉದ್ಯೋಗಮೇಳಮನ್ನು ಆಯೋಜಿಸಲಾಗಿದೆ. ನಮ್ಮ ರಾಜ್ಯದಲ್ಲಿ ಅನೇಕ ಯುವ ಪ್ರತಿಭೆಗಳಿದ್ದು ಅವರೆಲ್ಲರೂ […]

ಉದ್ಯೋಗ ಮೇಳ 88 ಮಂದಿ ಉದ್ದಿಮೆದಾರರು, 1,737 ಮಂದಿ ಉದ್ಯೋಗಾಂಕ್ಷಿಗಳು

Sunday, September 25th, 2011
Job fire

ಮಂಗಳೂರು: ಕೌಶಲ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶನಿವಾರ ಆರಂಭಗೊಂಡ 32ನೇ ಬೃಹತ್‌ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳದ ಮೊದಲ ದಿನ 1,737 ಮಂದಿ ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಉದ್ಯೋಗ ಮೇಳದಲ್ಲಿ 88 ಮಂದಿ ಉದ್ದಿಮೆದಾರರು ಭಾಗವಹಿಸಿದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಜೆಒಸಿ, ಐಟಿಐ, ಡಿಪ್ಲೊಮಾ, ಪದವಿ, ಅಂಗವಿಕಲ ಅಭ್ಯರ್ಥಿಗಳಲ್ಲಿ ಒಟ್ಟು […]