ಬಳ್ಳಾರಿ: ಸಂವಿಧಾನ ಬದಲಾವಣೆ ಮಾಡ್ತೀವಿ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬಳ್ಳಾರಿಯಲ್ಲಿ ಮತ್ತೆ ಬಾಯಿ ಹರಿಬಿಟ್ಟಿದ್ದಾರೆ.
ನಾವೂ ಹೇಳಿ ಕೇಳಿ ನಿಜವಾಗಿಯೂ ಹಠವಾದಿಗಳು, ಯಾವುದೋ ನಾಯಿ ಬೀದಿಯಲ್ಲಿ ನಿಂತೂ ಬೊಗಳಿದ್ರೆ ನಾವೂ ತಲೆಕೆಡಿಸಿಕೊಳ್ಳಲ್ಲ, ನಾವೂ ಬದಲಾವಣೆ ಮಾಡಲು ಬಂದಿದ್ದೇವೆ, ಬೊಗಳುವ ನಾಯಿಗಳಿಗೆ ನಾವೂ ತಲೆಕೆಡಿಸಿಕೊಳ್ಳಲ್ಲವೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಬಳ್ಳಾರಿಯಲ್ಲಿಂದು ಉದ್ಯೋಗ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು ಭಾಷಣದುದ್ದಕ್ಕೂ ನಾವೂ ಬದಲಾವಣೆ ಮಾಡಲು ಬಂದಿದ್ದೇವೆ. ಮೋದಿಯವರ ಕನಸು ನನಸು ಮಾಡಲು ಬಂದಿದ್ದೇವೆ ಅನ್ನೋ ಮೂಲಕ ತಮ್ಮ ವಿರೋಧಿಗಳಿಗೆ ಮಾತಿನ ಮೂಲಕವೇ ಚಾಟಿ ಬೀಸಿದರು.
ಇದೇ ವೇಳೆ ಕನ್ನಡದ ಬಗ್ಗೆ ಮಾತನಾಡಿದ ಅನಂತಕುಮಾರ ಹೆಗಡೆ ಕನ್ನಡದವರು ಕನ್ನಡ ಮಾತನಾಡಿ, ತೆಲುಗು ಬಂದವರು ತೆಲುಗಿನಲ್ಲಿ ಮಾತನಾಡಿ ಆದ್ರೆ ನಮಗೆ ಇಂಗ್ಲೀಷ್ ಯಾಕೆ ಬೇಕು. ಭಾಷೆ ಇರೋದು ಸಂಹವನಕ್ಕೆ, ಸ್ಟೈಲ್ ಹೊಡೆಯಲು ಅಲ್ಲ, ನಮ್ಮಗೆ ಸ್ಟೈಲ್ ಬೇಕಿಲ್ಲ. ನಮ್ಮಗೆ ಭಾಷೆ ಅರ್ಥ ಆಗಬೇಕು ಅಷ್ಟೆ. ಅದಕ್ಕಾಗಿ ಯಾರಿಗೋ ಅರ್ಥ ಮಾಡಿಸಲು ನಾನು ನನ್ನ ತಾಯಿಯನ್ನು ಬೇವರ್ಸಿ ಮಾಡಲು ಸಿದ್ಧನಿಲ್ಲವೆಂದು ಅನಂತಕುಮಾರ ಹೆಗಡೆ ಹೇಳಿದರು.
ಜೊತೆಗೆ ನಾನು ಇದ್ದುದನ್ನು ಇದ್ದ ಹಾಗೆ ಹೇಳುವ ವ್ಯಕ್ತಿ. ಯಾರಾದ್ರೂ ಒಪ್ಪಿಕೊಳ್ಳಲಿ ಬಿಡಲಿ ನಾನು ಇರೋದೆ ಹೀಗೆ ಅಂತ ಗುಡುಗಿದರು.
ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಇಂಜಿನೀಯರಿಂಗ್ ಕಾಲೇಜಿನಲ್ಲಿ ಕೇಂದ್ರ ಕೌಶಲ್ಯ ಉದ್ಯಮಶೀಲ ನಿಗಮ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Click this button or press Ctrl+G to toggle between Kannada and English