ಮಂಗಳೂರಿನಿಂದ ಕಾಸರಗೋಡು ಬೇಕಲಕ್ಕೆ ಶೀಘ್ರದಲ್ಲೇ ವಿಮಾನ ಸಂಚಾರ

1:33 PM, Monday, February 29th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Mangalore Kasaragod Flight

ಕಾಸರಗೋಡು: ಅಂತರಾಷ್ಟ್ರೀಯ ಪ್ರವಾಸೋದ್ಯಮ ರಂಗದ ಭೂಪಟದಲ್ಲಿ ಸ್ಥಾನ ಪಡೆದಿರುವ ಬೇಕಲ ಪ್ರವಾಸಿ ಕೇಂದ್ರ ದೇಶ, ವಿದೇಶಗಳಲ್ಲಿ ಇನ್ನಷ್ಟು ಪ್ರವಾಸಿಗಳನ್ನು ಆಕರ್ಷಿಸುವ ಗುರಿಯೊಂದಿಗೆ ಬೇಕಲಕೋಟೆ ಪರಿಸರದಲ್ಲಿ ಏರ್ ಸ್ಟ್ರಿಪ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ.

ಬೇಕಲದಲ್ಲಿ ಏರ್ ಸ್ಟ್ರಿಪ್ ನಿರ್ಮಿಸುವ ಯೋಜನೆಗೆ ಸಿಯಾಲ್ ಸಂಸ್ಥೆ ಈಗಾಗಲೇ ಅಧ್ಯಯನ ನಡೆಸಿ ರಾಜ್ಯ ಸರಕಾರಕ್ಕೆ ವರದಿ ನೀಡಿದೆ. ಇದರಂತೆ ಕನಿಷ್ಠ 50 ಮಂದಿ ಪ್ರಯಾಣಿಕರು ಸಂಚರಿಸುವ ಸೌಕರ್ಯವಿರುವ ಕಿರು ವಿಮಾನ ಸಂಚಾರವನ್ನು ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇಕಲಕ್ಕೆ ಆರಂಭಿಸಲು ಸಿದ್ದತೆ ನಡೆಯುತ್ತಿದೆ. ಮಂಗಳೂರಿನಿಂದ 20 ನಿಮಿಷಗಳಲ್ಲಿ ಈ ವಿಮಾನ ಬೇಕಲ ತಲಪಲಿದೆ.

ಯೋಜನೆಯ ಅನುಷ್ಠಾನಕ್ಕೆ ಬೇಕಲ ಬಳಿ ಏರ್ ಸ್ಟ್ರಿಪ್ ಹಾಗೂ ಇತರ ಹಲವೆಡೆ ಹೆಲಿಪ್ಯಾಡ್ ನಿರ್ಮಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.ಏರ್ ಸ್ಟ್ರಿಪ್ ನಿರ್ಮಿಸಲು ಅಗತ್ಯವಾದ ನಿವೇಶನವನ್ನು ಈಗಾಗಲೇ ನಿಗದಿಪಡಿಸಲಾಗಿದೆ.ನೂತನ ವರ್ಷದ ಬಜೆಟ್ ನಲ್ಲಿ ಈ ಬಗ್ಗೆ ಭರವಸೆ ನೀಡಲಾಗಿದೆ.ಯೋಜನೆಗೆ ಪ್ರಸಕ್ತ ವರ್ಷವೇ ಚಾಲನೆ ನೀಡಲಾಗುವುದೆಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಭರವಸೆ ನೀಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English