ಸಹಕಾರ ಸಂಘದಲ್ಲಿ ನಕಲಿ ಚಿನ್ನವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ ಇಬ್ಬರಿಗೆ ಶೋಧ

Tuesday, February 6th, 2024
Kadaba

ಕಡಬ : ಸಹಕಾರ ಸಂಘದಲ್ಲಿ ನಕಲಿ ಚಿನ್ನದ ಬಳೆಗಳನ್ನು ಇಟ್ಟು ಲಕ್ಷಾಂತರ ರೂಪಾಯಿಗಳನ್ನು ಸಾಲ ಪಡೆದು ಇಬ್ಬರು ವಂಚಿಸಿರುವುದಾಗಿ ದೂರು ದಾಖಲಾಗಿದೆ. ನೆಲ್ಯಾಡಿ ಸಹಕಾರ ಸಂಘ, ಉಪ್ಪಿನಂಗಡಿಯ ಸಹಕಾರಿ ಸಂಘ, ಅಲಂಕಾರು ಸಹಕಾರಿ ಸಂಘಗಳಲ್ಲಿ ಇವರು ನಕಲಿ ಚಿನ್ನ ಅಡವಿಟ್ಟು ಲಕ್ಷಗಟ್ಟಲೆ ಹಣ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಇದೇ ಆರೋಪಿಗಳು ಜ. 27 ರಂದು ನೆಲ್ಯಾಡಿಯ ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಅಡಮಾನವಿರಿಸಿ, 1.40 ಲಕ್ಷ ರೂ.ವನ್ನು […]

ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ರಾಗಿ ಶ್ರೀ ನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧ ಆಯ್ಕೆ

Tuesday, July 27th, 2021
Press Housing Board

ಮಂಗಳೂರು : ಪತ್ರಕ ರ್ತರ ಗೃಹ ನಿರ್ಮಾಣ ಸಹಕಾರ ಸಂಘ ಮಂಗಳೂರು ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಉಪಾಧ್ಯಕ್ಷರಾಗಿ ಭಾಸ್ಕರ ರೈ ಕಟ್ಟ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯ ಪ್ರಕ್ರೀಯೆಯನ್ನು ಸಹಕಾರ ಸಂಘದ ಹಿರಿಯ ನಿರೀಕ್ಷಕರಾದ ಶಿವಲಿಂಗಯ್ಯ.ಎಂ ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟರು. ಸಂಘದ ನಿರ್ದೇಶಕರಾದ ಕೇಶವ ಕುಂದರ್ ,ಪುಷ್ಪರಾಜ್ ಬಿ.ಎನ್,ಇಬ್ರಾಹಿಂ ಅಡ್ಕಸ್ಥಳ,ಆರಿಫ್ ಪಡುಬಿದ್ರೆ,ಜಿತೇಂದ್ರ ಕುಂದೇಶ್ವರ,ಆತ್ಮ ಭೂಷಣ್ ಭಟ್, ಸತ್ಯವತಿ, ಕೆ.ವಿಲ್ ಫ್ರೆಡ್ ಡಿ ಸೋಜ, […]

ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಇಲಾಖೆಯ ಸಿಬ್ಬಂದಿಗಳು ಎಸಿಬಿ ಬಲೆಗೆ

Friday, July 21st, 2017
acb

ಮಂಗಳೂರು: ಪುತ್ತೂರಿನ ವ್ಯಕ್ತಿಯೊಬ್ಬರು ಹೊಸ ಸಹಕಾರಿ ಸಂಘ ಮಾಡಲು ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅವರಿಂದ ಲಂಚ ಸ್ವೀಕರಿಸುತ್ತಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮತ್ತು ಚಾಲಕನನ್ನು ಎಸಿಬಿ ಬಂಧಿಸಿದೆ. ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಮಂಜುನಾಥ್ ಮತ್ತು ಚಾಲಕ ರಾಧಾಕೃಷ್ಣ ಎಂಬವರು ಲಂಚ ಸ್ವೀಕಾರ ಮಾಡಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದವರು. ಪಡ್ನೂರಿನ ವಸಂತ್ ಎಂಬವರು ಹೊಸದಾಗಿ ಸಹಕಾರ ಸಂಘ ಮಾಡುವ ಕುರಿತು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಬಂಧಿತರು ಅದರ ಅನುಮತಿಗಾಗಿ 25ಸಾವಿರ ರೂ. ಬೇಡಿಕೆ […]

ಸಹಕಾರ ಕ್ಷೇತ್ರಕ್ಕೆ ಭದ್ರ ನೆಲೆ ಕಲ್ಪಿಸಿರುವ ಮೊಳಹಳ್ಳಿ ಶಿವರಾಯರು ಈ ಕ್ಷೇತ್ರದ ಪ್ರೇರಕ ಶಕ್ತಿ: ರಾಜೇಂದ್ರ ಕುಮಾರ್‌

Friday, August 5th, 2016
Molahalli-Shivaraya

ಮಂಗಳೂರು: ಸಹಕಾರ ಕ್ಷೇತ್ರಕ್ಕೆ ಭದ್ರ ನೆಲೆ ಕಲ್ಪಿಸಿರುವ ದಿ| ಮೊಳಹಳ್ಳಿ ಶಿವರಾಯರು ಈ ಕ್ಷೇತ್ರದ ಪ್ರೇರಕ ಶಕ್ತಿ. ಇಂದು ಸಹಕಾರ ಕ್ಷೇತ್ರ ಸಂಸ್ಮರಣೆ ಮಾಡುತ್ತಿರುವುದು ಅವರ ಆದರ್ಶ ವ್ಯಕ್ತಿತ್ವಕ್ಕಾಗಿ. ಎಲ್ಲರನ್ನು ಒಟ್ಟುಗೂಡಿಸಿ ಸಹಕಾರವೆಂಬ ನಂದಾದೀಪ ಬೆಳಗಿಸಿದ ಶಿವರಾಯರು ತನ್ನ ಜೀವಿತಕಾಲದ 87 ವರ್ಷಗಳಲ್ಲಿ 58 ವರ್ಷಗಳನ್ನು ಸಹಕಾರ ಕ್ಷೇತ್ರಕ್ಕಾಗಿ ಮೀಸಲಿರಿಸಿರುವುದರಿಂದ ಅವರು ಸಹಕಾರ ಕ್ಷೇತ್ರದ ಪಿತಾಮಹರಾಗಿ ಇಂದಿಗೂ ಸಹಕಾರಿಗಳೆಲ್ಲರಿಗೂ ಸ್ಮರಣೀಯರಾಗಿದ್ದಾರೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದ್ದಾರೆ. ಅವರು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ […]

ಮಂಗಳೂರಿನಿಂದ ಕಾಸರಗೋಡು ಬೇಕಲಕ್ಕೆ ಶೀಘ್ರದಲ್ಲೇ ವಿಮಾನ ಸಂಚಾರ

Monday, February 29th, 2016
Mangalore Kasaragod Flight

ಕಾಸರಗೋಡು: ಅಂತರಾಷ್ಟ್ರೀಯ ಪ್ರವಾಸೋದ್ಯಮ ರಂಗದ ಭೂಪಟದಲ್ಲಿ ಸ್ಥಾನ ಪಡೆದಿರುವ ಬೇಕಲ ಪ್ರವಾಸಿ ಕೇಂದ್ರ ದೇಶ, ವಿದೇಶಗಳಲ್ಲಿ ಇನ್ನಷ್ಟು ಪ್ರವಾಸಿಗಳನ್ನು ಆಕರ್ಷಿಸುವ ಗುರಿಯೊಂದಿಗೆ ಬೇಕಲಕೋಟೆ ಪರಿಸರದಲ್ಲಿ ಏರ್ ಸ್ಟ್ರಿಪ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ. ಬೇಕಲದಲ್ಲಿ ಏರ್ ಸ್ಟ್ರಿಪ್ ನಿರ್ಮಿಸುವ ಯೋಜನೆಗೆ ಸಿಯಾಲ್ ಸಂಸ್ಥೆ ಈಗಾಗಲೇ ಅಧ್ಯಯನ ನಡೆಸಿ ರಾಜ್ಯ ಸರಕಾರಕ್ಕೆ ವರದಿ ನೀಡಿದೆ. ಇದರಂತೆ ಕನಿಷ್ಠ 50 ಮಂದಿ ಪ್ರಯಾಣಿಕರು ಸಂಚರಿಸುವ ಸೌಕರ್ಯವಿರುವ ಕಿರು ವಿಮಾನ ಸಂಚಾರವನ್ನು ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇಕಲಕ್ಕೆ ಆರಂಭಿಸಲು ಸಿದ್ದತೆ […]