ಮಂಗಳೂರು : ಹಿಮಾಲಯ ಪರ್ವತಗಳಲ್ಲೇ ಪವಿತ್ರವಾದ ಶಿವನ ಸ್ಥಾನ ಇರುವ ಪರ್ವತ ಕೈಲಾಸ. ಶಿವ ಲಯಕರ್ತ, ಭಕ್ತಿ ದೇವರು. ಶಿವನ ಮಗ ಕುಮಾರ ವೀರಭದ್ರ-ಕೆಟ್ಟ ಪಾಪಗಳನ್ನು ನಾಶಮಾಡುವವನು. ಕೆಟ್ಟ ಮನಸ್ಥಿತಿಯುಳ್ಳವನನ್ನು ಛೇದನಮಾಡುವುದು ಶಿವನ ಸೇನಾಧಿಪತಿ ವೀರಭದ್ರೇಶ್ವರ. ಗಣಪತಿ ವಿಘ್ನ ನಿವಾರಕ. ದಕ್ಷಿಣಾಕಾರ ಮತ್ತು ಆರ್ಧಸುತ್ತು ಪ್ರದಕ್ಷಿಣೆ ಶಿವ ದೇವಾಲಯದಲ್ಲಿ ಮಾತ್ರ. ಶಿವನು ಸ್ಮಶಾನಾವಾಸಿಯಾದ ಕಾರಣ ನಮಗೆ ಬಂದ ದೃಷ್ಟಿಯನ್ನು ಶಿವನು ತೆಗೆಯುವನು ಎಂಬ ನಂಬಿಕೆ.
ಮಹಾ ಶಿವರಾತ್ರಿಯಂದು ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದನೆಂದು ಶಿವಪುರಾಣದಲ್ಲಿ ತಿಳಿದುಬರುವುದು. ಶಿವನು ತಾಂಡವನೃತ್ಯ ಮಾಡಿದ ದಿನ ಹಾಗೂ ಹಾಲಾಹಲ ವಿಷ ಕುಡಿದ ದಿನವೇ ಮಾಹಾ ಶಿವರಾತ್ರಿಯದಿನ ಎನ್ನುವರು.
ಮಾ.7 ರಂದು ಶಿವಾಲಯಗಳಲ್ಲಿ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಾದ ಧರ್ಮಸ್ಥಳ, ಗೋಕರ್ಣ,ಯಾಣ, ಕಾಶಿ ರಾಮೇಶ್ವರ, ಹುಬ್ಬಳ್ಳಿಯ ಸಿದ್ಧಾರೂಢ ಜಾತ್ರೆಗಳಲ್ಲಿ ಲಕ್ಷಾಂತರ ಜನರು ಪೂಜೆ, ಅಭಿಷೇಕ, ಭಜನೆ, ಅರ್ಚನೆಗಳಲ್ಲಿ ಮಗ್ನರಾಗಿರುತ್ತಾರೆ.
ಶಿರದಲ್ಲಿ ‘ಒಳಿ ತಾಗಲಿ’ ತುಂಬಿರಲಿ ವಚನದಲ್ಲಿ ಶುಭವಾಗಲಿ ಹೊಮ್ಮಲಿ.
ಅಗಲೇ ನಾನು ದಿನಚರಿಯೆ ಆಂತ್ಯದಲ್ಲಿತೋರಿಸಿಕೊಳ್ಳುವೆ ಎಂಬ ಸಂದೇಶ ಶಿವ ಪುರಾಣದ ಶಿವನ ನುಡಿಗಳು ಮತ್ತು ಅವನ ವಿಶೇಷತೆಯಾಗಿದೆ.
ಶಿವಭಕ್ತರು ಆರುಣೋದಯಕ್ಕೆ ಎದ್ದು ಸಂಗಮ ಸ್ನಾನಮಾಡಿ ಶುಭ್ರ ವಸ್ತ್ರವನ್ನುಟ್ಟು ಸಮಸ್ತ ಪಾಪ ನಿವಾರಣೆಗಾಗಿಯೂ, ಜ್ಞಾನ, ಮೋಕ್ಷ ಪ್ರಾಪ್ತಿಗಾಗಿ ಶಿವರಾತ್ರಿ ವ್ರತ ಆಚರಿಸುತ್ತಾರೆ ಶಿವನಿಗೆ ರುದ್ರಾಕ್ಷಿ, ಬಿಲ್ವಪತ್ರೆ, ತುಂಬೆ ಹೂ ಪ್ರಿಯವಾದುದು. ತ್ರಯೋದಶಿಯಲ್ಲಿ ಒಪ್ಪತ್ತು ಊಟ, ಚತುರ್ದಶಿಯಂದು ಪೂರ್ಣ ನಿರಾಹಾರವಾಗಿದ್ದು ಅಮಾವಾಸ್ಯೆಯಂದು ಪಾರಣೆ ಮಾಡಬೇಕು.
ಪ್ರದೋಷಕಾಲಕ್ಕೆ ಸರ್ವರೂ ಶಿವಾಲಯಕ್ಕೆ ಹೋಗಿ ರಾತ್ರಿ ನಾಲ್ಕು ಯಾಮಗಳಲ್ಲೂ ಪೂಜೆ, ಹರಿಕಥೆ, ಅಭಿಷೇಕ ಅರ್ಚನೆ, ಭಜನೆ, ತಾಳಮದ್ದಳೆ, ಯಕ್ಷಗಾನಗಳಲ್ಲಿ ಮಗ್ನರಾಗಿರುತ್ತಾರೆ.
ವಚನದಲ್ಲಿ ನಾಮಾಮೃತ ತುಂಬಿ
ಕಿವಿಯಲ್ಲಿ ಕೀರುತಿ ತುಂಬಿ
ಕೂಡಲಸಂಗಮ ದೇವಾ
ನಯನದಲ್ಲಿ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕೂಡಲ ಸಂಗಮ ದೇವಾ
ನಿಮ್ಮ ಚರಣ ಕಮಲದೊಳಗಾನು ತುಂಬಿ ಎಂದು ಅನನ್ಯ ಭಕ್ತಿಯಿಂದ ಧ್ಯಾನಿಸಿ ಜಾಗರಣೆ ಉಪವಾಸ, ವ್ರತಮಾಡಿ ಶಿವರಾತ್ರಿಯನ್ನು ಕಳೆಯಬೇಕು. ಸಕಲ ಸಂಪತ್ತು, ಐಶ್ವರ‍್ಯ, ಸುಖ-ಶಾಂತಿ, ನೆಮ್ಮದಿ, ಸೌಹಾರ್ದತೆಗೆ ಶಿವಪೂಜೆಯೇ ಕಾರಣ ಎಂಬುದು ಜಾನಪದದ ಮಾತು ಸ್ಮರಣೀಯವಾಗಿದೆ.
‘ಶಿವಶಿವ ಎಂದರೆ ಭಯವಿಲ್ಲ
ಶಿವನಾಮಕೆ ಸಾಟಿ ಬೇರಿಲ್ಲ||
ಶಿವಭಕ್ತರಿಗೆ ಹರಸುವವನು
ಸದಾ…………||
ಎನ್ನುವರು ಎಲ್ಲರೂ ಒಗ್ಗಟ್ಟಾಗಿ ಹಾಡುವರು. ಶಿವನಿಗೆ ರುದ್ರಾಭಿಷೇಕ ಪ್ರಿಯವಾದುದು. ಕವಿ ಬೇಂದ್ರೆ ಹೇಳುವಂತೆ ‘ನನ್ನ ಹರಣ ನಿನಗೆ ಶರಣ ಸಕಲ ಕಾರ್ಯಕಾರಣ’ ನರನು, ಹರನಿಗೆ ಎರಗಿದಾಗ ಎಲ್ಲಾ ಕಾರ್ಯಸಿದ್ಧಿಯಾಗುವುದು .
ಶಿವಲಿಂಗಾಮೃತದಲ್ಲಿ ಬರುವ ಪ್ರತ್ಯಂತವೆಂಬ ದೇಶದಲ್ಲಿ ಸದಾಬೇಟೆಯಾಡಿ ಜೀವಿಸುವ ಒಬ್ಬ ಬೇಡನಿದ್ದ. ಒಂದು ದಿನ ಹಗಲೆಲ್ಲ ಅವನಿಗೆ ಬೇಟೆ ಸಿಗಲಿಲ್ಲ. ರಾತ್ರಿ ಸರೋವರವೊಂದರ ಬಳಿ ಇದ್ದ ಬಿಲ್ವವೃಕ್ಷವನ್ನೇರಿ ಅಲ್ಲಿಗೆ ನೀರು ಕುಡಿಯಲು ಬರುವ ಪ್ರಾಣಿಯನ್ನು ಕೊಲ್ಲಲು ಹೊಂಚುಹಾಕುತ್ತಿದ್ದ. ಅಂದು ಶಿವರಾತ್ರಿಯಾಗಿತ್ತು. ಆದರೆ ಬೇಡನಿಗೆ ತಿಥಿ ಜಾತ್ರೆಗಳ ಅರಿವೇಯಿಲ್ಲ. ಬಿಲ್ವವೃಕ್ಷದಡಿಯಲ್ಲೇ ಬಂದು ಬಯಲು ಲಿಂಗ ವಿದ್ದುದರ ತಿಳುವಳಿಕೆ ಅತನಿಗಿಲ್ಲ. ಕಿತ್ತು ಕಿತ್ತು ಶಿವಲಿಂಗಕ್ಕೆ ಎಸೆದನು. ಆದರಿಂದ ಮರದಡಿಯಿದ್ದ ಲಿಂಗವು ಮುಚ್ಚಿದವು. ಆ ಸಮಯಕ್ಕೆ ಒಂದು ತುಂಬು ಗರ್ಭಿಣಿಯಾದ ಜಿಂಕೆ ನೀರು ಕುಡಿಯಲು ಬಂದಿತು. ಬೇಡ ಬಾಣ ಬಿಡಲು ಸನ್ನದ್ಧನಾದಾಗ ಅದು ಹೇಳಿತು – ನಾನು ತುಂಬು ಗಂರ್ಭಿಣಿ ನನ್ನನ್ನುಕೊಂದು ಭ್ರೂಣ ಹತ್ಯಾ ಪಾಪಕ್ಕೆ ಗುರಿಯಾಗಬೇಡ. ಸ್ವಲ್ಪ ಸಮಯದಲ್ಲೇ ಪ್ರಸವಿಸಿದ ಬಳಿಕ ನಾನಾಗಿ ಇಲ್ಲಿಗೆ ಬಂದು ನನ್ನ ದೇಹವನ್ನು ನಿನಗೆ ಆರ್ಪಿಸುವೆ ಇದು ಶಿವನಾಣೆ. ಎಂದಾಗ ಬೇಡನಿಗೆ ಶಿವ ಶಬ್ಧ ಕೇಳುತ್ತಲೇ ದಯೆ ಹುಟ್ಟಿ ಬಿಟ್ಟು ಬಿಟ್ಟನು. ನಿದ್ರೆ ತಡೆಯಲು ನಿರಂತರವಾಗಿ ಬಿಲ್ವ ಪತ್ರೆ ಎಸೆಯುತ್ತಿದ್ದನು. ಮಾತಿನಂತೆ ಬೆಳಗಿನ ಜಾವಕ್ಕೆ ಎಲ್ಲಾ ಜಿಂಕೆಗಳು ಬಂದು ಬೇಡನಲ್ಲಿ ಹೇಳಿದವು ‘ನಮ್ಮನ್ನು ಈಗ ಕೊಲ್ಲು’ ಎಂದಾಗ ಬೇಡನ ಮನಸ್ಸು ಪರಿವರ್ತನೆಯಾಗಿ ಶಿವ-ಶಿವಾ ನಿಮ್ಮನ್ನುಕೊಂದು ನಾನಾವ ನರಕಕ್ಕೆ ಹೋಗಲಿ ಎಂದನು. ಬೇಡನು ನಿರಾಹಾರನಾಗಿದ್ದು, ಲಿಂಗಾರ್ಚನೆ, ಜಾಗರಣೆ, ಶಿವನಾಮ ಸ್ಮರಣೆ ಮಾಡಿ ಶಿವನ ಮೆಚ್ಚುಗೆಗೆ ಪಾತ್ರನಾದನು. ಕೂಡಲೇ ಅಲ್ಲಿಗೆ ಬಂದ ಶಿವಗುಣಗಳು ವಿಮಾನದಲ್ಲಿ ಆ ಜಿಂಕೆಗಳೊಂದಿಗೆ ಬೇಡನನ್ನು ಕೂರಿಸಿಕೊಂಡು ಕೈಲಾಸಕ್ಕೆ ಕರೆದೊಯ್ದುರು. ಶಿವರಾತ್ರಿಯಂದು ಶಿವನಕಥೆ ಹೇಳಿದವರಿಗೂ ಕೇಳಿದವರಿಗೂ ವ್ರತ, ಜಾಗರಣೆ, ಭಜನೆ, ಪೂಜೆ ಮಾಡಿ ಸರ್ವರಿಗೂ ಶಿವನು ಒಲಿದು ಕೈಲಾಸ ಪದವಿ ಖಚಿತ ಲಭಿಸುವುದೆಂದು ಶಿವಪುರಾಣ ಇಡೀ ಲೋಕಕ್ಕೆ ಸಾರಿದೆ. ಇಹ-ಪರ-ಸುಖ-ಸಂಪತ್ತು-ಸದ್ಗತಿ ದೊರೆಯುವುದೆಂದು ಶಿವಾರಾಧನೆಯಿಂದ ಮತ್ತು ನಮ್ಮ ಬಾಳು ಹಸನಾಗಿ ಎಲ್ಲರೂ ಉತ್ತಮ ಬದುಕು ನಡೆಸುವರು.
Click this button or press Ctrl+G to toggle between Kannada and English