ಬದಿಯಡ್ಕ: ತುಳುನಾಡಿನ ಗತ ವೈಭವವನ್ನು ನೆನಪಿಸುವ ಭವ್ಯ ರಂಪರೆಯ ಕುರುಹುಗಳು ಇಂದಿಗೂ ಬಸ್ರೂರು ಹಾಗೂ ಬಾರ್ಕೂರಿನಲ್ಲಿ ಉಳಿದಿದ್ದರೂ ಜೀವಂತಿಕೆ ಕಳೆದುಕೊಳ್ಳುತ್ತಿರುವುದು ತುಳುನಾಡಿನ ದುರಂತಕ್ಕೊಂದು ಕೈಗನ್ನಡಿಯಾಗಿದೆ. ಬಸ್ರೂರಿನಲ್ಲಿರುವ ತುಳುವರ ಇತಿಹಾಸ ಪ್ರಸಿದ್ಧ ತುಳುವೇಶ್ವರ ದೇವಸ್ಥಾನವು ಆರಾಧನ ಕ್ರಮದಿಂದ ವಿಮುಖವಾಗುತ್ತಾ ಅಳಿಯುತ್ತಿರುವುದರಿಂದ ತೌಳವ ಸಂಸ್ಕೃತಿಯೂ ಕೂಡಾ ಅತಂತ್ರವಾಗಲು ಮುಖ್ಯ ಕಾರಣವಾಗಿರಬಹುದೆಂದು ಹಿರಿಯ ವಿದ್ವಾಂಸ ಪ್ರೋ.ವಾದಿರಾಜ ಭಟ್ ಕನರಾಡಿ ಅಭಿಪ್ರಾಯಪಟ್ಟರು.
ಅವರು ಬಸ್ರೂರಿನ ತುಳುವೇಶ್ವರ ದೇವಸ್ಥಾನದ ಪರಿಸರದಲ್ಲಿ ನಡೆದ ಕಾಸರಗೋಡು ತುಳುವೆರೆ ಆಯನೊ ಕೂಟದ ಹತ್ತನೇ ವರ್ಷದ ಸಂಭ್ರಮದ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆಯುತ್ತಿರುವ ತುಳುನಾಡ ತಿರ್ಗಾಟೋ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತುಳುವೆರೆ ಅಯನೋ ಕೂಟದ ಅಧ್ಯಕ್ಷ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ತುಳುನಾಡಿಗೆ ಮಾದರಿಯಾಗಬೇಕಾದ ಸಮೃದ್ಧ ಸಂಸ್ಕೃತಿ,ಪರಂಪರೆಗಳು ನಮ್ಮ ನಡುವೆ ಅಳಿಯುತ್ತಿದ್ದರೂ ಅದನ್ನು ನಿsಸ್ಸಾಹಯಕರಾಗಿ ನೋಡುತ್ತಿರುವ ಜನ ನಮ್ಮ ನಡುವೆ ಇದ್ದಾರೆಯೇ ಹೊರತು ಅದರ ಬಗ್ಗೆ ಜನ ಜಾಗೃತಿ ಮೂಡಿಸಿ ಸರಕಾರ ಸಂಬಂಧಪಟ್ಟ ಇಲಾಖೆಗಳ ಮೂಲಕ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿಲ್ಲ ಇಂತಹ ಕೆಲಸಗಳಿಗೆ ಆದ್ಯತೆ ಕಲ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಬಸ್ರೂರು ತಾಲೂಕು ಪಂ.ಸದಸ್ಯ ರಾಮ್ ಕಿಸಾನ್ ಹೆಗ್ಡೆ ಮಾತನಾಡಿ ತುಳುವನ್ನು ದೇಶದ ಎಂಟನೇಯ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸಬೇಕಾದರೆ ಇಂತಹ ಇತಿಹಾಸದ ಕುರುಹುಗಳನ್ನು ಸಂರಕ್ಷಿಸಿ ಇಟ್ಟರೆ ಮಾತ್ರ ಮುಂದಿನ ತಲೆಮಾರಿಗೊಂದು ಐತಿಹಾಸಿಕ ದಾಖಲೆಯಾಗಬಹುದು.ತುಳುವರ ಅಭಿಮಾನದ ಪ್ರತೀಕವಾದ ತುಳುವೇಶ್ವರ ದೇವಸ್ಥಾನದ ಪುನರುದ್ಧಾರಕ್ಕೆ ಶೀಘ್ರವೇ ಕಾಲ ಕೂಡಿಬರಲೆಂದು ಆಶಿಸಿದರು.
ಆಖಿಲ ಭಾರತ ತುಳು ಒಕ್ಕೂಟ ಹಾಗೂ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಹಯೋಗದೊಂದಿಗೆ ಜರಗಿದ ಕಾರ್ಯಕ್ರಮದಲ್ಲಿ ಬಸ್ರೂರು ಶಾರದ ಕಾಲೇಜಿನ ಪ್ರಾಂಶುಪಾಲ ಕೆ.ರಾಧಕೃಷ್ಣ ಶೆಟ್ಟಿ,ತುಳುವೇಶ್ವರ ದೇವಸ್ಥಾನದ ಅರ್ಚಕ ಮಹೇಶ್ ಕಿಣಿ,ಆಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ,ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಎಸ್.ಆರ್.ಬಂಡಿಮಾರ್,ಯಶೋಧ ಕೇಶವ,ತುಳುವೆರ ಆಯನೋ ಕೂಟದ ಪ್ರಧಾನ ಸಂಚಾಲಕ ಡಾ.ರಾಜೇಶ್ ಆಳ್ವ ಬದಿಯಡ್ಕ,ಪ್ರೋ ಶ್ರೀನಾಥ್ ಕಾಸರಗೋಡು,ಸುಧೀರ್ ಕುಮಾರ್ ರೈ ಮುಳ್ಳೇರಿಯ,ಕೆ.ಬಾಲಕೃಷ್ಣ ಶೆಟ್ಟಿ ಕಟ್ಟತ್ತಾಡಗುತ್ತು, ಬೊಲ್ಪು ಬದಿಯಡ್ಕದ ಅಧ್ಯಕ್ಷ ಸುಂದರ ಬಾರಡ್ಕ, ಬೊಳಿಕೆ ಜಾನಪದ ಕಲಾ ಸಂಘದ ಅಧ್ಯಕ್ಷ ಶಂಕರ ಸ್ವಾಮಿ ಕೃಪಾ,ತುಳುನಾಡೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ರೈ, ಕೋಶಾಧಿಕಾರಿ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ,ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಆಳ್ವ ಮೂಲಡ್ಕ,ತುಳು ಲೇಖಕೆರೆ ಕೂಟದ ಕಾರ್ಯದರ್ಶಿ ಸತೀಶ ಸಾಲ್ಯಾನ್ ನೆಲ್ಲಿಕುಂಜೆ,ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಸದಸ್ಯ ಆಖಿಲೇಶ್ ನಗುಮುಗಂ, ತಿರ್ಗಾಟದ ಸಂಚಾಲಕರಾದ ಹರ್ಷ ರೈ ಪುತ್ರಕಳ,ಜಯ ಮಣಿಯಂಪಾರೆ ಮೊದಲಾದವರು ಪಾಲ್ಗೊಂಡಿದ್ದರು. ತುಳುನಾಡಿನ ಬಡಗು ಬಸ್ರೂರಿನಿಂದ ಆರಂಭವಾದ ತುಳುನಾಡ ತಿರ್ಗಾಟೊ ಅಭಿಯಾನ ಬಳಿಕ ಬಸ್ರೂರು ಹಾಗೂ ಬಾರ್ಕೂರಿನ ವಿವಿಧ ಪುರಾತನ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು.
ತುಳುನಾಡ ತಿರ್ಗಾಟಕ್ಕೆ ಸೂರ್ಯ ಚಂದ್ರದ ಸಂಕೇತದ ತುಳು ಧ್ವಜವನ್ನು ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದ್ದೂ ಬಸ್ರೂರು,ಸೌಕೂರು ಹಾಗೂ ಬಾರ್ಕೂರು,ಮಂದಾರ್ತಿ ಮೊದಲಾದ ಪ್ರದೇಶಗಳಿಗೆ ಭೇಟಿ ಮಾಡಿದ ಈ ವಿಶೇಷ ತಂಡ ಸ್ಥಳ ಅಧ್ಯಯನದ ಜತೆಗೆ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಿತ್ತಲ್ಲದೆ ಈ ಬಗ್ಗೆ ಜನ ಜಾಗೃತಿ ಮೂಡಿಸುವ ಅಂಗವಾಗಿ ದಾಖಲೀಕರಣವನ್ನು ಕೈಗೊಂಡಿತು.ಬಸ್ರೂರು ಹಾಗೂ ಬಾರ್ಕೂರಿನ ಕೆಲವು ಐತಿಹಾಸಿಕ ಕುರುಹುಗಳು ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಮೂಲೆಗುಂಪಾಗಿದ್ದು ಇನ್ನೂ ಕೆಲವೆಡೆ ಬಟ್ಟೆ ಒಗೆಯುವ ಕಲ್ಲುಗಳಾಗಿಯೂ ಹಾಗೂ ಹಾಸುಕಲ್ಲು,ಮನೆ ಮೆಟ್ಟಿಲುಗಳಾಗಿಯೂ ಉಪಯೋಗಿಸುತ್ತಿರುವುದು ಕಂಡು ಬಂದಿತ್ತು. ಇದನ್ನು ಸಂರಕ್ಷಿಸಲು ಸರಕಾರ ಹಾಗೂ ಸಂಬಂಧಪಟ್ಟ ದತ್ತಿ ಇಲಾಖೆಯ ಗಮನ ಸೆಳೆಯಲು ತುಳುವೆರೆ ಅಯನೋ ಕೂಟ ಕಾರ್ಯ ಪ್ರವೃತ್ತವಾಗಿದೆ.
Click this button or press Ctrl+G to toggle between Kannada and English