ಸಾಂಕ್ರಾಮಿಕ ರೋಗಗಳ ಜಾಗೃತಿ ಬೀದಿ ನಾಟಕ

7:48 PM, Tuesday, March 22nd, 2016
Share
1 Star2 Stars3 Stars4 Stars5 Stars
(5 rating, 6 votes)
Loading...
street play

ಕುಂಬಳೆ: ಮಲೇರಿಯಾ,ಡೆಂಜಿಜ್ವರ,ಆನೆಕಾಲು ರೋಗ,ಇಲಿಜ್ವರ,ಹಳದಿ ಕಾಮಾಲೆ,ಅತಿಸಾರ ಮೊದಲಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ದೃಷ್ಟಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಲಾಗಿರುವ ಆರೋಗ್ಯ ಸಂದೇಶ ಯಾತ್ರೆ ಬೀದಿ ನಾಟಕ ಪ್ರದರ್ಶನ ಸೋಮವಾರ ಕುಂಬಳೆ ಪೇಟೆಯಲ್ಲಿ ಪ್ರದರ್ಶನಗೊಂಡಿತು.

ಪ್ರತ್ಯೇಕವಾಗಿ ರೂಪೀಕರಿಸಿದ ಸರಳ ವೇದಿಕೆಯಲ್ಲಿ ಜಾಗೃತಿ ಬೀದಿ ನಾಟಕ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು.ವಿಶೇಷವೆಂಬಂತೆ ಆರೋಗ್ಯ ಇಲಾಖೆಯ ನೌಕರರೇ ಬರೆದು ನಿರ್ದೇಶಿಸಿ ಅಭಿನಯಿಸಿದ ಬೀದಿ ನಾಟಕವನ್ನು ನೂರಾರು ನಾಗರಿಕರು ಸುತ್ತ ನೆರೆದು ವೀಕ್ಷಿಸಿದರು.ಸುಂದರನ್ ತೊಳ್ಳೇರಿ ಬರೆದಿರುವ ನಾಟಕವನ್ನು ಪ್ರಕಾಶ್ ಚಂದೇರಾ ನಿರ್ದೇಶಿಸಿದ್ದು,ಕೃಷ್ಣಕುಮಾರ್ ಪಿ,ಬೈಜು ಎಸ್ ರಾಮ್,ಮಣಿಕಂಠನ್,ಬಾಲಕೃಷ್ಣನ್ ಹಾಗೂ ಪ್ರೇಮನ್ ಕಥಾ ಪಾತ್ರಗಳನ್ನು ಮನೋಜ್ಞವಾಗಿ ಅಭಿನಯಿಸಿದರು.

ಮಂಜೇಶ್ವರದಿಂದ ಆರಂಭಗೊಂಡ ಜಾಗೃತಿ ಬೀದಿ ನಾಟಕ ಪ್ರದರ್ಶನ,ಹೊಸಂಗಡಿ,ಉಪ್ಪಳ,ಕುಂಬಳೆ,ಕಾಸರಗೋಡು ಸಹಿತ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English