ಉಪ್ಪಳ: ಸೌರಮಾನ ಯುಗಾದಿಯ ಹೊಸ ವರುಷದ ಹೊಸ್ತಿಲಲ್ಲ್ಲಿ ನಿಂತುಕೊಂಡು, ಹೊಸ ಫಸಲುಗಳನ್ನು ದೇವರಿಗೆ ಅರ್ಪಿಸುವುದರ ಮೂಲಕ ಸುಖ,ಶಾಂತಿ ಮತ್ತು ಸಮೃದ್ಧಿಗಾಗಿ ದೇವರನ್ನು ಆರಾಧಿಸಿ ಹೊಸ ವರುಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳುವ ತುಳು ನಾಡು ಹಾಗೂ ಮಲೆಯಾಳ ನಾಡಲ್ಲಿ ಖ್ಯಾತಿ ಪಡೆದಿರುವ ವಿಷು ಅಥವಾ ಬಿಸು ಹಬ್ಬವನ್ನು ಗುರುವಾರ ಅತ್ಯಂತ ಸಂತೋಷ ಸಡಗರದಿಂದ ಆಚರಿಸಲಾಯಿತು.
ಕಣಿಕಾಣುವ ಹಬ್ಬವೆಂದೇ ಪ್ರಸಿದ್ಧಿ ಪಡೆದ ಈ ಹಬ್ಬದ ಅಂಗವಾಗಿ ನಸುಕಿನಲ್ಲಿ ಎದ್ದು,ಮುಚ್ಚಿದ ಕಣ್ಣು ತೆರೆಯದೇ ಹಿಂದಿನ ತಡರಾತ್ರಿ ಮನೆಯ ಯಜಮಾನ ದೇವರ ಕೋಣೆಯಲ್ಲಿ ಸಜ್ಜುಗೊಳಿಸಿದ ಫಲವಸ್ತುಗಳನ್ನೊಳಗೊಂಡ ವಿಷು ಕಣಿಗೆ ಅಡ್ಡಬಿದ್ದು ಕಣ್ಣು ತೆರೆದಯ ವಿಷು ಕಣಿಯನ್ನು ನೋಡಿ ದಿನವನ್ನು ಜಿಲ್ಲೆಯಾದ್ಯಂತ ಜನರು ಇಡೀ ದಿನವನ್ನು ಸಂಭ್ರಮದಿಂದ ಕಳೆದರು. ಇನ್ನು ಕೆಲವರು ದೇವಾಲಯಗಳಿಗೆ ಭೇಟಿ ನೀಡಿ, ಅಲ್ಲಿ ಸಜ್ಜುಗೊಳಿಸಿದ ಕಣಿಯನ್ನು ನೋಡಿ ಕೃತಾರ್ಥರಾದರು. ಹೊಸ ವರ್ಷದ ಪಂಚಾಂಗ,ಹಿತ್ತಿಲಲ್ಲೇ ಬೆಳೆದಂಥ ಫಲವಸ್ತುಗಳು, ಕನ್ನಡಿಯಲ್ಲಿ ನಮ್ಮ ಮುಖ ಹಚ್ಚಿದ ದೀಪದ ಬೆಳಕಿನಲ್ಲಿ ಪತ್ತೆ ಹಚ್ಚಿ ಅದೇ ಸಂಪತ್ತು ವರ್ಷವಿಡೀ ಇರುತ್ತದೆ ಎಂಬ ಹಾರೈಕೆ ಹೊತ್ತು ಹೆತ್ತವರ,ಹಿರಿಯರ ಪಾದಗಳಿಗೆ ನಮಸ್ಕರಿಸಲಾಯಿತು.
ವಿಷು ಎಂದರೆ ನವ ವರುಷದ ಆರಂಭ ಮತ್ತು ಸಮೃದ್ಧಿ ಸಂಕಲ್ಪದ ದಿನ. ಯಾವುದೇ ಒಂದು ಶುಭ ಕಾರ್ಯ ಆರಂಭಕ್ಕೆ ಅಥವಾ ದೇಶದ ಬೆನ್ನೆಲುಬೇ ಆಗಿರುವ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ. ವಿಷು ಹಬ್ಬ ಕೃಷಿಯ ಹಬ್ಬವೂ ಸಹ ಆಗಿದೆ. ಮುಂದಿನ ವರರ್ಷವಿಡೀ ನಾಡಿನೆಲ್ಲೆಡೆ ಸುಖ,ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ಆಚರಿಸುವ ಈ ವಿಷು ದಿನದಂದು ವಾಡಿಕೆಯಂತೆ ಮನೆಗಳಲ್ಲಿ ಮನೆಯ ಹಿರಿಯರಿಂದ ಹಿಡಿದು ಪುಟಾಣಿ ಮಕ್ಕಳವರೆಗೂ ಹೊಸ ಬಟ್ಟೆ ತೊಟ್ಟು, ಗುರು ಹಿರಿಯರ ಆಶೀರ್ವಾದವನ್ನು ಪಡೆದರು. ಹಿತೈಷಿಗಳ, ತರವಾಡು ಮನೆಯ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡಿ ಹಿರಿಯರ ಆಶೀರ್ವಾದವನ್ನು ಪಡೆಯುವುದು ಕಂಡುಬಂತು. ಅಲ್ಲದೆ ಮನೆಯವರೊಂದಿಗೆ ವಿಷುವಿನ ಪ್ರಯುಕ್ತ ಹಬ್ಬದ ಊಟವನ್ನು ಸವಿಯಲಾಯಿತು.
ಐಲ ಶ್ರೀ ಕ್ಷೇತ್ರದಲ್ಲಿ ವಿಷು ಆಚರಣೆ
ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ಗುರುವಾರ ವಿಷು ದಿನಾಚರಣೆಯ ಅಂಗವಾಗಿ ದೇವಾಲಯದಲ್ಲಿ ವಿಷು ಕಣಿ ಇರಿಸಲಾಗಿದ್ದು, ಸಾವಿರಾರು ಮಂದಿ ಭಕ್ತರು ಶ್ರೇ ದೇವಿಯ ದರ್ಶನ ಸಹಿತ ವಿಷುಕಣಿಯ ದರ್ಶನವನ್ನು ಪಡೆದರು. ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆ, ಬಲಿ ಉತ್ಸವ ಅನ್ನಸಂತರ್ಪಣೆ ನಡೆಯಿತು.
Click this button or press Ctrl+G to toggle between Kannada and English