ಮಂಜೇಶ್ವರ: ಶ್ರೀಕ್ಷೇತ್ರ ಕಣ್ವತೀರ್ಥದಲ್ಲಿ ಶ್ರೀರಾಮ ನವಮಿ ರಥೋತ್ಸವ ಹಾಗೂ ಶ್ರೀಬ್ರಹ್ಮೇಶ್ವರ ದೇವರ ವಾರ್ಷಿಕ ಉತ್ಸವವು ವಿವಿಧ ವೈದಿಕ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಧರ್ಮಜಾಗೃತಿ ಅಭಿಮಾನಿ ಬಳಗದ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರುರವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು.ರಾಮಪ್ಪ ಮಂಜೇಶ್ವರ,ಕೃಷ್ಣಪ್ಪ ಮಾಸ್ಟರ್ ತೂಮಿನಾಡು,ಭಗವಾನ್‌ದಾಸ್ ಕಣ್ವತೀರ್ಥ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಯೋಗಾಚಾರ್ಯ ಪುಂಡರೀಕಾಕ್ಷ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು.ಕ್ಷೇತ್ರ ಸಮಿತಿಯ ಅಧ್ಯಕ್ಷ ಆನಂದ ಮಾಸ್ಟರ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ ವಿದುಷಿ ಸುನಿತಾ ಜಯಂತ್ ಉಳ್ಳಾಲ ಇವರ ಶಿಷ್ಯರಿಂದ ನೃತ್ಯ ವೈವಿಧ್ಯ ಶ್ರೀದೇವಿಲೀಲಾಮೃತಂ ನೃತ್ಯ ರೂಪಕ ಪ್ರದರ್ಶನಗೊಂಡಿತು.
ಶ್ರೀದೇವರಿಗೆ ಪಂಚಾಮೃತಾಭಿಷೇಕ,ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ,ಮಧ್ಯಾಹ್ನ ಪೂಜೆ,ರಂಗಪೂಜೆ,ಪಲ್ಲಕಿ ಉತ್ಸವ,ರಾತ್ರಿ ರಥೋತ್ಸವ,ದರ್ಶನ ಬಲಿ,ಪ್ರಸಾದ ವಿತರಣೆ ನಡೆಯಿತು.
Click this button or press Ctrl+G to toggle between Kannada and English