ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ-ರಥೋತ್ಸವ

Monday, November 27th, 2023
kodi habba

ಕುಂದಾಪುರ : ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ಧ್ವಜಪುರ (ಕೋಟೇಶ್ವರ)ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ-ರಥೋತ್ಸವ ನ.27 ಸೋಮವಾರ ವಿಜೃಂಭಣೆಯಿಂದ ನಡೆಯಿತು. ಕರಾವಳಿಯ ಪ್ರಥಮ ರಥೋತ್ಸವ ಎಂಬ ಹೆಗ್ಗಳಿಕೆ ಪಡೆದಿರುವ ಕೋಟೇಶ್ವರ ರಥೋತ್ಸವದ ಅಂಗವಾಗಿ ನ.20ರಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಸೋಮವಾರ ದಿವಾಗಂಟೆ 11-31ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ನಡೆಯಿತು. ಕೋಟೇಶ್ವರ ರಥೋತ್ಸವದ ಸಂದರ್ಭದಲ್ಲಿ ಗರುಡ ಪ್ರದಕ್ಷಣೆ ಸಹಜ ಪ್ರಕ್ರಿಯೆ. ಎಷ್ಟೋ ಜನ ಭಕ್ತರು ಗರುಡ […]

ಮಹತೋಭಾರ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ

Sunday, October 18th, 2020
Mangaladevi

ಮಂಗಳೂರು: ಮಹತೋಭಾರ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವವು ಅಕ್ಟೋಬರ್ 17 ರಿಂದ ಆರಂಭಗೊಂಡಿದೆ. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನಸಂದಣಿ ಸೇರದಂತೆ ಉತ್ಸವದ ಸಮಯ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ ಎಂದು ಎಂದು ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಹೇಳಿದ್ದಾರೆ. ಮಹಾನವಮಿಯಂದು ಚಂಡಿಕಾಹೋಮ, ವಾಹನ ಪೂಜೆ (ಆಯುಧ ಪೂಜೆ), ರಾತ್ರಿ ದೊಡ್ಡ ವಿಶೇಷ ರಂಗಪೂಜೆ ನಂತರ ಸಣ್ಣ ರಥೋತ್ಸವ ನೆರವೇರಿಸಲಾಗುವುದು. ವಿಜಯದಶಮಿಯಂದು ಬೆಳಿಗ್ಗೆ ತೆನೆ ಹಬ್ಬದ ಅಂಗವಾಗಿ 8 ಗ್ರಾಮದ ಜನರಿಗೆ ತೆನೆ ನೀಡುವ ಪದ್ಧತಿ […]

ಮಂಗಳಾದೇವಿಯಲ್ಲಿ ಮಾರ್ಚ್ 12ರಿಂದ ಜಾತ್ರಾ ಮಹೋತ್ಸವ

Tuesday, March 10th, 2020
mangaladevi

ಮಂಗಳೂರು : ಇತಿಹಾಸ ಪ್ರಸಿದ್ಧ ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾ. 12, 2020 ಗುರುವಾರದಿಂದ ಮಾ. 17, 2020ನೇ ಮಂಗಳವಾರದವರೆಗೆ ಜಾತ್ರಾ ಮಹೋತ್ಸವ ಜರಗಲಿರುವುದು. ಮಾ.16 ಸೋಮವಾರ ಮಧ್ಯಾಹ್ನ ಗಂಟೆ 12 ಕ್ಕೆ ರಥಾರೋಹಣ ನಂತರ ಅನ್ನದಾನ ಸೇವೆ ರಾತ್ರಿ 7 ರಿಂದ ರಥೋತ್ಸವ, ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಭೂತಬಲಿ, ಕವಾಟ ಬಂಧನ, ಶಯನ ಮೊದಲಾದ ಧಾರ್ಮಿಕ ವಿಧಿಗಳು ನಡೆಯಲಿದೆ. ಮಾ.17ರಂದು ತುಲಾಭಾರ ಸಂಜೆ 7ಕ್ಕೆ ಬಳಿ […]

ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ರಥೋತ್ಸವ

Monday, February 24th, 2020
rathothsava

ಉಜಿರೆ : ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಶನಿವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಭಕ್ತಾದಿಗಳು ರಥೋತ್ಸವ ನೋಡಿ ಧನ್ಯತೆಯನ್ನು ಹೊಂದಿದ್ದರು.  

ಧರ್ಮಸ್ಥಳದಲ್ಲಿ ರಥೋತ್ಸವ

Thursday, February 15th, 2018
dharmastala

ಉಜಿರೆ: ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಬುಧವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು.ನಾಡಿನೆಲ್ಲಡೆಯಿಂದ ಬಂದ ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಮಾಡ ಧನ್ಯತೆಯನ್ನು ಹೊಂದಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಚಂಡಿಕಾ ಯಾಗ ಹಾಗೂ ರಥೋತ್ಸವ

Wednesday, October 12th, 2016
kollur-temple

ಕೊಲ್ಲೂರು: ನೆರೆದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅ. 10ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಚಂಡಿಕಾ ಯಾಗ ಹಾಗೂ ರಥೋತ್ಸವ ಸಂಭ್ರಮದಿಂದ ಜರಗಿತು. ಅ. 10ರ ಸಂಜೆ ನಡೆದ ರಥೋತ್ಸವದಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಕಾರ್ಯನಿರ್ವಹಣಾಧಿಕಾರಿ ಎಸ್‌. ಯೋಗೇಶ್ವರ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ರಾಜ್ಯಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ದೇಗುಲದ ಮುಖ್ಯ ಅರ್ಚಕರಾದ ರಾಮಚಂದ್ರ ಅಡಿಗ ನೇತೃತ್ವಧಿದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶಾಸಕ ಕೆ. […]

ಶ್ರೀಕ್ಷೇತ್ರ ಕಣ್ವತೀರ್ಥದಲ್ಲಿ ಶ್ರೀರಾಮ ನವಮಿ ರಥೋತ್ಸವ

Tuesday, April 19th, 2016
Kanwa Tirtha

ಮಂಜೇಶ್ವರ: ಶ್ರೀಕ್ಷೇತ್ರ ಕಣ್ವತೀರ್ಥದಲ್ಲಿ ಶ್ರೀರಾಮ ನವಮಿ ರಥೋತ್ಸವ ಹಾಗೂ ಶ್ರೀಬ್ರಹ್ಮೇಶ್ವರ ದೇವರ ವಾರ್ಷಿಕ ಉತ್ಸವವು ವಿವಿಧ ವೈದಿಕ,ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಧರ್ಮಜಾಗೃತಿ ಅಭಿಮಾನಿ ಬಳಗದ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರುರವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು.ರಾಮಪ್ಪ ಮಂಜೇಶ್ವರ,ಕೃಷ್ಣಪ್ಪ ಮಾಸ್ಟರ್ ತೂಮಿನಾಡು,ಭಗವಾನ್‌ದಾಸ್ ಕಣ್ವತೀರ್ಥ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಯೋಗಾಚಾರ್ಯ ಪುಂಡರೀಕಾಕ್ಷ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು.ಕ್ಷೇತ್ರ ಸಮಿತಿಯ ಅಧ್ಯಕ್ಷ ಆನಂದ ಮಾಸ್ಟರ್ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ […]

ವಿಜ್ರುಂಭಣೆಯಿಂದ ನೆರವೇರಿದ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ

Monday, February 18th, 2013
Sri Venkatramana Temple

ಮಂಗಳೂರು : ಕೊಡಿಯಾಲ್‌ ತೇರು ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ  ರಥೋತ್ಸವವು ಈ ವರ್ಷವೂ ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ರವಿವಾರ ವಿಜ್ರುಂಭಣೆಯಿಂದ ನೆರವೇರಿತು. ಐದು ದಿನಗಳ ಪರ್ಯಂತ  ವೈದಿಕವಿಧಿವಿಧಾನಗಳೊಂದಿಗೆ ನಡೆದುಬಂದ ರಥೋತ್ಸವ ಕಾರ್ಯಕ್ರಮಗಳು ರವಿವಾರದಂದು ಬೆಳಗ್ಗೆ ಮಹಾಪ್ರಾರ್ಥನೆಯ ಬಳಿಕ ಶ್ರೀ ದೇವರಿಗೆ ಸಿಯಾಳಾಭಿಷೇಕ ನೆರವೇರಿತು. ಶ್ರೀ ಕಾಶಿಮಠ ಸಂಸ್ಥಾನದ ಮಠಾಧೀಶ ಶ್ರೀಮತ್‌ ಸುಧೀಂದ್ರತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪಟ್ಟಶಿಷ್ಯ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತಗಳಿಂದ ಶ್ರೀ ದೇವರಿಗೆ ಶತಕಲಶಾಭಿಷೇಕ, […]

ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆ. 28ರಿಂದ ಅ. 7ರ ತನಕ ನವರಾತ್ರಿ ಉತ್ಸವ

Sunday, September 25th, 2011
Mangaladevi Temple

ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 28ರಿಂದ ಅ. 7ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಶನಿವಾರ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅ. 5ರಂದು ಸಣ್ಣ ರಥೋತ್ಸವ, 6ರಂದು ರಾತ್ರಿ 7.30ಕ್ಕೆ ರಥೋತ್ಸವ ಜರಗುವುದು. ನವರಾತ್ರಿ ಉತ್ಸದ ಅವಧಿಯಲ್ಲಿ ಪ್ರತೀದಿನ ವಿವಿಧ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮ ನೀಡಲಿವೆ. ಸುಮಾರು 2,000 ಕಲಾವಿದರು ಕಾರ್ಯಕ್ರಮ ನೀಡುಲಿದ್ದು. ಸೌಂದರ್ಯ […]