ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆ. 28ರಿಂದ ಅ. 7ರ ತನಕ ನವರಾತ್ರಿ ಉತ್ಸವ

8:08 PM, Sunday, September 25th, 2011
Share
1 Star2 Stars3 Stars4 Stars5 Stars
(26 rating, 7 votes)
Loading...

Mangaladevi Temple

ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ. 28ರಿಂದ ಅ. 7ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಶನಿವಾರ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅ. 5ರಂದು ಸಣ್ಣ ರಥೋತ್ಸವ, 6ರಂದು ರಾತ್ರಿ 7.30ಕ್ಕೆ ರಥೋತ್ಸವ ಜರಗುವುದು. ನವರಾತ್ರಿ ಉತ್ಸದ ಅವಧಿಯಲ್ಲಿ ಪ್ರತೀದಿನ ವಿವಿಧ ಸಾಂಸ್ಕೃತಿಕ ತಂಡಗಳು ಕಾರ್ಯಕ್ರಮ ನೀಡಲಿವೆ. ಸುಮಾರು 2,000 ಕಲಾವಿದರು ಕಾರ್ಯಕ್ರಮ ನೀಡುಲಿದ್ದು. ಸೌಂದರ್ಯ ಲಹರಿ, ಭಕ್ತಿ ಸಂಗೀತ, ಸುಗಮ ಸಂಗೀತ, ಯಕ್ಷಗಾನ ತಾಳಮದ್ದಳೆ, ಭರತನಾಟ್ಯ, ವಿವಿಧ ವಿನೋದಾವಳಿ, ತುಳು ಹಾಸ್ಯ ನಾಟಕ, ಜಾನಪದ, ಬಯಲಾಟ, ತುಳು ಕವಿಗಾನ ಕುಂಚ, ನೃತ್ಯ ವೈವಿಧ್ಯ, ಸ್ಯಾಕ್ಷೋಫೋನ್‌ ವಾದನ, ಭಾವ-ಭಕ್ತಿ ಗೀತೆಗಳ ಸಂಗಮ, ಭಕ್ತಿ ರಸಮಂಜರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು ಎಂದು ಅವರು ಹೇಳಿದರು.

ರಿಸಲ್ಟ್ ಓರಿಯೆಂಟೆಡ್‌ ಕೋಚಿಂಗ್‌ ಕ್ಲಾಸ್‌ ಮತ್ತು ಮಂಗಳಾದೇವಿ ದೇವಸ್ಥಾನದ ಸಹಭಾಗಿತ್ವದಲ್ಲಿ ಅ. 1ರಂದು ಜಾನಪದ ಕಲೋತ್ಸವ ಸ್ಪರ್ಧೆ ನಡೆಯಲಿದೆ. ದೇವಸ್ಥಾನದ ಗಣಪತಿ ದೇವರಿಗೆ ಸುಮಾರು 1 ಕೆ.ಜಿ. 300 ಗ್ರಾಂ ಚಿನ್ನದಿಂದ ಮಾಡಿದ ಕವಚವನ್ನು ದಿಲ್ಲಿಯ ಉದ್ಯಮಿಯೊಬ್ಬರ ಕುಟುಂಬ ಸಮರ್ಪಿಸಲಿದೆ ಎಂದು ಹೇಳಿದರು.

ಪ್ರಧಾನ ಅರ್ಚಕರಾದ ಎನ್‌. ವಾಸುದೇವ ಐತಾಳ, ಪದ್ಮನಾಭ ಐತಾಳ, ದೇವಸ್ಥಾನದ ಸುಧಾಕರ ರಾವ್‌ ಪೇಜಾವರ, ವಿನಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English