ವಿಜ್ರುಂಭಣೆಯಿಂದ ನೆರವೇರಿದ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ

2:12 PM, Monday, February 18th, 2013
Share
1 Star2 Stars3 Stars4 Stars5 Stars
(No Ratings Yet)
Loading...

Sri Venkatramana Templeಮಂಗಳೂರು : ಕೊಡಿಯಾಲ್‌ ತೇರು ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ  ರಥೋತ್ಸವವು ಈ ವರ್ಷವೂ ಅಪಾರ ಸಂಖ್ಯೆಯ ಭಕ್ತರ ಉಪಸ್ಥಿತಿಯಲ್ಲಿ ರವಿವಾರ ವಿಜ್ರುಂಭಣೆಯಿಂದ ನೆರವೇರಿತು.

ಐದು ದಿನಗಳ ಪರ್ಯಂತ  ವೈದಿಕವಿಧಿವಿಧಾನಗಳೊಂದಿಗೆ ನಡೆದುಬಂದ ರಥೋತ್ಸವ ಕಾರ್ಯಕ್ರಮಗಳು ರವಿವಾರದಂದು ಬೆಳಗ್ಗೆ ಮಹಾಪ್ರಾರ್ಥನೆಯ ಬಳಿಕ ಶ್ರೀ ದೇವರಿಗೆ ಸಿಯಾಳಾಭಿಷೇಕ ನೆರವೇರಿತು. ಶ್ರೀ ಕಾಶಿಮಠ ಸಂಸ್ಥಾನದ ಮಠಾಧೀಶ ಶ್ರೀಮತ್‌ ಸುಧೀಂದ್ರತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪಟ್ಟಶಿಷ್ಯ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತಗಳಿಂದ ಶ್ರೀ ದೇವರಿಗೆ ಶತಕಲಶಾಭಿಷೇಕ, ಗಂಗಾಭಿಷೇಕ, ಪಂಚಾಮೃತ ಅಭಿಷೇಕ ನಡೆಯಿತು.

ಶ್ರೀದೇವರ ಮಹಾಪೂಜೆಯು ಉಭಯ ಯತಿವರ್ಯರ ಉಪಸ್ಥಿತಿಯಲ್ಲಿ ನೆರವೇರಿ ಮಹಾಮಂಗಳಾರತಿ ನಡೆಯಿತು. ಯಜ್ಞ ಮಹಾಪೂರ್ಣಾಹುತಿಯ ಅನಂತರ ಶ್ರೀ ವೀರ ವೆಂಕಟೇಶ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ಸ್ವರ್ಣಪಲ್ಲಕ್ಕಿಯಲ್ಲಿರಿಸಿ ರಥಾರೋಹಣ ನಡೆಯಿತು. ಶ್ರೀದೇವರನ್ನು ರಥದ ಮೇಲೆ ಇರಿಸಿದ ಬಳಿಕ ಶ್ರೀಗಳವರಿಂದ ಪೂಜಾ ಕಾರ್ಯಕ್ರಮಗಳು ಜರಗಿದವು. ಸಾವಿರಾರು ಭಜಕರು ಸೇರಿ ರಥವನ್ನು ಎಳೆದು ಪುನೀತರಾದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English