ಕಾಣಿಕೆ ಡಬ್ಬಿ ಪ್ರಕರಣ : ನೈಜ ಆರೋಪಿಗಳ ಪತ್ತೆಗಾಗಿ ವಿಶೇಷ ಪ್ರಾರ್ಥನೆ

3:24 PM, Monday, May 16th, 2016
Share
1 Star2 Stars3 Stars4 Stars5 Stars
(4 rating, 3 votes)
Loading...
Temple Hundi

ಪೆರ್ಲ: ಪೆರ್ಲದಿಂದ ಬಜಕ್ಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ತೆರಳುವ ದಾರಿಯಲ್ಲಿರುವ ಕಾಣಿಕೆ ಡಬ್ಬಿ ಸಹಿತವಿರುವ ಶಿವಲಿಂಗಕ್ಕೆ ಕಿಡಿಗೇಡಿಗಳು ಹಸಿರು ಬಣ್ಣ ಬಳಿದಿರುವುದಲ್ಲದೆ ಅದು ಬಿಜೆಪಿ ಕಾರ್ಯಕರ್ತರು ಮಾಡಿದ ಕೃತ್ಯವೆಂದೂ, ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದಾಗಿಯೂ ಅಂತರ್ಜಾಲದಲ್ಲಿ ಸುಳ್ಳು ಪ್ರಚಾರ ಹಬ್ಬಿಸಿದವರ ವಿರುಧ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನೈಜ ಆರೋಪಿಗಳ ಪತ್ತೆಗಾಗಿ ಆದಿತ್ಯವಾರ ವಿಶೇಷ ಪ್ರಾರ್ಥನೆ ನಡೆಯಿತು. ಈ ಆರೋಪ ಮತ್ತು ಕಿಡಿಗೇಡಿಗಳ ಕೃತ್ಯವನ್ನು ಜಾಗೃತ ಹಿಂದೂ ಬಾಂಧವರು ಪೆರ್ಲ ಘಟಕ ಖಂಡಿಸಿದೆ.

ಪೆರ್ಲ ಪೇಟೆಯಲ್ಲಿ ಬಜಕೂಡ್ಲು ಶ್ರೀ ಮಹಾಲಿಂಶ್ವರ ದೇವಸ್ಥಾನದ ವತಿಯಿಂದ ಸ್ಥಾಪಿಸಲಾಗಿದ್ದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಮೇ.12 ರಂದು ಹಸಿರು ಬಣ್ಣ ಸುರಿದು ವಿರೂಪಗೊಳಿಸಿದ್ದಾರೆ. ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಹಾಗೂ ಐಕ್ಯರಂಗದ ವತಿಯಿಂದ ಪೇಟೆಯಲ್ಲಿ ಪ್ರತ್ಯೇಕವಾಜಜಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿತ್ತು.

ಹಸಿರುಬಣ್ಣ ಸುರಿದಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಕೋಮುಭಾವನೆ ಕೆರಳಿಸಿ ಘರ್ಷಣೆ ನಡೆಸಲು ಕಿಡಿಗೇಡಿಗಳು ತಂತ್ರ ರೂಪಿಸಿದ್ದು, ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಸಾಮರಸ್ಯ ಕಾಪಾಡಲು ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಶಾಂತಗೊಂಡಿತ್ತು.ಆದರೆ ಭಾನುವಾರದಿಂದೀಚೆಗೆ ವಾಟ್ಸ್ ಆಫ್ ಸಹಿತ ವಿವಿದ ಮಾದ್ಯಮಗಳಲ್ಲಿ ಕೃತ್ಯ ನಡೆಸಿರುವುದು ಬಿಜೆಪಿ ಕಾರ್ಯಕರ್ತರೇ.ಬದಿಯಡ್ಕ ಪೋಲೀಸರು ಪೆರ್ಲದಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಇಂದು ಕಂಡುಬಂತ್ತೆಂಬ ಮಾಹಿತಿಗಳು ಹಲವಷ್ಟು ಹೊತ್ತು ಆತಂಕಕ್ಕೆ ಕಾರಣವಾಗಿತ್ತು.ಆದರೆ ಬದಿಯಡ್ಕ ಪೋಲೀಸರು ಭಾನುವಾರ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.ಪ್ರಬಲ ನ್ಯಾಯದ ಭರವಸೆ ಇಲ್ಲದ ತಾವು ಮತಚಲಾಯಿಸುದು ಅಪಾಯಕಾರಿಯೆಂದು ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English