ಕಾಣಿಕೆ ಡಬ್ಬಿ ಪ್ರಕರಣ : ನೈಜ ಆರೋಪಿಗಳ ಪತ್ತೆಗಾಗಿ ವಿಶೇಷ ಪ್ರಾರ್ಥನೆ

Monday, May 16th, 2016
Temple Hundi

ಪೆರ್ಲ: ಪೆರ್ಲದಿಂದ ಬಜಕ್ಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ತೆರಳುವ ದಾರಿಯಲ್ಲಿರುವ ಕಾಣಿಕೆ ಡಬ್ಬಿ ಸಹಿತವಿರುವ ಶಿವಲಿಂಗಕ್ಕೆ ಕಿಡಿಗೇಡಿಗಳು ಹಸಿರು ಬಣ್ಣ ಬಳಿದಿರುವುದಲ್ಲದೆ ಅದು ಬಿಜೆಪಿ ಕಾರ್ಯಕರ್ತರು ಮಾಡಿದ ಕೃತ್ಯವೆಂದೂ, ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದಾಗಿಯೂ ಅಂತರ್ಜಾಲದಲ್ಲಿ ಸುಳ್ಳು ಪ್ರಚಾರ ಹಬ್ಬಿಸಿದವರ ವಿರುಧ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನೈಜ ಆರೋಪಿಗಳ ಪತ್ತೆಗಾಗಿ ಆದಿತ್ಯವಾರ ವಿಶೇಷ ಪ್ರಾರ್ಥನೆ ನಡೆಯಿತು. ಈ ಆರೋಪ ಮತ್ತು ಕಿಡಿಗೇಡಿಗಳ ಕೃತ್ಯವನ್ನು ಜಾಗೃತ ಹಿಂದೂ ಬಾಂಧವರು ಪೆರ್ಲ ಘಟಕ ಖಂಡಿಸಿದೆ. ಪೆರ್ಲ ಪೇಟೆಯಲ್ಲಿ ಬಜಕೂಡ್ಲು ಶ್ರೀ ಮಹಾಲಿಂಶ್ವರ […]

ಹಜ್‌ಯಾತ್ರೆಯ ಮೊದಲ ತಂಡ ಮಂಗಳೂರಿಗೆ ವಪಾಸ್

Tuesday, September 29th, 2015
Haj pilgrims

ಮಂಗಳೂರು : ಹಜ್‌ ನಿರ್ವಹಣಾ ಸಮಿತಿ ಮಂಗಳೂರು ಇದರ ವತಿಯಿಂದ ಪವಿತ್ರ ಹಜ್‌ಯಾತ್ರೆ ಕೈಗೊಂಡಿದ್ದ ಕರ್ನಾಟಕದ ಹಜ್ ಯಾತ್ರಾರ್ಥಿಗಳ ಮೊದಲ ತಂಡ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಸೋಮವಾರ ಆಗಮಿಸಿತು. ದ.ಕನ್ನಡ, ಉಡುಪಿ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 666 ಮಂದಿ ಹಜ್‌ಯಾತ್ರೆ ಕೈಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕುಟುಂಬದ ಸದಸ್ಯರು ಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಸತಿ, ಊಟ, ಪ್ರಯಾಣದ ವ್ಯವಸ್ಥೆ ಉತ್ತಮವಾಗಿತ್ತು. ಮಂಗಳೂರು ಹಜ್‌ ನಿರ್ವಹಣಾ ಸಮಿತಿ ನಮ್ಮ ಬಗ್ಗೆ ಹೆಚ್ಚಿನ ಕಾಳಜಿ […]